ಬೆಂಗಳೂರು: ಬೇಸಿಗೆ ಚಾಲ್ತಿಯಲ್ಲಿರುವಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಬ್ಯಾಕ್ ಟು ಬ್ಯಾಕ್ ಭರ್ಜರಿ ಮಳೆಯಾಗಿದೆ. ಬ್ಯಾಕ್ ಟು ಬ್ಯಾಕ್ ಅವಾಂತರವನ್ನೂ ಸೃಷ್ಟಿಸಿದೆ. ಬ್ಯಾಕ್ ಟು ಬ್ಯಾಕ್ ಎರಡು ಕಡೆ ರಸ್ತೆ ಕುಸಿತಗಳೂ ಸಂಭಸಿವೆ.
ನಿನ್ನೆ ರಾತ್ರೋರಾತ್ರಿ ಒಂದೇ ಸಮನೆ ಮಳೆಯಾಗಿದ್ದು, ವಾರ್ಡ್ ನಂಬರ್ 103 ಪಟ್ಟೇಗಾರನಪಾಳ್ಯದಲ್ಲಿ ರಸ್ತೆ ಕುಸಿದಿದೆ. ಇದು ಸ್ಥಳೀಯರನ್ನು ಆತಂಕಕ್ಕೆ ದೂಡಿದೆ. ಇಂದು ಬೆಳಗ್ಗೆ ಸಚಿವ ಸೋಮಣ್ಣ ತಮ್ಮ ಕ್ಷೇತ್ರ ವ್ಯಾಪ್ತಿಯ ಪಟ್ಟೇಗಾರದ ರಸ್ತೆ ಕುಸಿದ ಸ್ಥಳಕ್ಕೆ ಭೇಟಿ ನೀಡಿದ್ದರು.
ರಸ್ತೆ ಕುಸಿದ ದೃಶ್ಯಗಳನ್ನು ಪರಿಶೀಲನೆ ಮಾಡಿದ ಸಚಿವರು, ಬಳಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇವತ್ತಿನಿಂದಲೇ ರೋಡಿನ ಕೆಲಸ ಶುರು ಮಾಡುವಂತೆ ಸೂಚನೆ ನೀಡಿದರು. ಇನ್ನು, ವಾರ್ಡ್ ನಂಬರ್ 103 ಕಾರ್ಪೋರೆಟರ್ ಪಲ್ಲವಿ ಚೆನ್ನಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ವಿ.ಸೋಮಣ್ಣ ಕೂಡಲೇ ರಸ್ತೆ ದುರಸ್ತಿ ಕಾರ್ಯಮಾಡುವಂತೆ ಆದೇಶಿಸಿದರು.