ಡಿ.ಕೆ.ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂದ ಸಲೀಂ; ಮೌನವಾಗಿ ಆಲಿಸಿರುವ ಉಗ್ರಪ್ಪ – ಟ್ವೀಟ್​ ಮಾಡಿ ಕೆಣಕಿದ ಬಿಜೆಪಿ!

KPCC president DK Shivakumar: ಕರ್ನಾಟಕ ರಾಜಕೀಯದಲ್ಲಿ ಭ್ರಷ್ಟಾಚಾರ ಎಂಬುದು ಅವ್ಯಾಹತವಾಗಿ ನಡೆದು ಬಂದಿದೆ. ಇದು ಆಡಳಿತಾರೂಢ ಮತ್ತು ವಿಪಕ್ಷಗಳು ಎಂಬ ಬೇಧ ಭಾವ ಇಲ್ಲದೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಸಲೀಂ-ಉಗ್ರಪ್ಪ ನಡುವಣ ಮಾತುಗಳು ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಇದಕ್ಕೆ ಆಡಳಿತಾರೂಢ ಬಿಜೆಪಿ ಪಕ್ಷ ಉಗ್ರವಾಗಿ ಟ್ವೀಟ್​ ಮಾಡಿ, ಕೆಣಕಿದೆ.

ಡಿ.ಕೆ.ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂದ ಸಲೀಂ; ಮೌನವಾಗಿ ಆಲಿಸಿರುವ ಉಗ್ರಪ್ಪ - ಟ್ವೀಟ್​ ಮಾಡಿ ಕೆಣಕಿದ ಬಿಜೆಪಿ!
ಡಿ.ಕೆ.ಶಿವಕುಮಾರ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 16, 2021 | 11:23 AM

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಬಗ್ಗೆ ವಿ.ಎಸ್. ಉಗ್ರಪ್ಪ ಮತ್ತು ಸಲೀಂ ನಡುವಣ ಸ್ಫೋಟಕ ಮಾತುಗಳು ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಭಾರೀ ಸದ್ದು ಮಾಡತೊಡಗಿದೆ. ಡಿ.ಕೆ.ಶಿವಕುಮಾರ್ ಕಲೆಕ್ಷನ್ ಗಿರಾಕಿ. ಶಿವಕುಮಾರ್‌ರದ್ದು ದೊಡ್ಡ ಸ್ಕ್ಯಾಮ್. ಪಟ್ಟು ಹಿಡಿದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿಸಿದ್ದು ಎಂದು ಸಲೀಂ- ಉಗ್ರಪ್ಪ ನಡುವಣ ಮಾತುಗಳು ಬಹಿರಂಗವಾಗಿವೆ.

ಕರ್ನಾಟಕ ರಾಜಕೀಯದಲ್ಲಿ ಭ್ರಷ್ಟಾಚಾರ ಎಂಬುದು ಅವ್ಯಾಹತವಾಗಿ ನಡೆದು ಬಂದಿದೆ. ಇದು ಆಡಳಿತಾರೂಢ ಮತ್ತು ವಿಪಕ್ಷಗಳು ಎಂಬ ಬೇಧ ಭಾವ ಇಲ್ಲದೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಸಲೀಂ-ಉಗ್ರಪ್ಪ ನಡುವಣ ಮಾತುಗಳು ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಇದಕ್ಕೆ ಆಡಳಿತಾರೂಢ ಬಿಜೆಪಿ ಪಕ್ಷ ಉಗ್ರವಾಗಿ ಟ್ವೀಟ್​ ಮಾಡಿ, ಕೆಣಕಿದೆ.

ಕರ್ನಾಟಕ ಬಿಜೆಪಿ ಟ್ವೀಟ್​ ಸಂದೇಶದ ಸಾರಾಂಶ ಹೀಗಿದೆ:

ಕೆಪಿಸಿಸಿ ಕಚೇರಿಯಲ್ಲೇ ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷರ ಬಗ್ಗೆ ಸ್ವಪಕ್ಷೀಯರ ಗುಣಗಾನ… #ಭ್ರಷ್ಟಾಧ್ಯಕ್ಷ

ಕೆಪಿಸಿಸಿ ಕಚೇರಿಯಲ್ಲೇ ಕೆಪಿಸಿಸಿ ಅಧ್ಯಕ್ಷ @DKShivakumar ಭ್ರಷ್ಟಾಚಾರವನ್ನು @INCKarnataka ಪಕ್ಷದ ರಾಜ್ಯ ಪದಾಧಿಕಾರಿಗಳು ತೆರೆದಿಟ್ಟಿದ್ದಾರೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್‌ ಪಕ್ಷ ತವರು ಮನೆಯಾಗಿದೆ. #ಭ್ರಷ್ಟಾಧ್ಯಕ್ಷ

ಮಾನ್ಯ @DKShivakumar ಅವರೇ, ಸೀಸರ್‌ನ ಪತ್ನಿ ಅನುಮಾನಕ್ಕೆ ಅತೀತವಾಗಿರಬೇಕೆಂಬ ಮಾತಿದೆ. ಆದರೆ ಕೆಪಿಸಿಸಿ ಪಕ್ಷದ ವೇದಿಕೆಯಲ್ಲೇ ನಿಮ್ಮವರೇ ನಿಮ್ಮ ಬಗ್ಗೆ ಆಡಿರುವ ಅಧಿಕೃತ ಮಾತುಗಳ ಬಗ್ಗೆ ನೀವು ಸ್ಪಷ್ಟನೆ ನೀಡಲೇಬೇಕಲ್ಲವೇ? #ಭ್ರಷ್ಟಾಧ್ಯಕ್ಷ

ಇದನ್ನೂ ಓದಿ: ಪಟ್ಟು ಹಿಡಿದು ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ; ಡಿಕೆ ಶಿವಕುಮಾರ್​ ಬಗ್ಗೆ ಕಾಂಗ್ರೆಸ್ ನಾಯಕರ ಸ್ಫೋಟಕ ಮಾತು!

ಡಿಕೆಶಿ ಹುಡುಗರ ಬಳಿ ₹50-100 ಕೋಟಿ ಇದೆ ಎಂದ ಸಲೀಂ |Ugrappa|Tv9kannada

(saleem alleges corruption by kpcc president dk shivakumar karnataka bjp tweets)

Published On - 11:41 am, Wed, 13 October 21