ಬೆಂಗಳೂರಿನಲ್ಲಿ ಸೋಂಕಿತರನ್ನ ಸ್ಥಳಾಂತರಿಸಲು ಆ್ಯಂಬುಲೆನ್ಸ್ ಇಲ್ಲ

| Updated By: ಸಾಧು ಶ್ರೀನಾಥ್​

Updated on: Jun 22, 2020 | 7:17 AM

ಬೆಂಗಳೂರು: ನಗರದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಸೋಂಕಿತರನ್ನ ಸ್ಥಳಾಂತರಿಸಲು ಆ್ಯಂಬುಲೆನ್ಸ್ ಕೊರತೆ ಉಂಟಾಗಿದೆ. ಸಮಯಕ್ಕೆ ಆ್ಯಂಬುಲೆನ್ಸ್‌ಗಳು ಸಿಗದೆ ಅಧಿಕಾರಿಗಳು ಹೈರಾಣಾಗುತ್ತಿದ್ದಾರೆ. ಪ್ರತಿನಿತ್ಯ 4ರಿಂದ 5 ಗಂಟೆಗಳ ಕಾಲ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸೋಂಕಿತರನ್ನ ಆಸ್ಪತ್ರೆಗಳಿಗೆ ಸಾಗಿಸುವುದಕ್ಕೆ ತೀವ್ರ ಪರದಾಟ ಶುರುವಾಗಿದೆ. ಬೆಂಗಳೂರು ನಗರದಲ್ಲಿ ಒಟ್ಟು 73 ‘108’ ಆ್ಯಂಬುಲೆನ್ಸ್‌ಗಳಿವೆ. ಆದರೆ 7 ಆ್ಯಂಬುಲೆನ್ಸ್‌ಗಳು ಮಾತ್ರ ಕೊವಿಡ್ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉಳಿದಂತೆ ಆರೋಗ್ಯ ಇಲಾಖೆಗೆ ಸೇರಿದ ಆ್ಯಂಬುಲೆನ್ಸ್‌ಗಳು. ಕೇವಲ ಬಿಬಿಎಂಪಿ ಆ್ಯಂಬುಲೆನ್ಸ್‌ಗಳನ್ನ […]

ಬೆಂಗಳೂರಿನಲ್ಲಿ ಸೋಂಕಿತರನ್ನ ಸ್ಥಳಾಂತರಿಸಲು ಆ್ಯಂಬುಲೆನ್ಸ್ ಇಲ್ಲ
ರಾಜಧಾನಿ ಬೆಂಗಳೂರಿನಲ್ಲಿ ಕ್ಷಣಕ್ಷಣಕ್ಕೂ ಹೊಸ ಸಮಸ್ಯೆಗಳು ಸೃಷ್ಟಿ, ಹಣ ಕೊಟ್ರೂ ಕೊರೊನಾ ಡೆಡ್‌ಬಾಡಿಗೆ ಸಿಗ್ತಿಲ್ಲ ಮುಕ್ತಿ
Follow us on

ಬೆಂಗಳೂರು: ನಗರದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಸೋಂಕಿತರನ್ನ ಸ್ಥಳಾಂತರಿಸಲು ಆ್ಯಂಬುಲೆನ್ಸ್ ಕೊರತೆ ಉಂಟಾಗಿದೆ. ಸಮಯಕ್ಕೆ ಆ್ಯಂಬುಲೆನ್ಸ್‌ಗಳು ಸಿಗದೆ ಅಧಿಕಾರಿಗಳು ಹೈರಾಣಾಗುತ್ತಿದ್ದಾರೆ. ಪ್ರತಿನಿತ್ಯ 4ರಿಂದ 5 ಗಂಟೆಗಳ ಕಾಲ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸೋಂಕಿತರನ್ನ ಆಸ್ಪತ್ರೆಗಳಿಗೆ ಸಾಗಿಸುವುದಕ್ಕೆ ತೀವ್ರ ಪರದಾಟ ಶುರುವಾಗಿದೆ.

ಬೆಂಗಳೂರು ನಗರದಲ್ಲಿ ಒಟ್ಟು 73 ‘108’ ಆ್ಯಂಬುಲೆನ್ಸ್‌ಗಳಿವೆ. ಆದರೆ 7 ಆ್ಯಂಬುಲೆನ್ಸ್‌ಗಳು ಮಾತ್ರ ಕೊವಿಡ್ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉಳಿದಂತೆ ಆರೋಗ್ಯ ಇಲಾಖೆಗೆ ಸೇರಿದ ಆ್ಯಂಬುಲೆನ್ಸ್‌ಗಳು. ಕೇವಲ ಬಿಬಿಎಂಪಿ ಆ್ಯಂಬುಲೆನ್ಸ್‌ಗಳನ್ನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಿದ್ರೂ ಸೋಂಕಿತರ ಸ್ಥಳಾಂತರಕ್ಕೆ ಆ್ಯಂಬುಲೆನ್ಸ್ ಕೊರತೆ ಇದೆ. ಸೋಂಕಿತರನ್ನ ಸ್ಥಳಾಂತರಿಸಲು ಆ್ಯಂಬುಲೆನ್ಸ್‌ಗಳಿಲ್ಲದೆ ಸಮಸ್ಯೆಯಾಗಿದೆ.

Published On - 7:12 am, Mon, 22 June 20