ನಟ ಸೋನು ಸೂದ್ ಲೋಕೋಪಕಾರಿ ಕಾರ್ಯಕ್ಕೆ ವಿಶ್ವ ಸಂಸ್ಥೆ ಉಘೇ ಉಘೇ

ಬಹುಭಾಷಾ ನಟ ಸೋನು ಸೂದ್ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ನಟನೆಯಿಂದ ಜನರ ಮನ ಗೆದ್ದರೆ. ತಮ್ಮ ಲೋಕೋಪಕಾರಿ ಕಾರ್ಯಗಳಿಂದ ಜನರ ಮನಸಲ್ಲಿ ಮನೆ ಮಾಡಿದ್ದಾರೆ. ಸದಾ ತಮ್ಮಿಂದಾಗುವ ಸಹಾಯಗಳನ್ನು, ಉಪಕಾರಗಳನ್ನು ಮಾಡುತ್ತ ಸೃಜನಶೀಲ ಹಾಗೂ ಒಳ್ಳೆಯ ವ್ಯಕ್ತಿತ್ಯ ಹೊಂದಿರೋ ಸೋನು ಸೂದ್ ಒಬ್ಬ ರಿಯಲ್ ಹೀರೋ. ಈಗ ಇವರ ಈ ನಿಸ್ವಾರ್ಥ ಸೇವೆ ಗಮನಿಸಿ ವಿಶ್ವಸಂಸ್ಥೆ ಸೋನು ಸೂದ್​ಗೆ ಎಸ್​ಡಿಜಿ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ. ಕೊರೊನಾ ಲಾಕ್​ಡೌನ್ ವೇಳೆ ಕೆಲಸ ಕಳೆದುಕೊಂಡು ತಮ್ಮ ಊರುಗಳಿಗೂ […]

ನಟ ಸೋನು ಸೂದ್ ಲೋಕೋಪಕಾರಿ ಕಾರ್ಯಕ್ಕೆ ವಿಶ್ವ ಸಂಸ್ಥೆ ಉಘೇ ಉಘೇ

Updated on: Nov 24, 2020 | 7:42 AM

ಬಹುಭಾಷಾ ನಟ ಸೋನು ಸೂದ್ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ನಟನೆಯಿಂದ ಜನರ ಮನ ಗೆದ್ದರೆ. ತಮ್ಮ ಲೋಕೋಪಕಾರಿ ಕಾರ್ಯಗಳಿಂದ ಜನರ ಮನಸಲ್ಲಿ ಮನೆ ಮಾಡಿದ್ದಾರೆ. ಸದಾ ತಮ್ಮಿಂದಾಗುವ ಸಹಾಯಗಳನ್ನು, ಉಪಕಾರಗಳನ್ನು ಮಾಡುತ್ತ ಸೃಜನಶೀಲ ಹಾಗೂ ಒಳ್ಳೆಯ ವ್ಯಕ್ತಿತ್ಯ ಹೊಂದಿರೋ ಸೋನು ಸೂದ್ ಒಬ್ಬ ರಿಯಲ್ ಹೀರೋ. ಈಗ ಇವರ ಈ ನಿಸ್ವಾರ್ಥ ಸೇವೆ ಗಮನಿಸಿ ವಿಶ್ವಸಂಸ್ಥೆ ಸೋನು ಸೂದ್​ಗೆ ಎಸ್​ಡಿಜಿ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ.

ಕೊರೊನಾ ಲಾಕ್​ಡೌನ್ ವೇಳೆ ಕೆಲಸ ಕಳೆದುಕೊಂಡು ತಮ್ಮ ಊರುಗಳಿಗೂ ಹೋಗಲಾಗದೆ ಕೆಂಗೆಟ್ಟಿದ್ದ ಲಕ್ಷಾಂತರ ವಲಸೆ ಕಾರ್ಮಿಕರಿಗೆ ತಮ್ಮ ತಮ್ಮ ಗೂಡು ಸೇರಲು ಸೋನು ಸೂದ್ ನೆರವಾಗಿದ್ರು. ಸಾರಿಗೆ ವ್ಯವಸ್ಥೆ ಮಾಡಿ ಅವರಿಗೆ ತಮ್ಮ ಊರನ್ನು ತಲುಪಿಸಿದ್ರು. ಇವರಲ್ಲಿ ಅನೇಕರಿಗೆ ಉಚಿತವಾಗಿ ವಸತಿ ಸೌಕರ್ಯಗಳನ್ನು ಸಹ ಒದಗಿಸಿದ್ರು. ಬಡ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಲು ಸಹ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದರು. ಲಾಕ್​ಡೌನ್ ಸಮಯದಲ್ಲಿ ಸೋನು ಸೂದ್ ಅವರ ಈ ಲೋಕೋಪಕಾರಿ ಕಾರ್ಯಕ್ಕೆ ವಿಶ್ವಸಂಸ್ಥೆ ಪ್ರತಿಷ್ಠಿತ ಎಸ್​ಡಿಜಿ ಪ್ರಶಸ್ತಿ ನೀಡಿ ಸನ್ಮಾನಿಸಿದೆ.

ಇದನ್ನೂ ಓದಿ: ತರಕಾರಿ ಮಾರುತ್ತಿದ್ದ ಟೆಕ್ಕಿ ಯುವತಿಗೆ ಕರೆದು ಕೆಲಸ ಕೊಟ್ಟ ಸೋನು ಸೂದ್ The Real Hero

ದೊಡ್ಡ ಮಾನ್ಯತೆ ಸಿಕ್ಕಿದೆ ಎಂದು ಸೋನು ಸೂದ್ ಸಂತೋಷ
ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ನಟ ಸೋನು ಸೂದ್​ಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸೋನು ಸೂದ್ ಈಗ ಏಂಜಲೀನಾ ಜೋಲೀ, ಡೇವಿಡ್ ಬೆಕ್ಹ್ಯಾಮ್, ಲಿಯೊನಾರ್ಡೊ ಡಿಕಾಪ್ರಿಯೊ, ಎಮ್ಮಾ ವ್ಯಾಟ್ಸನ್, ಲಿಯಾಮ್ ನೀಸನ್, ಕೇಟ್ ಬ್ಲಾಂಚೆಟ್, ಆಂಟೋನಿಯೊ ಬಾಂಡೆರಾಸ್, ನಿಕೋಲ್ ಕಿಡ್ಮನ್, ಮತ್ತು ಪ್ರಿಯಾಂಕಾ ಚೋಪ್ರಾ ಅವರ ಲೀಗ್‌ಗೆ ಸೇರ್ಪಡೆಗೊಂಡಿದ್ದಾರೆ.

ಇದು ಅಪರೂಪದ ಗೌರವ. ಯುಎನ್ ಮಾನ್ಯತೆ ಬಹಳ ವಿಶೇಷವಾಗಿದೆ. ಯಾವುದೇ ನಿರೀಕ್ಷೆಗಳಿಲ್ಲದೆ ನನ್ನ ದೇಶವಾಸಿಗಳಿಗೆ ನಾನು ಮಾಡಿದ ಸಣ್ಣ ಸಹಾಯಕ್ಕೆ ದೊಡ್ಡ ಮಾನ್ಯತೆ ಸಿಕ್ಕಿದೆ ಎಂದು ಸೋನು ಸೂದ್ ಸಂತೋಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗಣೇಶನ ಹಬ್ಬಕ್ಕೆ ‘ಸೂಪರ್​ ಹೀರೋ’ ಸೋನು ಸೂದ್​ ಏನು ಮಾಡಿದ್ದಾರೆ ನೋಡಿ?!

Published On - 1:05 pm, Wed, 30 September 20