ಕೊರೊನಾ ಕಾಟ, ಕುಡಿತಕ್ಕೆ ದಾಸನಾಗಿದ್ದ! ಮತ್ತಿನಲ್ಲಿ ಮಗಳಿಗೆ ಫೋನ್ ಮಾಡಿ ಆತ್ಮಹತ್ಯೆ ಮಾಡ್ಕೊಂಡ
ಮೈಸೂರು: ಗಂಡ ಹೆಂಡತಿ ಜಗಳ ಉಂಡು ಮಲಗೋ ವರೆಗೆ ಅಂತ ಹಿರಿಯರು ಹೇಳ್ತಾರೆ. ಆದರೆ ಇಲ್ಲೊಬ್ಬ ಪತ್ನಿಯ ಜೊತೆ ಗಲಾಟೆ ಮಾಡಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇಟಗಳ್ಳಿಯ ಬಿ.ಎಂ. ಶ್ರೀ ನಗರದಲ್ಲಿ ನಡೆದಿದೆ. ಶಿವಾನಂದ( 45 )ಮೃತ ವ್ಯಕ್ತಿ. ಟೆಂಪೋ ಟ್ರಾವೆಲರ್ ಇಟ್ಟಿದ್ದ ಶಿವಾನಂದ, ಕೊರೊನಾ ಹಿನ್ನೆಲೆಯಲ್ಲಿ ಸಂಪಾದನೆ ಇಲ್ಲದೆ ಮನೆಯಲ್ಲೇ ಕುಳಿತಿದ್ದ. ಹಾಗೂ ಮದ್ಯ ಪಾನ ಚಟಕ್ಕೆ ಸಿಲುಕಿದ್ದ. ಈ ವಿಚಾರವಾಗಿ ಪದೇ ಪದೇ ಗಂಡ ಹೆಂಡತಿ ನಡುವೆ ಗಲಾಟೆಯಾಗುತ್ತಿತ್ತು. ಹೀಗಾಗಿ ನೊಂದ […]

ಮೈಸೂರು: ಗಂಡ ಹೆಂಡತಿ ಜಗಳ ಉಂಡು ಮಲಗೋ ವರೆಗೆ ಅಂತ ಹಿರಿಯರು ಹೇಳ್ತಾರೆ. ಆದರೆ ಇಲ್ಲೊಬ್ಬ ಪತ್ನಿಯ ಜೊತೆ ಗಲಾಟೆ ಮಾಡಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇಟಗಳ್ಳಿಯ ಬಿ.ಎಂ. ಶ್ರೀ ನಗರದಲ್ಲಿ ನಡೆದಿದೆ. ಶಿವಾನಂದ( 45 )ಮೃತ ವ್ಯಕ್ತಿ.
ಟೆಂಪೋ ಟ್ರಾವೆಲರ್ ಇಟ್ಟಿದ್ದ ಶಿವಾನಂದ, ಕೊರೊನಾ ಹಿನ್ನೆಲೆಯಲ್ಲಿ ಸಂಪಾದನೆ ಇಲ್ಲದೆ ಮನೆಯಲ್ಲೇ ಕುಳಿತಿದ್ದ. ಹಾಗೂ ಮದ್ಯ ಪಾನ ಚಟಕ್ಕೆ ಸಿಲುಕಿದ್ದ. ಈ ವಿಚಾರವಾಗಿ ಪದೇ ಪದೇ ಗಂಡ ಹೆಂಡತಿ ನಡುವೆ ಗಲಾಟೆಯಾಗುತ್ತಿತ್ತು. ಹೀಗಾಗಿ ನೊಂದ ಪತಿ ಮೇಟಗಳ್ಳಿಯ ಗ್ಯಾಸ್ ಗೋದಾಮು ಬಳಿ ನಿರ್ಮಾಣ ಹಂತದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಸಾಯುವ ಮುನ್ನ ಮಗಳ ಮೊಬೈಲ್ಗೆ ಫೋನ್ ಮಾಡಿ ಸಾಯುತ್ತಿರುವುದಾಗಿ ತಿಳಿಸಿದ್ದ.
ಆದರೆ ಕುಡಿದ ಅಮಲಿನಲ್ಲಿ ಆಗಾಗ ಹೀಗೆ ಬೆದರಿಸುತ್ತಿದ್ದದ್ದು ಸಾಮಾನ್ಯವಾಗಿತ್ತು. ಹೀಗಾಗಿ ಯಾರೂ ತಲೆ ಕೆಡಿಸಿಕೊಂಡಿಲ್ಲ. ಇದೂ ಕೂಡ ಸಹಜವಾದ ಬೆದರಿಕೆ ಎಂದು ಪತ್ನಿ ಮಣಿ ಸುಮ್ಮನಾಗಿದ್ರು. ಅಲ್ಲದೆ ಈ ಹಿಂದೆಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ನಿನ್ನೆ ಯಮ ನಿಜವಾಗಿಯೇ ಅವನ ದೇಹದಿಂದ ಆತ್ಮವನ್ನು ಬೇರ್ಪಡಿಸಿದ್ದಾರೆ. ಕುಡಿದ ಅಮಲಿನಲ್ಲಿ ಶಿವಾನಂದ ನೇಣಿಗೆ ಶರಣಾಗಿದ್ದಾನೆ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.