ಇಬ್ಬರು ನಿವೃತ್ತ ತಹಶೀಲ್ದಾರ್ ಮನೆಗಳ ಮೇಲೆ ACB ರೇಡ್, ಯಾಕೆ ಗೊತ್ತಾ?
ಬೆಂಗಳೂರು: ಇಬ್ಬರು ನಿವೃತ್ತ ವಿಶೇಷ ತಹಶೀಲ್ದಾರ್ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದೆ. ಬೆಂಗಳೂರು ಉತ್ತರ ತಾಲೂಕಿನ ನಿವೃತ್ತ ವಿಶೇಷ ತಹಶೀಲ್ದಾರ್ ಬಿ.ಆರ್.ನಾಗರಾಜ್ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದೆ. ಹಾಗೂ ಯಲಹಂಕ ಕಚೇರಿ ರೆಕಾರ್ಡ್ ರೂಂ ವಿಷಯ ನಿರ್ವಾಹಕ ಮಂಜುನಾಥ್ ಮನೆಯ ಮೇಲೂ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಪ್ರತ್ಯೇಕ ಮೂರು ತಂಡಗಳಾಗಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಯಲಹಂಕ ತಾಲೂಕಿನ ಹುಣಸೆಮಾರನಹಳ್ಳಿ ಗ್ರಾಮದ ಸರ್ವೇ ನಂ.184 ರಲ್ಲಿ 4 ಎಕರೆ ಸರ್ಕಾರಿ […]

ಬೆಂಗಳೂರು: ಇಬ್ಬರು ನಿವೃತ್ತ ವಿಶೇಷ ತಹಶೀಲ್ದಾರ್ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದೆ. ಬೆಂಗಳೂರು ಉತ್ತರ ತಾಲೂಕಿನ ನಿವೃತ್ತ ವಿಶೇಷ ತಹಶೀಲ್ದಾರ್ ಬಿ.ಆರ್.ನಾಗರಾಜ್ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದೆ. ಹಾಗೂ ಯಲಹಂಕ ಕಚೇರಿ ರೆಕಾರ್ಡ್ ರೂಂ ವಿಷಯ ನಿರ್ವಾಹಕ ಮಂಜುನಾಥ್ ಮನೆಯ ಮೇಲೂ ಅಧಿಕಾರಿಗಳು ರೇಡ್ ಮಾಡಿದ್ದಾರೆ.
ಪ್ರತ್ಯೇಕ ಮೂರು ತಂಡಗಳಾಗಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಯಲಹಂಕ ತಾಲೂಕಿನ ಹುಣಸೆಮಾರನಹಳ್ಳಿ ಗ್ರಾಮದ ಸರ್ವೇ ನಂ.184 ರಲ್ಲಿ 4 ಎಕರೆ ಸರ್ಕಾರಿ ಜಮೀನಿನ ಖಾತೆಯನ್ನು ಖಾಸಗಿಯವರಿಗೆ ಬದಲಾವಣೆ ಮಾಡಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ರು. ಈ ಸಂಬಂಧ ಆರೋಪಿಗಳ ವಿರುದ್ಧ FIR ದಾಖಲಾಗಿತ್ತು. ಹೀಗಾಗಿ ಈಗ ಎಸಿಬಿ ದಾಳಿ ನಡೆಸಿದೆ
Published On - 2:28 pm, Wed, 30 September 20




