AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ, ಮುಸ್ಲಿಂ ಮತ್ತು ಅಂಬೇಡ್ಕರ್ ಹೆಸರಿನಲ್ಲಿ ತೇಜಸ್ವಿ ಸೂರ್ಯ-ಪ್ರಿಯಾಂಕ್ ಖರ್ಗೆ ಟ್ವಿಟರ್ ವಾರ್

ಕಾಂಗ್ರೆಸ್ ನಾಯಕ ಪ್ರಿಯಾಂಕ್​ ಖರ್ಗೆ ಮತ್ತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನಡುವೆ ಅಂಬೇಡ್ಕರ್​ ವಿಚಾರಧಾರೆ, ಮುಸ್ಲಿಮರು ಮತ್ತು ಹಿಂದೂ ಧರ್ಮದ ಬಗ್ಗೆ ಟ್ವಿಟರ್​​ನಲ್ಲಿ ವಾಗ್ವಾದ ನಡೆದಿದೆ. Riddles in Hinduism ಪುಸ್ತಕವೂ ಇವರ ವಾಗ್ವಾದದಲ್ಲಿ ಪ್ರಸ್ತಾಪವಾಗಿದೆ.

ಹಿಂದೂ, ಮುಸ್ಲಿಂ ಮತ್ತು ಅಂಬೇಡ್ಕರ್ ಹೆಸರಿನಲ್ಲಿ ತೇಜಸ್ವಿ ಸೂರ್ಯ-ಪ್ರಿಯಾಂಕ್ ಖರ್ಗೆ ಟ್ವಿಟರ್ ವಾರ್
ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ
TV9 Web
| Updated By: ganapathi bhat|

Updated on:Apr 06, 2022 | 8:57 PM

Share

ಬೆಂಗಳೂರು: ಕಾಂಗ್ರೆಸ್ ನಾಯಕ ಪ್ರಿಯಾಂಕ್​ ಖರ್ಗೆ ಮತ್ತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನಡುವೆ ಅಂಬೇಡ್ಕರ್​ ವಿಚಾರಧಾರೆ, ಮುಸ್ಲಿಮರು ಮತ್ತು ಹಿಂದೂ ಧರ್ಮದ ಬಗ್ಗೆ ಟ್ವಿಟರ್​​ನಲ್ಲಿ ವಾಗ್ವಾದ ನಡೆದಿದೆ.

ಸಮಾನತೆ ಇಲ್ಲ ಎಂಬ ಕಾರಣಕ್ಕೆ ಅಂಬೇಡ್ಕರ್ ಹಿಂದೂ ಧರ್ಮ ತ್ಯಜಿಸಿದರು. ಹಿಂದುತ್ವ ಮತ್ತು ಸಾಮಾಜಿಕ ಸಮಾನತೆಗೆ ಹೊಂದಾಣಿಕೆ ಆಗುವುದಿಲ್ಲ ಎಂಬ ಅಂಬೇಡ್ಕರ್ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ. ರಾಜಕೀಯ ಕಾರಣಕ್ಕಾಗಿ ಇತಿಹಾಸವನ್ನು ತಿರುಚುವುದು RSSಗೆ ಬೇಕಾಗಿರಬಹುದು. ಆದರೆ ಸತ್ಯ ಉಳಿಯುತ್ತದೆ ಎಂದು ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಅವರಿಗೆ ಟಾಂಗ್ ನೀಡಿದ್ದಾರೆ.

ಸರಣಿ ಟ್ವೀಟ್​ಗೆ ಏನು ಕಾರಣ? ಹೈದಾರಾಬಾದ್​ನ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿರುವ ತೇಜಸ್ವಿ ಸೂರ್ಯ, ಅಲ್ಲಿನ ಪ್ರಭಾವಿ ಮುಸ್ಲಿಂ ನಾಯಕ ಅಸಾದುದ್ದೀನ್ ಓವೈಸಿಯನ್ನು ಮೊಹಮ್ಮದ್ ಅಲಿ ಜಿನ್ನಾರ ಅವತಾರ ಎಂದಿದ್ದರು.

ಓವೈಸಿಗೆ ಬೀಳುವ ಪ್ರತಿಯೊಂದು ಮತಗಳೂ ದೇಶದ್ರೋಹಿ ಮತಗಳು ಎಂದು ಹೇಳಿಕೆ ಕೊಟ್ಟಿದ್ದರು. ಈ ಬಗ್ಗೆ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿದ್ದ ಪ್ರಿಯಾಂಕ್ ಖರ್ಗೆ, ಚುನಾವಣಾ ಪ್ರಾಧಿಕಾರದಿಂದ ಅನುಮೋದನೆ ಪಡೆದ ಪಕ್ಷಕ್ಕೆ ಮತ ಹಾಕುವುದು ದೇಶದ್ರೋಹದ ಕೆಲಸ ಹೇಗಾಗುತ್ತದೆ ಎಂದು ಕೇಳಿದ್ದರು.

ಈ ಪ್ರಶ್ನೆಗೆ ತಡವಾಗಿ ಉತ್ತರಿಸಿದ ತೇಜಸ್ವಿ ಸೂರ್ಯ, ಭಾರತದ ಸಂವಿಧಾನಕ್ಕಿಂತ ಎತ್ತರದ ಸ್ಥಾನದಲ್ಲಿ ಮುಸ್ಲಿಂ ಧಾರ್ಮಿಕ ಸಿದ್ಧಾಂತವನ್ನು ಹೇರುವುದು ದೇಶದ್ರೋಹಿ ಕೆಲಸ ಎಂದಿದ್ದಾರೆ. ಸಂವಿಧಾನಕ್ಕೆ ಇಸ್ಲಾಂ ಹೇಗೆ ವಿರೋಧಾಭಾಸ ಎಂದು ತಿಳಿಯಲು ಅಂಬೇಡ್ಕರ್ ಬರಹವನ್ನು ಓದಿಕೊಳ್ಳಿ ಎಂದಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ನಿಮ್ಮ ಟ್ವಿಟರ್ ಖಾತೆ ನಿರ್ವಾಹಕರು ಅಂಬೇಡ್ಕರ್ ಬಗ್ಗೆ ಓದಿದ್ದಾರೆ ಎಂದು ತಿಳಿದು ಸಂತೋಷವಾಯ್ತು ಎಂದು ವ್ಯಂಗ್ಯವಾಡಿದ್ದರು. ಅಂಬೇಡ್ಕರ್ ಯಾವುದೇ ವಿಧದ ಮತಾಂಧತೆಯ ವಿರೋಧಿ ಆಗಿದ್ದರು. ಅಂಬೇಡ್ಕರ್ ಬರೆದಿರುವ Riddles in Hinduism ಪುಸ್ತಕವನ್ನು ಕೊಡುತ್ತೇನೆ. ನೀವು ಮತ್ತು ನಿಮ್ಮ ಜಾಲತಾಣ ನಿರ್ವಾಹಕರ ತಂಡ ಅದನ್ನು ಓದಿಕೊಳ್ಳಿ ಎಂದು ಹೇಳಿ. ಅಭಿವೃದ್ಧಿಯ ಹೆಸರಲ್ಲಿ ವೋಟ್ ಗೆಲ್ಲುವುದು ನಿಮಗೆ ಬೇಕಿಲ್ಲವೇನೊ? ಎಂದು ಟೀಕಿಸಿದ್ದರು.

ಶ್ರೀಮಂತ ರಾಜಕಾರಣಿಗಳ ಮಕ್ಕಳಂತೆ ನಾನಲ್ಲ! ಇತರ ಶ್ರೀಮಂತ ರಾಜಕಾರಣಿಗಳ ಮಕ್ಕಳಂತೆ ನನಗೆ ಸಾಮಾಜಿಕ ಜಾಲತಾಣ ನಿರ್ವಾಹಕರಿಲ್ಲ ಎಂದು ಖರ್ಗೆಗೆ ಮರು ಏಟು ಕೊಟ್ಟಿರುವ ತೇಜಸ್ವಿ ಸೂರ್ಯ, ನನ್ನ ಟ್ವಿಟರ್ ಖಾತೆಯನ್ನು ನಾನೇ ನೋಡಿಕೊಳ್ಳುತ್ತೇನೆ. ನನ್ನ ಟ್ವೀಟ್​ಗಳನ್ನು ನಾನೇ ಬರೆದುಕೊಳ್ಳುತ್ತೇನೆ. ಅಷ್ಟು ಶಿಕ್ಷಣ ನಾನು ಪಡೆದಿದ್ದೇನೆ ಎಂದಿದ್ದಾರೆ. ಅಂಬೇಡ್ಕರ್ ಅವರು ಮುಸ್ಲಿಂ ಸಹೋದರತ್ವದ ಬಗ್ಗೆ ಬರೆದಿರುವ ಸಾಲನ್ನು ಹಂಚಿಕೊಂಡಿದ್ದರು.

Published On - 5:43 pm, Wed, 25 November 20