ದುಡ್ಡು ಕೊಟ್ಟು ಫಾಲೋ ಮಾಡಿ.. ಸೂಪರ್​ ಫಾಲೋಸ್​​ ಎಂಬ ಹೊಸ ಸೌಲಭ್ಯ ಪರಿಚಯಿಸಿದ ಟ್ವಿಟರ್​

Twitter: ಹಣ ಕೊಟ್ಟು ಫಾಲೋ ಮಾಡುವ ಸೌಲಭ್ಯಕ್ಕೆ ಸೂಪರ್​ ಫಾಲೋಸ್ (Super Follows)​ ಎಂದು ಹೆಸರಿಡಲಾಗಿದ್ದು, ಫಾಲೋವರ್ಸ್​ಗಳಿಂದ ಹಣ ಪಡೆದು ಅವರಿಗೆ ಹೆಚ್ಚಿನ ಮಾಹಿತಿ ನೀಡಬಹುದಾಗಿದೆ. ಈ ಸೌಲಭ್ಯದ ಮೂಲಕ ತಾಜಾ ಸುದ್ದಿ ನೀಡುವ ಮಾಧ್ಯಮಗಳು, ಜನಪ್ರಿಯ ವ್ಯಕ್ತಿಗಳು ತಾವು ನೀಡುವ ಮಾಹಿತಿಗೆ ಹಣ ಪಡೆಯಬಹುದಾಗಿದೆ.

ದುಡ್ಡು ಕೊಟ್ಟು ಫಾಲೋ ಮಾಡಿ.. ಸೂಪರ್​ ಫಾಲೋಸ್​​ ಎಂಬ ಹೊಸ ಸೌಲಭ್ಯ ಪರಿಚಯಿಸಿದ ಟ್ವಿಟರ್​
ಸಂಗ್ರಹ ಚಿತ್ರ
Follow us
| Edited By: Rajesh Duggumane

Updated on: Feb 26, 2021 | 4:24 PM

ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್ (Twitter) ತನ್ನ ಬಳಕೆದಾರರಿಗೆ ಹೊಸ ಸೌಲಭ್ಯಗಳನ್ನು ನೀಡುವುದಾಗಿ ಘೋಷಿಸಿದೆ. ನೂತನ ಸೌಲಭ್ಯಗಳಡಿಯಲ್ಲಿ ಟ್ವಿಟರ್​ ಅಕೌಂಟ್​ ಹೊಂದಿರುವವರು ತಾವು ಹಾಕುವ ನಿರ್ದಿಷ್ಟ ಪೋಸ್ಟ್​ಗಳಿಗೆ ಫಾಲೋವರ್ಸ್​ಗಳಿಂದ ಹಣ ಪಡೆಯಬಹುದಾಗಿದೆ ಮತ್ತು ಆಸಕ್ತಿಗೆ ಅನುಗುಣವಾಗಿ ಒಂದಷ್ಟು ಜನರನ್ನು ಸೇರಿಸಿಕೊಂಡು ಗ್ರೂಪ್​ ಮಾಡಿಕೊಳ್ಳುವ ಅವಕಾಶವೂ ಸಿಗಲಿದೆ. ಇತ್ತೀಚಿನ ದಿನಗಳಲ್ಲಿ ಟ್ವಿಟರ್​ನಲ್ಲಾಗುತ್ತಿರುವ ಮಹತ್ತರ ಬದಲಾವಣೆಗಳು ಇವಾಗಿದ್ದು, ಬೇರೆ ಸಾಮಾಜಿಕ ಮಾಧ್ಯಮಗಳ ಜೊತೆಗೆ ಸ್ಪರ್ಧೆ ಮಾಡಲು ಈ ಸೌಲಭ್ಯಗಳು ಸಹಕಾರಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹಣ ಕೊಟ್ಟು ಫಾಲೋ ಮಾಡುವ ಸೌಲಭ್ಯಕ್ಕೆ ಸೂಪರ್​ ಫಾಲೋಸ್ (Super Follows)​ ಎಂದು ಹೆಸರಿಡಲಾಗಿದ್ದು, ಫಾಲೋವರ್ಸ್​ಗಳಿಂದ ಹಣ ಪಡೆದು ಅವರಿಗೆ ಹೆಚ್ಚಿನ ಮಾಹಿತಿ ನೀಡಬಹುದಾಗಿದೆ. ಈ ಸೌಲಭ್ಯದ ಮೂಲಕ ತಾಜಾ ಸುದ್ದಿ ನೀಡುವ ಮಾಧ್ಯಮಗಳು, ಜನಪ್ರಿಯ ವ್ಯಕ್ತಿಗಳು ತಾವು ನೀಡುವ ಮಾಹಿತಿಗೆ ನಿರ್ದಿಷ್ಟ ಮೊತ್ತದ ಹಣ ಪಡೆಯಬಹುದಾಗಿದೆ. ಟ್ವಿಟರ್​ ತನ್ನ ಈ ಸೌಲಭ್ಯಗಳ ಬಗ್ಗೆ ಸ್ಕ್ರೀನ್​ಶಾಟ್ ಹಂಚಿಕೊಂಡಿದ್ದು ಬಳಕೆದಾರರಲ್ಲಿ ಕುತೂಹಲ ಹುಟ್ಟುಹಾಕಿದೆ.

ಸಾಮಾಜಿಕ ಜಾಲತಾಣಗಳ ಬಳಕೆ ಮಹತ್ವ ಪಡೆದುಕೊಂಡಿರುವ ಈ ಕಾಲಘಟ್ಟದಲ್ಲಿ ಈ ರೀತಿಯ ಸೌಲಭ್ಯಗಳನ್ನು ನೀಡುವುದು ಹೆಚ್ಚಿನ ಫಾಲೋವರ್ಸ್​ ಹೊಂದಿರುವವರಿಗೆ ಹಾಗೂ ಜನಪ್ರಿಯ ಮಾಧ್ಯಮ ಸಂಸ್ಥೆಗಳಿಗೆ ತುಸು ಲಾಭದಾಯಕವೇ ಆಗಲಿದ್ದು, Pateron, Facebook, YouTube ಹಾದಿಯಲ್ಲೇ ಮೈಕ್ರೋಬ್ಲಾಗಿಂಗ್ ಆ್ಯಪ್​ ಟ್ವಿಟರ್​ ಕೂಡ ಸಾಗುತ್ತಿರುವುದು ಈ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗಳಿಗೆ ಕಾರಣವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಟ್ವಿಟರ್​ ಪರಿಚಯಿಸಿರುವ ಇನ್ನೊಂದು ಸೌಲಭ್ಯ ಕಮ್ಯುನಿಟೀಸ್​ ಸಹ ಫೇಸ್​ಬುಕ್​ ಗ್ರೂಪ್​ಗಳ ರೀತಿಯಲ್ಲೇ ಕಾರ್ಯ ನಿರ್ವಹಿಸಲಿದ್ದು, ಸಮಾನ ಮನಸ್ಕರೆಲ್ಲರೂ ಒಂದು ವೇದಿಕೆಯಲ್ಲಿ ಸಕ್ರಿಯರಾಗಿರುವುದಕ್ಕೆ ಸಹಕಾರಿಯಾಗಲಿದೆ. ತಮ್ಮ ಆಸಕ್ತಿಗೆ ಸಂಬಂಧಿಸಿದ ಹೆಚ್ಚಿನ ಟ್ವೀಟ್​ಗಳು ಒಂದೆಡೆ ಸಿಗುವುದರಿಂದ ಇದು ಟ್ವಿಟರ್​ ಬಳಕೆದಾರರಿಗೆ ಅನುಕೂಲಕರವಾಗಲಿದೆ ಎನ್ನಲಾಗಿದೆ. ಸದ್ಯ ಈ ಎರಡೂ ಫೀಚರ್​ಗಳು ಬಳಕೆದಾರರಿಗೆ ಯಾವಾಗ ಸಿಗಲಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲವಾದರೂ ಬಳಕೆದಾರರ ಕುತೂಹಲ ಹೆಚ್ಚಿಸಿರುವುದಂತೂ ನಿಜ.

ಇದನ್ನೂ ಓದಿ: ಇನ್ಮುಂದೆ ಡಾರ್ಕ್​ ಮೋಡ್​​ನಲ್ಲೂ ಲಭ್ಯ ಗೂಗಲ್​ ಮ್ಯಾಪ್​; ಆ್ಯಂಡ್ರಾಯ್ಡ್​ ಮೊಬೈಲ್​​ನಲ್ಲಿ ಸಿಂಪಲ್​ ಆಗಿ ಸೆಟ್ಟಿಂಗ್ಸ್​​ ಬದಲಿಸಿಕೊಂಡರೆ ಆಯಿತು

ಸೋಷಿಯಲ್ ಮೀಡಿಯಾ, ಒಟಿಟಿ, ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ನಿಯಮ: ನೀವು ತಿಳಿಯಬೇಕಾದ 10 ಅಂಶಗಳು

ತಾಜಾ ಸುದ್ದಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ