ವಿದ್ಯುತ್ ದುರಸ್ತಿ ವೇಳೆ ಅವಘಡ: ತೋಟದ ಮಾಲೀಕನ ಮಾತು ಕೇಳಿ ಕಂಬವೇರಿದ ಯುವಕ ಕರೆಂಟ್ ಶಾಕ್ಗೆ ಬಲಿ
ತೋಟಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಯುವಕನನ್ನು ತೋಟದ ಮಾಲೀಕ ದುರಸ್ತಿಗೆ ಬಳಿಸಿಕೊಂಡಿದ್ದನು. ಈ ವೇಳೆ ಕಂಬದಲ್ಲಿ ವಿದ್ಯುತ್ ಹರಿದ ಪರಿಣಾಮದಿಂದಾಗಿ ಯುವಕ ಕಂಬದ ಮೇಲೆಯೆ ಸಾವನ್ನಪ್ಪಿದ್ದಾನೆ.

ಶಿವಮೊಗ್ಗ: ವಿದ್ಯುತ್ ಕಂಬವೇರಿ ಲೈನ್ ದುರಸ್ತಿ ಮಾಡುವ ವೇಳೆ ವಿದ್ಯುತ್ ಹರಿದು ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭದ್ರಾವತಿ ತಾಲೂಕಿನ ಕಾಕನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಸಂತೋಷ್ (19) ಈ ಅವಘಡದಲ್ಲಿ ಸಾವನ್ನಪ್ಪಿರುವ ಯುವಕನಾಗಿದ್ದಾನೆ. ತೋಟಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಯುವಕನನ್ನು ತೋಟದ ಮಾಲೀಕ ದುರಸ್ತಿಗೆ ಬಳಿಸಿಕೊಂಡಿದ್ದನು. ಈ ವೇಳೆ ಕಂಬದಲ್ಲಿ ವಿದ್ಯುತ್ ಹರಿದ ಪರಿಣಾಮದಿಂದಾಗಿ ಯುವಕ ಕಂಬದ ಮೇಲೆಯೆ ಸಾವನ್ನಪ್ಪಿದ್ದಾನೆ.
ಮಗನ ಸಾವಿನಿಂದ ಕುಟುಂಬಸ್ಥರು ಆಕ್ರೋಶ ಹೊರಹಾಕುತ್ತಿದ್ದು, ತೋಟದ ಮಾಲೀಕನ ವಿರುದ್ದ ಕ್ರಮಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಭದ್ರಾವತಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಂಬದಲ್ಲಿ ನೇತಾಡುತ್ತಿರುವ ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.