ಪಾಕಿಸ್ತಾನದ ಈ ‘ಪಿತಾಮಹಾನ್’ ರವಿವಾರದಂದು ತನ್ನ 60ನೇ ಮಗುವಿಗೆ ತಂದೆಯಾಗಿದ್ದಾನೆ!

‘ಅಲ್ಲಯ್ಯ ಪ್ರಭೃತಿ ಅಷ್ಟೆಲ್ಲ ಮಕ್ಕಳನ್ನು ಹುಟ್ಟಿಸಿದ್ದಿಯಾ ಅವರೆಲ್ಲರ ಹೆಸರು ನಿಂಗೆ ನೆನಪಿರುತ್ತಾ,’ ಅಂತ ಕೇಳಿದರೆ ‘ಯಾಕಿಲ್ಲ?’ ಅನ್ನುತ್ತಾ ಅಷ್ಟೂ ಜನರ ಹೆಸರು ಹೇಳುತ್ತಾನೆ!

ಪಾಕಿಸ್ತಾನದ ಈ ‘ಪಿತಾಮಹಾನ್’ ರವಿವಾರದಂದು ತನ್ನ 60ನೇ ಮಗುವಿಗೆ ತಂದೆಯಾಗಿದ್ದಾನೆ!
60ರ ಪೈಕಿ 13 ಮಕ್ಕಳೊಂದಿಗೆ ಸರ್ದಾರ್ ಜಾನ್ ಮೊಹಮ್ಮದ್ ಖಾನ್ ಖಿಲ್ಜಿ Image Credit source: Yahoo News
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jan 05, 2023 | 4:49 PM

ಕ್ವೆಟ್ಟಾ (ಪಾಕಿಸ್ತಾನ): ನೆರೆರಾಷ್ಟ್ರದ ಈ ವ್ಯಕ್ತಿ ನಮ್ಮ ದೇಶದಲ್ಲೇನಾದರೂ ಹುಟ್ಟಿದ್ದರೆ ಅವನನ್ನು ‘ಪಿತಾಮಹಾನ್’ ಅಥವಾ ‘ಮಹಾನ್ ಪಿತ’ ಅಂತ ಕರೆಯಬಹುದಿತ್ತು. ಯಾಕೆ ಗೊತ್ತಾ? ಮೊನ್ನೆ ರವಿವಾರದಂದು ಅವನು 60ನೇ ಮಗುವಿಗೆ ತಂದೆಯಾಗಿದ್ದಾನೆ! ಅಂದಹಾಗೆ ಈ ಮಹಾನ್ ಪುರುಷ ಬಲೂಚಿಸ್ತಾನದ (Baluchistan) ರಾಜಧಾನಿ ಕ್ವೆಟ್ಟಾದಲ್ಲಿ (Quetta) ವಾಸವಾಗಿದ್ದಾನೆ. ತನ್ನ 60 ಮಕ್ಕಳಲ್ಲಿ 5 ಜನ ಮರಣಿಸಿದ್ದಾರೆ ಮತ್ತು ಉಳಿದ 55 ಮಕ್ಕಳು ಜೀವಂತವಾಗಿದ್ದಾರೆ ಮತ್ತು ಆರೋಗ್ಯದಿಂದ್ದಾರೆ ಅಂತ ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಅವನು ಹೇಳಿದ್ದಾನೆ. ಅಂದಹಾಗೆ, ಈ ಮಹಾನುಭಾವನ ಹೆಸರು ಸರ್ದಾರ್ ಜಾನ್ ಮೊಹಮ್ಮದ್ ಖಾನ್ ಖಿಲ್ಜಿ (Sardar Jan Mohammad Khan Khilji).

ಐದು ಡಜನ್ ಮಕ್ಕಳಾಗಿದ್ದರೂ ಅವನು ಮಕ್ಕಳ ಸೃಷ್ಟಿ ಕಾರ್ಯಕ್ಕೆ ಅರ್ಧವಿರಾಮ, ಪೂರ್ಣವಿರಾಮವೇನೂ ಹಾಕಲ್ವಂತೆ! ದೇವರ ಚಿತ್ತವಾದರೆ ಇನ್ನೂ ಕೆಲವು ಮಕ್ಕಳನ್ನು ಹುಟ್ಟಿಸಲು ರೆಡಿಯಾಗಿರುವುದಾಗಿ ಹೇಳಿದ್ದಾನೆ. ಮಕ್ಕಳನ್ನು ಹುಟ್ಟಿಸುವ ಕೆಲಸ ಜಾರಿಯಲ್ಲಿಡಲು ಖಾನ್ ಖಿಲ್ಜಿ ನಾಲ್ಕನೇ ಬಾರಿ ಮದುವೆಯಾಗಲಿದ್ದಾನೆ!

ಇದನ್ನೂ ಓದಿ: ಭಾರತೀಯ ಮೂಲದ ಅಮೇರಿಕನ್ ಧರ್ಮೇಶ್ ಪಟೇಲ್ ಉದ್ದೇಶಪೂರ್ವಕವಾಗಿ ಕಾರನ್ನು ಪ್ರಪಾತಕ್ಕೆ ಉರುಳಿಸಿ ಹೆಂಡತಿ ಮಕ್ಕಳನ್ನು ಕೊಲ್ಲಲು ಪ್ರಯತ್ನಿಸಿದನೇ?

ಸರ್ದಾರ್ ಜಾನ್ ಮೊಹಮ್ಮದ್ ಖಾನ್ ಖಿಲ್ಜಿಗೆ ಈಗ 50ರ ವಯಸ್ಸು. ವೃತ್ತಿಯಲ್ಲಿ ವೈದ್ಯನಾಗಿರುವ ಹಾಜಿ ಜಾನ್ ಕ್ವೆಟ್ಟಾದ ಪೂರ್ವಭಾಗಕ್ಕಿರುವ ಬೈಪಾಸ್ ನಲ್ಲಿ ಕ್ಲಿನಿಕ್ ನಡೆಸುತ್ತಾ ಹತ್ತಿರದಲ್ಲೇ ಒಂದು ಮನೆ ಮಾಡಿಕೊಂಡು ವಾಸವಾಗಿದ್ದಾನೆ. ತನ್ನ 60ನೇ ಮಗು ಗಂಡು ಎಂದು ಅವನು ಸಂದರ್ಶನದಲ್ಲಿ ಹೇಳಿದ್ದು ಅದಕ್ಕೆ ಖುಷ್ಹಾಲ್ ಖಾನ್ ಅಂತ ಹೆಸರಿಟ್ಟದ್ದಾನೆ.

‘ಅಲ್ಲಯ್ಯ ಪ್ರಭೃತಿ ಅಷ್ಟೆಲ್ಲ ಮಕ್ಕಳನ್ನು ಹುಟ್ಟಿಸಿದ್ದಿಯಾ ಅವರೆಲ್ಲರ ಹೆಸರು ನಿಂಗೆ ನೆನಪಿರುತ್ತಾ,’ ಅಂತ ಕೇಳಿದರೆ ‘ಯಾಕಿಲ್ಲ?’ ಅನ್ನುತ್ತಾ ಅಷ್ಟೂ ಜನರ ಹೆಸರು ಹೇಳುತ್ತಾನೆ!

ಇದನ್ನೂ ಓದಿ:  Good News: ಹೊಸಬರಿಗೆ ಉದ್ಯೋಗಾವಕಾಶ ಭಾರತದಲ್ಲೇ ಹೆಚ್ಚು; ವಿದೇಶಗಳನ್ನು ಹಿಂದಿಕ್ಕಿದ ಭಾರತೀಯ ಕಂಪನಿಗಳು 

ನಿಮಗೆ ಪ್ರಾಯಶಃ ನೆನಪಿರಿಬಹುದು, 2050 ರ ಹೊತ್ತಿಗೆ ವಿಶ್ವದ ಜನಸಂಖ್ಯೆ ಹೆಚ್ಚಳಕ್ಕೆ ಶೇಕಡ 50 ರಷ್ಟು ಕೊಡುಗೆ ನೀಡಲಿರುವ 8 ರಾಷ್ಟ್ರಗಳ ಪೈಕಿ ಪಾಕಿಸ್ತಾನ ಕೂಡ ಒಂದಾಗಿದೆ.

ವಿಶ್ವಸಂಸ್ಥೆ ಒದಗಿಸಿರುವ ಮಾಹಿತಿ ಪ್ರಕಾರ 1960 ರಿಂದ ಜನಸಂಖ್ಯೆ ಹೆಚ್ಚಳ ಜಾಗತಿಕವಾಗಿ ಇಳಿಮುಖಗೊಳ್ಳುತ್ತಿದೆ ಮತ್ತು 2020 ರಲ್ಲಿ ಅದು ಶೇಕಡ ಒಂದಕ್ಕಿಂತ ಕಡಿಮೆ ಇತ್ತು ಆದರೆ ಪಾಕಿಸ್ತಾನದಲ್ಲಿ ಅದು ಶೇಕಡ 1.9 ರಷ್ಟಿದೆ.

ಮತ್ತಷ್ಟು ಲೈಫ್​ಸ್ಟೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On - 4:48 pm, Thu, 5 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ