ಬೇಸಿಗೆಯಲ್ಲಿ ಎಸಿ ಬಳಸುತ್ತೀರಾ?; ಕರೆಂಟ್ ಬಿಲ್ ಕಡಿಮೆ ಮಾಡಲು 5 ಸರಳ ಉಪಾಯ ಇಲ್ಲಿದೆ
ನೀವು ಬೇಸಿಗೆಯ ಸೆಖೆಯಿಂದ ಪಾರಾಗಲು ಹವಾನಿಯಂತ್ರಣವನ್ನು ಬಳಸುವುದಾದರೆ ತಿಂಗಳ ಕೊನೆಯಲ್ಲಿ ಹೆಚ್ಚಿನ ಎಸಿ ಬಿಲ್ ತೆರಬೇಕಾಗುತ್ತದೆ ಎಂಬ ಭಯ ನಿಮ್ಮನ್ನು ಕಾಡುತ್ತಿದೆಯಾ? ಹಾಗಾದರೆ, ವಿದ್ಯುತ್ ಉಳಿಸಲು ನಾವು ನಿಮಗೆ 5 ಸರಳ ಸಲಹೆಗಳು ಇಲ್ಲಿವೆ.

ಬೇಸಿಗೆ ಶುರುವಾಗಿದೆ. ಧಗೆಯಿಂದ ರಕ್ಷಿಸಿಕೊಳ್ಳಲು ಈಗಾಗಲೇ ಫ್ಯಾನ್, ಕೂಲರ್ ಮತ್ತು ಎಸಿಗಳನ್ನು ಬಳಸಲು ಪ್ರಾರಂಭಿಸಿದ್ದೇವೆ. ಈ ಎಲೆಕ್ಟ್ರಿಕ್ ವಸ್ತುಗಳು ಅದರಲ್ಲೂ ವಿಶೇಷವಾಗಿ ಏರ್ ಕಂಡೀಷನರ್ (AC) ನಿಮ್ಮ ವಿದ್ಯುತ್ ಬಿಲ್ ಅನ್ನು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಆಧುನಿಕ ಎಸಿಗಳನ್ನು ಹಳೆಯ ತಲೆಮಾರುಗಳಿಗೆ ಹೋಲಿಸಿದರೆ ಕಡಿಮೆ ಕರೆಂಟ್ ಬಳಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಆದರೆ, ರಾತ್ರಿ-ಹಗಲು ಎಸಿ ಆನ್ ಮಾಡುವುದರಿಂದ ಹೆಚ್ಚಿನ ವಿದ್ಯುತ್ ಬಿಲ್ ಬರುತ್ತದೆ. ಬೇಸಿಗೆಯಲ್ಲಿ ಎಸಿ ಬಳಸುವುದರಿಂದ ಕರೆಂಟ್ ಬಿಲ್ ಹೆಚ್ಚಾಗದಂತೆ ಎಚ್ಚರ ವಹಿಸುವ ಸರಳ ಉಪಾಯ ಇಲ್ಲಿದೆ.
ನೀವು ಬೇಸಿಗೆಯ ಸೆಖೆಯಿಂದ ಪಾರಾಗಲು ಹವಾನಿಯಂತ್ರಣವನ್ನು ಬಳಸುವುದಾದರೆ ತಿಂಗಳ ಕೊನೆಯಲ್ಲಿ ಹೆಚ್ಚಿನ ಎಸಿ ಬಿಲ್ ತೆರಬೇಕಾಗುತ್ತದೆ ಎಂಬ ಭಯ ನಿಮ್ಮನ್ನು ಕಾಡುತ್ತಿದೆಯಾ? ಹಾಗಾದರೆ, ವಿದ್ಯುತ್ ಉಳಿಸಲು ನಾವು ನಿಮಗೆ 5 ಸರಳ ಸಲಹೆಗಳು ಇಲ್ಲಿವೆ. ಏರ್ ಕಂಡಿಷನರ್ ಬಳಸುವಾಗ ನಿಮ್ಮ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ನೀವು ಈ ಸಲಹೆಗಳನ್ನು ಪ್ರಯತ್ನಿಸಬಹುದು.
1. ಸರಿಯಾದ ತಾಪಮಾನವನ್ನು ಆರಿಸಿ: ಎಸಿ ಬಳಸುವಾಗ ಜನರು ಸಾಮಾನ್ಯವಾಗಿ AC ತಾಪಮಾನವನ್ನು 16 ಡಿಗ್ರಿ ಸೆಲ್ಸಿಯಸ್‌ಗೆ ಹೊಂದಿಸುತ್ತಾರೆ. ಇದು ಉತ್ತಮ ಕೂಲಿಂಗ್ ಅನ್ನು ನೀಡುತ್ತದೆ ಎಂದು ಭಾವಿಸುತ್ತಾರೆ. ಆದರೆ, ಅದು ಹಾಗಲ್ಲ. ನೀವು ಕನಿಷ್ಟ ತಾಪಮಾನದಲ್ಲಿ AC ಅನ್ನು ಎಂದಿಗೂ ಹೊಂದಿಸಬಾರದು. ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಪ್ರಕಾರ, ಮಾನವ ದೇಹಕ್ಕೆ ಸೂಕ್ತವಾದ ತಾಪಮಾನವು 24. ಈ ತಾಪಮಾನಕ್ಕೆ ಎಸಿಯನ್ನು ಅಡ್ಜಸ್ಟ್ ಮಾಡಿದರೆ ಕರೆಂಟ್ ಕಡಿಮೆ ಸಾಕಾಗುತ್ತದೆ.
ಆದ್ದರಿಂದ, ನೀವು ಸ್ವಲ್ಪ ವಿದ್ಯುತ್ ಉಳಿಸಲು ಬಯಸಿದರೆ, ನೀವು ಸುಮಾರು 24 AC ತಾಪಮಾನವನ್ನು ಹೊಂದಿಸಬೇಕು. ಇದು ವಿದ್ಯುತ್ ಬಿಲ್ ಮೊತ್ತವನ್ನು ಕಡಿತಗೊಳಿಸುತ್ತದೆ.
2. ಪವರ್ ಬಟನ್ ಆಫ್ ಮಾಡಿ: ಎಸಿ ಸೇರಿದಂತೆ ಎಲೆಕ್ಟ್ರಿಕ್ ಉಪಕರಣವು ಬಳಕೆಯಲ್ಲಿಲ್ಲದಿದ್ದಾಗ ಯಾವಾಗಲೂ ಪವರ್ ಸ್ವಿಚ್ ಆಫ್ ಮಾಡಬೇಕು. ಹೆಚ್ಚಿನ ಜನರು ರಿಮೋಟ್‌ನಲ್ಲಿ ಮಾತ್ರ AC ಅನ್ನು ಸ್ವಿಚ್ ಆಫ್ ಮಾಡುತ್ತಾರೆ. ಆದರೆ ಈ ರೀತಿಯಾಗ ಕಂಪ್ರೆಸರ್ ಅನ್ನು ‘ಐಡಲ್ ಲೋಡ್’ ಗೆ ಹೊಂದಿಸಿದಾಗ ಬಹಳಷ್ಟು ವಿದ್ಯುತ್ ವ್ಯರ್ಥವಾಗುತ್ತದೆ.
3. ಅತಿಯಾಗಿ ಎಸಿ ಬಳಸುವುದನ್ನು ತಪ್ಪಿಸಲು ಟೈಮರ್ ಬಳಸಿ: ನಿಮ್ಮ ವಿದ್ಯುತ್ ಬಿಲ್ ಕಡಿಮೆ ಮಾಡಲು ಒಂದು ಸ್ಮಾರ್ಟ್ ಮಾರ್ಗವೆಂದರೆ ನಿಮ್ಮ ಎಸಿಯಲ್ಲಿ ಟೈಮರ್ ಹೊಂದಿಸುವುದು. ಅದನ್ನು ಇಡೀ ದಿನ ಬಳಸುವ ಬದಲು ನಿಮಗೆ ಅಗತ್ಯವಿದ್ದಾಗ ಬಳಸಿ. ಟೈಮರ್ ಅನ್ನು 2-3 ಗಂಟೆಗಳ ಕಾಲ ಹೊಂದಿಸುವುದು ಯಾವಾಗಲೂ ಒಳ್ಳೆಯದು. ಇದು ಹವಾನಿಯಂತ್ರಣವನ್ನು ಅತಿಯಾಗಿ ಬಳಸುವುದನ್ನು ಕಡಿಮೆ ಮಾಡುತ್ತದೆ ಮತ್ತು ವಿದ್ಯುತ್ ಬಿಲ್ ಕಡಿತಗೊಳಿಸುತ್ತದೆ.
4. ಎಸಿಯನ್ನು ನಿಯಮಿತವಾಗಿ ಸರ್ವಿಸ್ ಮಾಡಿಸಿ: ನಿಮ್ಮ ಎಸಿ ಸರ್ವಿಸ್ ಮಾಡಿಸುತ್ತಿರುವುದು ಯಾವಾಗಲೂ ಒಳ್ಳೆಯದು. ಏಕೆಂದರೆ ಅದು ತಿಂಗಳುಗಳವರೆಗೆ ಬಳಕೆಯಲ್ಲಿಲ್ಲವೆಂದರೆ ಧೂಳು ಅಥವಾ ಇತರ ಕಣಗಳು ಯಂತ್ರಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ.
5. ಪ್ರತಿ ಬಾಗಿಲು ಮತ್ತು ಕಿಟಕಿಯನ್ನು ಸರಿಯಾಗಿ ಲಾಕ್ ಮಾಡಿ: ಎಸಿ ಬಳಸುವಾಗ ಯಾವುದೇ ಕಿಟಕಿಯ ಬಾಗಿಲು ಓಪನ್ ಇಲ್ಲದಂತೆ ಎಚ್ಚರ ವಹಿಸಿ. ನೀವು ಏರ್ ಕಂಡಿಷನರ್ ಅನ್ನು ಆನ್ ಮಾಡುವ ಮೊದಲು, ಕೋಣೆಯ ಪ್ರತಿಯೊಂದು ಕಿಟಕಿ, ಬಾಗಿಲು ಮುಚ್ಚಲು ಮರೆಯಬೇಡಿ. ಇದು ಕೋಣೆಯನ್ನು ತ್ವರಿತವಾಗಿ ತಂಪಾಗಿಸಲು ಸಹಾಯ ಮಾಡುತ್ತದೆ ಮತ್ತು ತಿಂಗಳ ಕೊನೆಯಲ್ಲಿ ನಿಮ್ಮ ವಿದ್ಯುತ್ ಬಿಲ್ ಅನ್ನು ಸಹ ಉಳಿಸುತ್ತದೆ.
ಇದನ್ನೂ ಓದಿ: AC: ಅಮೆಜಾನ್, ಫ್ಲಿಪ್ಕಾರ್ಟ್ನಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದೆ ಎಸಿ: ಈ ಬೇಸಿಗೆಗೆ ಇದುವೇ ಉತ್ತಮ ಆಯ್ಕೆ




