Alco-tourism: ಈ ರಾಜ್ಯದಲ್ಲಿ ಬಿಯರ್, ವಿಸ್ಕಿಯೇ ಪ್ರವಾಸಿಗರ ಫೇವರಿಟ್ ಡ್ರಿಂಕ್, ಸಮೀಕ್ಷೆ ಹೇಳಿದ್ದೇನು ಗೊತ್ತಾ?
ಆಲ್ಕೊ-ಟೂರಿಸಂ ಕುರಿತಾದ ಅಧ್ಯಯನವು ಬಿಯರ್ ಹೆಚ್ಚು ಆಧ್ಯತೆಯ ಆಲ್ಕೊಹಾಲ್‌ಯುಕ್ತ ಪಾನೀಯವಾಗಿದೆ ಎಂದು ಹೇಳಿದೆ. ಗೋವಾದಲ್ಲಿ ಹೆಚ್ಚಿನ ಪ್ರವಾಸಿಗರು ಅಂದರೆ ಶೇಕಡಾ 29% ಜನರು ಬೀಯರ್ ಸೇವನೆ ಮಾಡಲು ಇಷ್ಟ ಪಡುತ್ತಾರೆ ಎಂಬುದು ತಿಳಿದು ಬಂದಿದೆ.
ಆಲ್ಕೊ-ಟೂರಿಸಂ (Alco-tourism) ಕುರಿತಾದ ಅಧ್ಯಯನವು ಬಿಯರ್ ಹೆಚ್ಚು ಆಧ್ಯತೆಯ ಆಲ್ಕೊಹಾಲ್‌ಯುಕ್ತ ಪಾನೀಯವಾಗಿದೆ ಎಂದು ಹೇಳಿದೆ. ಗೋವಾದಲ್ಲಿ ಹೆಚ್ಚಿನ ಪ್ರವಾಸಿಗರು ಅಂದರೆ ಶೇಕಡಾ 29% ಜನರು ಬೀಯರ್ ಸೇವನೆ ಮಾಡಲು ಇಷ್ಟ ಪಡುತ್ತಾರೆ ಎಂಬುದು ತಿಳಿದು ಬಂದಿದೆ. ಗೋವಾದಲ್ಲಿ ಪ್ರವಾಸಿಗರು ವಿಸ್ಕಿಗಿಂದ ಬಿಯರ್ ಕುಡಿಯಲು ಆದ್ಯತೆ ನೀಡುತ್ತಾರೆ ಎಂದು ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ವಿಎಂ ಸಲಗಾಂವ್ಕರ್ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಶನಲ್ ಹಾಸ್ಲಿಟಾಲಿಟಿ ಎಜುಕೇಷನ್ ಮತ್ತು ಗೋವಾ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಎಡ್ಗರ್ ಡಿಸೋಜಾ ಅವರು ‘ಆಲ್ಕೋ-ಟೂರಿಸಂ ಕುರಿತಾದ ಅಧ್ಯಯನವನ್ನು ಮಾಡಿದ್ದಾರೆ, 29% ಜನರು ಬಿಯರ್ ಹೆಚ್ಚು ಆದ್ಯತೆಯ ಆಲ್ಕೊಹಾಲ್‌ಯುಕ್ತ ಪಾನಿಯವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ ಹಾಗೂ 23% ರಷ್ಟು ಜನ ವಿಸ್ಕಿ ಆದ್ಯತೆಯ ಪಾನೀಯವಾಗಿದೆ ಎಂದು ಹೇಳಿದ್ದಾರೆ.
ಗೋವಾದಲ್ಲಿ ಪಬ್‌ಗಳು(29%) ಹಾಗೂ ಬೀಚ್ ಶಾಕ್‌ಗಳಿಗೆ(17%) ಹೋಲಿಸಿದರೆ ರೆಸ್ಟೋರೆಂಟ್‌ಗಳು(28%) ಪ್ರವಾಸಿಗರ ಅಗ್ರ ಆದ್ಯತೆಯ ತಾಣವಾಗಿ ಉಳಿದಿದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಗೋವಾದ ಸ್ಥಳೀಯ ಆಲ್ಕೋಹಾಲ್‌ಯುಕ್ತ ಪಾನೀಯವಾದ ಫೆನಿ ಅಂದರೆ ಗೇರು ಹಣ್ಣಿನ ಪಾನೀಯಕ್ಕೆ ಹೆಚ್ಚು ಆದ್ಯತೆ ಸಿಗಲಿಲ್ಲ. ಏಕೆಂದರೆ ಕೇವಲ 2%ನಷ್ಟು ಜನರು ಮಾತ್ರ ಅದನ್ನು ಕುಡಿಯಲು ಬಯಸುತ್ತಾರೆ. ವೈನ್‌ನ್ನು 11%, ವೋಡ್ಕಾವನ್ನು 10% ಹಾಗೂ ರಮ್‌ನ್ನು 9% ಜನರು ಕುಡಿಯಲು ಬಯಸುತ್ತಾರೆ.
ಲಿಂಗಾವಾರು ಸಮೀಕ್ಷೆಯಲ್ಲಿ ಪುರುಷ ಪ್ರವಾಸಿಗರು ವಿಸ್ಕಿಯನ್ನು 37.9%, ಬೀಯರ್‌ನ್ನು 29.1% ಹಾಗೂ ರಮ್‌ನ್ನು 9.4%ನಷ್ಟು ಜನರು ಕುಡಿಯಲು ಆದ್ಯತೆ ನೀಡಿದರು. ಆದರೆ ಮಹಿಳಾ ಪ್ರವಾಸಿಗರಲ್ಲಿ 28.6%ನಷ್ಟು ಜನ ಬೀಯರ್ ನಂತರ 20.4%ನಷ್ಟು ಜನರು ವೈನ್ ಹಾಗೂ 13.8% ಜಷ್ಟು ಜನರು ಜಿನ್ ಪಾನೀಯಕ್ಕೆ ತಮ್ಮ ಆದ್ಯತೆ ನೀಡಿದ್ದಾರೆ.
ವಿವಿಧ ಸೆಟ್ಟಿಂಗ್‌ಗಳಲ್ಲಿ ಅಂದರೆ ಆಪ್‌ಸ್ಕೇಲ್ ಬಾರ್‌ಗಳು, ಬೀಚ್ ಶಾಕ್‌ಗಳು, ರೆಸ್ಟೋರೆಂಟ್, ಡಿಸ್ಕೋಥೆಕ್, ಹೋಟೆಲ್, ಟೇಸ್ಟಿಂಗ್ ರೂಮ್‌ಗಳು ಹಾಗೂ ಡ್ರಿಂಕ್ ಫೆಸ್ಟಿವಲ್ ಹೀಗೆ ಕೆಲವು ವಿಧದಲ್ಲಿ ಸಂಶೋಧನೆಯನ್ನು ಕೈಗೊಳ್ಳಲಾಗಿದೆ ಎಂದು ಎಡ್ಗರ್ ಡಿಸೋಜಾ ಹೇಳಿದರು.
ಸಮೀಕ್ಷೆಯ ಪ್ರಕಾರ ವಿಸ್ಕಿ, ಜಿನ್ ಬ್ರಾಂಡಿ, ರಮ್ ಮತ್ತು ವೈನ್‌ಗಳಿಗೆ ಆದ್ಯತೆ ನೀಡಿದವರು ಹೆಚ್ಚಾಗಿ ರೆಸ್ಟೋರೆಂಟ್‌ಗಳಿಗೆ ಆದ್ಯತೆ ನೀಡಿದರು. ವೋಡ್ಕಾ ಮತ್ತು ಟಕಿಲಾ ಸೇವಿಸುವವರು ಡಿಸ್ಕೋಥೆಕ್‌ಗಳು ಮತ್ತು ಕ್ಯಾರೋಕೆ ಬಾರ್‌ಗಳಿಗೆ ಆದ್ಯತೆ ನೀಡಿದರು ಹಾಗೂ ಫೆನಿ ಕುಡಿಯುವವರು ಪಬ್ ಟಾವೆರ್ನಾಗಳಿಗೆ ಆದ್ಯತೆ ನೀಡಿದರು. ಹಾಗೂ ಬಿಯರ್ ಮತ್ತು ಕಾಕ್‌ಟೇಲ್‌ಗಳನ್ನು ಇಷ್ಟಪಡುವವರು ಬೀಚ್‌ಶಾಕ್‌ಗಳಿಗೆ ತಮ್ಮ ಒಳವನ್ನು ತೋರಿದರು. ಹಾಗೂ ಲಿಕ್ಕರ್‌ಗಳ ಸೇವನೆ ಮಾಡುವವರು ವಿಶ್ರಾಂತಿ ಕೋಣೆಗೆ ಹೋಗಲು ಆದ್ಯತೆ ನೀಡಿದರು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:04 pm, Wed, 15 February 23