ಬಿಸಿ ನೀರಿನಿಂದ ಮುಖ ತೊಳೆಯುವ ಅಭ್ಯಾಸವಿದೆಯೇ? ಈ ಅಭ್ಯಾಸ ಇಂದೇ ನಿಲ್ಲಿಸಿ

ನಮ್ಮ ದಿನನಿತ್ಯದ ಅಭ್ಯಾಸಗಳು ತ್ವಚೆ, ಚರ್ಮ ಹಾಗೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಸಹಜವಾಗಿ ಎಲ್ಲರಿಗೂ ಮುಖ ತೊಳೆಯುವ ಅಭ್ಯಾಸವಿರುತ್ತದೆ, ಆ ಅಭ್ಯಾಸವು ಒಳ್ಳೆಯದೇ. ಆದರೆ ಹೆಚ್ಚಿನವರು ಬಿಸಿ ನೀರಿನಿಂದ ಮುಖ ತೊಳೆಯುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಚಳಿಗಾಲ ಹಾಗೂ ಮಳೆಗಾಲದಲ್ಲಿ ತಂಪಾದ ವಾತಾವರಣವಿರುವ ಕಾರಣ ಹೀಗಾಗಿ ಮುಖ ತೊಳೆಯಲು ಬಿಸಿ ನೀರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಬಿಸಿ ನೀರಿನಿಂದ ಮುಖವನ್ನು ತೊಳೆಯುವುದರಿಂದ ಒಳಿತಿಗಿಂತ ಕೆಡಕೇ ಹೆಚ್ಚಾಗಿರುತ್ತದೆ.

ಬಿಸಿ ನೀರಿನಿಂದ ಮುಖ ತೊಳೆಯುವ ಅಭ್ಯಾಸವಿದೆಯೇ? ಈ ಅಭ್ಯಾಸ ಇಂದೇ ನಿಲ್ಲಿಸಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 31, 2024 | 4:29 PM

ಪ್ರತಿನಿತ್ಯ ಮುಖ ತೊಳೆಯುವ ಅಭ್ಯಾಸ ಒಳ್ಳೆಯದು. ಆದರೆ ದಿನಕ್ಕೆ ಎರಡು ಬಾರಿ ಮುಖವನ್ನು ತೊಳೆಯುತ್ತಿರಬೇಕು. ಇದರಿಂದ ಮುಖದಲ್ಲಿರುವ ಧೂಳು, ಬ್ಯಾಕ್ಟೀರಿಯಾಗಳು ತೊಲಗಿ ಮುಖವು ಸ್ವಚ್ಛವಾಗುತ್ತದೆ. ಆದರೆ ಕೆಲವರಿಗೆ ಬಿಸಿ ನೀರಿನಲ್ಲಿ ಮುಖ ತೊಳೆಯುವುದಾ ಅಥವಾ ತಣ್ಣೀರಿನಲ್ಲಿ ಮುಖವನ್ನು ತೊಳೆಯುವುದು ಒಳ್ಳೆಯದಾ ಎನ್ನುವ ಗೊಂದಲಗಳಿರುತ್ತದೆ. ಈ ಗೊಂದಲ ನಡುವೆಯೇ ಹೆಚ್ಚಿನವರು ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಬಿಸಿನೀರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಈ ಬಿಸಿ ಬಿಸಿಯಾದ ನೀರಿನಲ್ಲಿ ಮುಖವನ್ನು ತೊಳೆಯುವುದರಿಂದ ಮುಖದ ಅಂದವು ಹಾಳಾಗಾಬಹುದು.

ಬಿಸಿ ನೀರಿನಿಂದ ಮುಖ ತೊಳೆದರೆ ಆಗುವ ತೊಂದರೆಗಳು

* ಬಿಸಿ ನೀರಿನಿಂದ ಮುಖವನ್ನು ತೊಳೆಯುವುದರಿಂದ ಚರ್ಮವು ನೈಸರ್ಗಿಕವಾದ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಚರ್ಮವು ಶುಷ್ಕವಾಗಿ ಒರಟಾಗಿರುವಂತೆ ಮಾಡುತ್ತದೆ. ಚರ್ಮದ ಪೋಷಣೆಯನ್ನು ಕಡಿಮೆ ಮಾಡುತ್ತದೆ.

* ಸೂಕ್ಷ್ಮ ಚರ್ಮವನ್ನು ಹೊಂದಿದವರು ಬಿಸಿ ನೀರಿನಿಂದ ಮುಖವನ್ನು ತೊಳೆದರೆ ಉರಿಯೂತ ಉಂಟಾಗಬಹುದು. ಚರ್ಮವು ಕೆಂಪಾಗಿ ಮತ್ತಷ್ಟು ಸೂಕ್ಷ್ಮವಾಗಬಹುದು.

* ಮುಖವನ್ನು ಬಿಸಿ ನೀರಿನಿಂದ ತೊಳೆಯುವುದರಿಂದ ಚರ್ಮವು ಒರಟಾಗುವುದೊಂದಿಗೆ ವಯಸ್ಸಾದಂತೆ ಕಾಣಿಸಿಕೊಳ್ಳುತ್ತದೆ. ವಯಸ್ಸು ಆಗದಂತೆ ಕಾಣಿಸಿಕೊಳ್ಳಬೇಕಾದರೆ ಉಗುರು ಬೆಚ್ಚಗಿನ ನೀರನ್ನು ಆಯ್ದುಕೊಳ್ಳುವುದು ಸೂಕ್ತ.

* ಬಿಸಿ ನೀರಿನಿಂದ ಮುಖ ತೊಳೆದರೆ ಸೋಂಕುಗಳಿಗೆ ಆಹ್ವಾನ ಕೊಟ್ಟಂತೆ. ಬ್ಯಾಕ್ಟಿರಿಯಾಗಳು ಬೆಚ್ಚಗಿನ ವಾತಾವರಣದಲ್ಲಿಯೇ ಹೆಚ್ಚು ಇರುವ ಕಾರಣ, ಚರ್ಮದಲ್ಲಿ ಸೋಂಕುಗಳು ಉಂಟಾಗಬಹುದು.

* ಬಿಸಿನೀರು ರಕ್ತನಾಳಗಳು ಹೆಚ್ಚು ಹಿಗ್ಗುವಂತೆ ಮಾಡುತ್ತದೆ, ನಿಮ್ಮ ಚರ್ಮವು ಕೆಂಪಾಗುವಂತೆ ಮಾಡಿ, ಮೊಡವೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಆರೋಗ್ಯ ಸಮಸ್ಯೆಗಳಿಗೆ ಅಮೃತ ಈ ಅಮೃತ ಬಳ್ಳಿ!

ಮುಖವನ್ನು ತೊಳೆಯುವಾಗ ಈ ಬಗ್ಗೆ ತಿಳಿದಿರಲಿ

* ತಣ್ಣನೆಯ ನೀರು ಮುಖದ ರಂಧ್ರಗಳನ್ನು ಬಿಗಿಗೊಳಿಸುವುದರಿಂದ ಹೀಗಾಗಿ ತಣ್ಣೀರನ್ನು ಆಯ್ಕೆ ಮಾಡಿಕೊಂಡರೆ ಉತ್ತಮ.

* ಮೇಕಪ್‌ ಹಾಕಿಕೊಂಡಿದ್ದರೆ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಂಡು, ಬಳಿಕ ತಣ್ಣಗಿನ ನೀರನ್ನು ಬಳಸುವುದು ಸೂಕ್ತ.

* ಮುಖದ ತೊಳೆದ ಬಳಿಕ ಮುಖವನ್ನು ಒರೆಸಿಕೊಳ್ಳುವುದು ಬಹಳ ಮುಖ್ಯ. ಮುಖದ ಚರ್ಮವು ಸೂಕ್ಷ್ಮವಾಗಿರುವುದರಿಂದ ಮೃದುವಾದ ಟವಲ್‌ನಿಂದ ಆಯ್ಕೆ ಮಾಡಿಕೊಳ್ಳಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ