Back Pain: ಬೆನ್ನು ನೋವಿಗೆ ಸ್ಪ್ರೇ, ಮುಲಾಮು ಬಳಸದೇ 10 ಸೆಕೆಂಡುಗಳಲ್ಲಿ ಪರಿಹಾರ ಕಂಡುಕೊಳ್ಳಿ
ಬೆನ್ನು ನೋವು ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಅಡ್ಡಿಯುಂಟು ಮಾಡುವುದರಿಂದ ಸಾಕಷ್ಟು ನೋವನ್ನು ಶಮನ ಮಾಡುವ ಸ್ಪ್ರೇ, ಮುಲಾಮು ಬಳಸುವುದುಂಟು. ಆದರೆ ಇನ್ನು ಮುಂದೆ ಸ್ಪ್ರೇ, ಮುಲಾಮು ಬಳಸದೇ 10 ಸೆಕೆಂಡುಗಳಲ್ಲಿ ಬೆನ್ನು ನೋವಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಬೆನ್ನು ನೋವು(Back Pain) ಈಗ ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮುತಿದೆ. ಯಾವುದೇ ವಯಸ್ಸಿನ ಭೇದವಿಲ್ಲದೆ ಚಿಕ್ಕವರಿಂದ ಹಿಡಿದು ವಯಸ್ಕರ ವರೆಗೂ ಕಾಡುವ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಒತ್ತಡದ ಜೀವನಶೈಲಿ (Stressful lifestyle). ಕೆಲಸದ ಅವಧಿಯಲ್ಲಿ ದೀರ್ಘಕಾಲದ ವರೆಗೆ ಕುಳಿತುಕೊಂಡೇ ಇರುವುದು ಬೆನ್ನು ನೋವಿಗೆ ಪ್ರಮುಖ ಕಾರಣ. ಈ ನೋವು ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಅಡ್ಡಿಯುಂಟು ಮಾಡುವುದರಿಂದ ಸಾಕಷ್ಟು ನೋವನ್ನು ಶಮನ ಮಾಡುವ ಸ್ಪ್ರೇ, ಮುಲಾಮು ಬಳಸುವುದುಂಟು. ಆದರೆ ಇನ್ನು ಮುಂದೆ ಸ್ಪ್ರೇ, ಮುಲಾಮು ಬಳಸದೇ 10 ಸೆಕೆಂಡುಗಳಲ್ಲಿ ಬೆನ್ನು ನೋವಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
10 ಸೆಕೆಂಡುಗಳಲ್ಲಿ ಬೆನ್ನು ನೋವನ್ನು ಕಡಿಮೆ ಮಾಡುವುದು ಹೇಗೆ?
10 ಸೆಕೆಂಡುಗಳಲ್ಲಿ ಸುಲಭವಾಗಿ ಬೆನ್ನುನೋವನ್ನು ನಿವಾರಿಸಲು ಮನೆಯಲ್ಲಿಯೇ ಈ ಸಿಂಪಲ್ ವ್ಯಾಯಾಮವನ್ನು ಪ್ರಯತ್ನಿಸಿ. ವಿಡಿಯೋ ಇಲ್ಲಿದೆ ನೋಡಿ:
View this post on Instagram
ವಿಡಿಯೋದಲ್ಲಿ ತೋರಿಸಿದಂತೆ ಪ್ರತೀ ದಿನ ಕೆಲವೊಂದಿಷ್ಟು ವ್ಯಾಯಾಮ ಮಾಡುವುದರಿಂದ ಬೆನ್ನು ನೋವಿನ ಸಮಸ್ಯೆ ಹಾಗೂ ಬೆನ್ನು ಬಾಗುವಿಕೆ ಮುಂತಾದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಇದಾದ ಬಳಿಕವೂ ಕೂಡ ನಿಮಗೆ ವಿಪರೀತ ಬೆನ್ನು ಸೆಳೆತ, ನೋವು ಇದ್ದರೆ ಹತ್ತಿರದ ವೈದ್ಯರನ್ನು ಸಂಪರ್ಕಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
ಬೆನ್ನುನೋವಿಗೆ ಚಿಕಿತ್ಸೆ ನೀಡುವ ಇತರ ಕೆಲವು ತಂತ್ರಗಳು:
- ನೋವು ಮತ್ತು ಊತವನ್ನು ಕಡಿಮೆ ಮಾಡಲು ಐಸ್ ಪ್ಯಾಕ್ ಅನ್ನು ಬಳಸುವುದು.
- ದಿನದಲ್ಲಿ ಕೆಲವೊಂದಿಷ್ಟು ಹೊತ್ತು ಯೋಗಭ್ಯಾಸ ಮಾಡಿ.
- ಹಾಟ್ ವಾಟರ್ ಬ್ಯಾಗ್ ಬಳಸಿ ನೋವಿನ ಜಾಗಕ್ಕೆ ಇಡಿ.
- ನೋವು ನಿವಾರಕಗಳು ಮತ್ತು ಉರಿಯೂತದ ಔಷಧವನ್ನು ಮಿತವಾಗಿ ತೆಗೆದುಕೊಳ್ಳಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: