Beat the Heat: ಸುಡುವ ಬಿಸಿಲಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು 5 ಮಾರ್ಗಗಳು ಇಲ್ಲಿವೆ

Beat the Heat: ಸುಡುವ ಬಿಸಿಲಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು 5 ಮಾರ್ಗಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ

Summer Health Tips: ಬೇಸಿಗೆಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಇಲ್ಲಿದೆ.

TV9kannada Web Team

| Edited By: Sushma Chakre

Apr 30, 2022 | 7:17 PM

ತೀವ್ರವಾದ ಶಾಖದ ಅಲೆಯು (Heatwave) ಭಾರತದ ಹೆಚ್ಚಿನ ಭಾಗಗಳನ್ನು ವ್ಯಾಪಿಸುತ್ತಿದೆ. ಮೇ ತಿಂಗಳ ಆರಂಭದಲ್ಲಿ ಬಿಸಿ ಗಾಳಿ ಇನ್ನಷ್ಟು ವಿಸ್ತರಿಸುವ ನಿರೀಕ್ಷೆಯಿದೆ. ಜನರು ಸುಡುವ ತಾಪಮಾನದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವಾಗ ತಾಪಮಾನವು ಅಪಾಯಕಾರಿ ಮಟ್ಟಕ್ಕೆ ಏರಿದೆ. ಹವಾಮಾನ ಇಲಾಖೆಯ ಪ್ರಕಾರ, ಕಳೆದ 72 ವರ್ಷಗಳಲ್ಲಿ ದೆಹಲಿಯು ಏಪ್ರಿಲ್​ನಲ್ಲಿ ಎರಡನೇ ಅತಿ ಹೆಚ್ಚು ತಾಪಮಾನವನ್ನು ದಾಖಲಿಸಿದೆ. ಇಲ್ಲಿ ಗರಿಷ್ಠ ಮಾಸಿಕ ಸರಾಸರಿ 40.2 ಡಿಗ್ರಿ ಸೆಲ್ಸಿಯಸ್ ಆಗಿದೆ. ತೀವ್ರವಾದ ಶಾಖವು ನಿರ್ಜಲೀಕರಣ, ಸೆಳೆತ, ತಲೆತಿರುಗುವಿಕೆ, ವಾಂತಿ, ತಲೆನೋವು, ಬಿಸಿಲ ಹೊಡೆತಕ್ಕೆ ಕಾರಣವಾಗಬಹುದು. ಬೇಸಿಗೆಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಇಲ್ಲಿದೆ.

1. ಹೆಚ್ಚೆಚ್ಚು ನೀರು ಕುಡಿಯಿರಿ

ನಿಯಮಿತವಾಗಿ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯಿರಿ. ವರ್ಷದ ಈ ಸಮಯದಲ್ಲಿ ನಿಮ್ಮನ್ನು ಹೈಡ್ರೀಕರಿಸಿಟ್ಟುಕೊಳ್ಳುವುದು ಬಹಳ ಮುಖ್ಯ. ಚಹಾ ಮತ್ತು ಕಾಫಿಯಂತಹ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಲಸ್ಸಿ, ಕಲ್ಲಂಗಡಿ ಜ್ಯೂಸ್, ಕಲ್ಲಂಗಡಿ ಹಣ್ಣು, ನಿಂಬೆ ಜ್ಯೂಸ್, ಕುಂಬಳಕಾಯಿಯಂತಹ ಬೇಸಿಗೆ ಕೂಲರ್‌ಗಳನ್ನು ಹೆಚ್ಚಾಗಿ ಬಳಸಿ.

2. ಆಹಾರ ಪದ್ಧತಿ ಬದಲಾಯಿಸಿ

ಹಳಸಿದ ಆಹಾರವನ್ನು ಸೇವಿಸಬೇಡಿ, ಫ್ರಿಡ್ಜ್​ನಲ್ಲಿಟ್ಟ ಆಹಾರವನ್ನು ತಿನ್ನಬೇಡಿ. ತಾಜಾ ಆಹಾರವನ್ನೇ ಸೇವಿಸಿ. ಇದರಿಂದ ದೇಹವು ಊಟವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ. ಅಲ್ಲದೆ, ಎಣ್ಣೆಯುಕ್ತ ಮತ್ತು ಕರಿದ ಆಹಾರ ಪದಾರ್ಥಗಳಿಂದ ದೂರವಿರಲು ಪ್ರಯತ್ನಿಸಿ. ನೀವು ಸೌತೆಕಾಯಿ, ಕಲ್ಲಂಗಡಿ ಮತ್ತು ಸೀಬೆಹಣ್ಣುಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಬಹುದು.

3. ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ

ಬೇಸಿಗೆಯಲ್ಲಿ ಮಕ್ಕಳಿಗೆ ವಿಶೇಷ ಕಾಳಜಿ ಬೇಕು. ಅವರು ಹೆಚ್ಚಿನ ಸಮಯ ಮನೆಯೊಳಗೆ ಇರುವಂತೆ ನೋಡಿಕೊಳ್ಳಿ. ಆಗಾಗ ಅವರ ಬಟ್ಟೆಗಳನ್ನು ಬದಲಾಯಿಸುತ್ತಿರಿ. ಇದರಿಂದ ಬೆವರಿನಿಂದ ಸೋಂಕು ಹರಡುವುದು ತಪ್ಪುತ್ತದೆ.

4. ಸನ್‌ಬ್ಲಾಕ್/ ಸನ್‌ಸ್ಕ್ರೀನ್ ಬಳಸಿ

ಸೂರ್ಯನಿಗೆ ನಿಮ್ಮನ್ನು ಒಡ್ಡಿಕೊಂಡಾಗ ನಿಮ್ಮ ಚರ್ಮಕ್ಕೆ ಹೆಚ್ಚಿನ ಕಾಳಜಿ ಬೇಕು. ತಪ್ಪದೆ, ಹೊರಹೋಗುವ ಮೊದಲು ಸನ್‌ಸ್ಕ್ರೀನ್ ಅಥವಾ ಸನ್‌ಬ್ಲಾಕ್ ಹಚ್ಚಿಕೊಳ್ಳಿ. ಎಣ್ಣೆಯುಕ್ತ ಚರ್ಮ ಹೊಂದಿರುವವರು ಜೆಲ್ ಆಧಾರಿತ ಸನ್‌ಸ್ಕ್ರೀನ್‌ಗಳನ್ನು ಆಯ್ಕೆ ಮಾಡಬಹುದು.

5. ಪ್ರಥಮ ಚಿಕಿತ್ಸಾ ಕಿಟ್ ಇಟ್ಟುಕೊಳ್ಳಿ

ಬೇಸಿಗೆಯಲ್ಲಿ ಯಾವಾಗ ಬೇಕಾದರೂ ವೈದ್ಯಕೀಯ ತುರ್ತುಸ್ಥಿತಿ ಉಂಟಾಗಬಹುದು. ಹೀಗಾಗಿ, ಫಸ್ಟ್​ ಏಯ್ಡ್​ ಕಿಟ್ ಅನ್ನು ಜೊತೆಯಲ್ಲಿ ಇಟ್ಟುಕೊಂಡಿರಿ.

ಹಾಗೇ, ಬೇಸಿಗೆಯಲ್ಲಿ ಆದಷ್ಟೂ ಒಳಾಂಗಣದಲ್ಲಿ ಮತ್ತು ಹೆಚ್ಚು ಬಿಸಿಲು ಬೀಳದ ಸ್ಥಳಗಳಲ್ಲಿರಿ.  ಹೊರಗಡೆ ಇರುವಾಗ ಛತ್ರಿ/ ಟೋಪಿ/ ಶಾಲ್ ಬಳಸಿ. ತೆಳುವಾದ, ಸಡಿಲವಾದ ಹತ್ತಿ, ತಿಳಿ ಬಣ್ಣದ ಉಡುಪುಗಳನ್ನು ಧರಿಸಿ. ನೀರು ಮತ್ತು ಉಪ್ಪುಸಹಿತ ಪಾನೀಯಗಳನ್ನು (ಲಸ್ಸಿ, ನಿಂಬೆ ನೀರು, ಹಣ್ಣಿನ ರಸಗಳು, ORS) ಆಗಾಗ ಕುಡಿಯಿರಿ. ಕಲ್ಲಂಗಡಿ, ಸೌತೆಕಾಯಿ, ನಿಂಬೆ, ಕಿತ್ತಳೆ ಮೊದಲಾದ ಹಣ್ಣುಗಳನ್ನು ಸೇವಿಸಿ. – ಆಗಾಗ ತಂಪಾದ ಸ್ನಾನ ಮಾಡಿ ಮತ್ತು ಕೋಣೆಯ ಉಷ್ಣಾಂಶವನ್ನು ಕಡಿಮೆ ಮಾಡಿ. ಕಿಟಕಿಯ ಪರದೆಗಳನ್ನು ಹಾಕಿರಿ, ಫ್ಯಾನ್, ಕೂಲರ್, ಹವಾನಿಯಂತ್ರಣ, ಕ್ರಾಸ್ ವೆಂಟಿಲೇಟ್ ಕೊಠಡಿ, ನೀರು ಚಿಮುಕಿಸುವುದು, ಒಳಾಂಗಣ ಸಸ್ಯಗಳನ್ನು ಇಟ್ಟುಕೊಳ್ಳುವುದು ಇತ್ಯಾದಿಗಳನ್ನು ಮಾಡಿದರೆ ರೂಮಿನ ವಾತಾವರಣ ಸ್ವಲ್ಪ ನಿಯಂತ್ರಣಕ್ಕೆ ಬರುತ್ತದೆ. ವಿಶೇಷವಾಗಿ ವಯಸ್ಸಾದವರು, ಮಕ್ಕಳು, ಗರ್ಭಿಣಿಯರು, ಮೊದಲೇ ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿ ಹೊಂದಿರುವವರು ಮತ್ತು ಹೊರಾಂಗಣ ಕೆಲಸಗಾರರು ಈ ಬಿಸಿ ಗಾಳಿಯಿಂದ ಹೆಚ್ಚು ಸಮಸ್ಯೆಗೆ ಒಳಗಾಗುತ್ತಾರೆ. ಇವರು ಆರಾಮದಾಯಕ ಬಟ್ಟೆ ಧರಿಸಬೇಕು, ಗಿಡ್ಡನೆಯ ಬಟ್ಟೆ ಅಥವಾ ಗಾಳಿಯಾಡುವ ಬಟ್ಟೆ ಧರಿಸಿ.

ಉಷ್ಣ ಅಲೆಯ ಬಗ್ಗೆ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಸಿಲು ಹೆಚ್ಚಾಗಿರುವಾಗ ಹೊರಗೆ ಹೋಗಬೇಡಿ. ವಿಶೇಷವಾಗಿ ಮಧ್ಯಾಹ್ನ ಮತ್ತು 3 ಗಂಟೆಯ ನಡುವೆ ಬಿಸಿಲಲ್ಲಿ ಓಡಾಡಬೇಡಿ.  ಮಧ್ಯಾಹ್ನ ಹೊರಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ಮಾಡಬೇಡಿ. ಮದ್ಯ, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ಕಡಿಮೆ ಮಾಡಿ. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬೇಡಿ. ಗಾಢ ಬಣ್ಣದ, ಸಿಂಥೆಟಿಕ್ ಮತ್ತು ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ಕಡಿಮೆ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada