ಕಣ್ಣಿನ ಕೆಳಗಿನ ಡಾರ್ಕ್ ಸರ್ಕಲ್ ನಿವಾರಿಸಲು ಅದ್ಭುತ ಮನೆಮದ್ದುಗಳಿವು

ಡಾರ್ಕ್ ಸರ್ಕಲ್​ಗೆ ಮತ್ತೊಂದು ಮುಖ್ಯ ಕಾರಣವೆಂದರೆ ಒತ್ತಡ, ಖಿನ್ನತೆ ಮತ್ತು ಅನಿಯಮಿತ ಜೀವನಶೈಲಿ. ಹೀಗಾಗಿ, ಯೋಗ ಮತ್ತು ಧ್ಯಾನವನ್ನು ದಿನವೂ ಮಾಡುವುದರಿಂದ ಕಪ್ಪು ವರ್ತುಲವನ್ನು ಕಡಿಮೆ ಮಾಡಬಹುದು. ಕಪ್ಪು ವರ್ತುಲಕ್ಕೆ ಚಿಕಿತ್ಸೆ ನೀಡಲು ಮತ್ತೊಂದು ಪರಿಹಾರವೆಂದರೆ ಬಾದಾಮಿ ಎಣ್ಣೆ ಮತ್ತು ನಿಂಬೆ ರಸದ ಮಿಶ್ರಣ.

ಕಣ್ಣಿನ ಕೆಳಗಿನ ಡಾರ್ಕ್ ಸರ್ಕಲ್ ನಿವಾರಿಸಲು ಅದ್ಭುತ ಮನೆಮದ್ದುಗಳಿವು
ಡಾರ್ಕ್ ಸರ್ಕಲ್‌ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Sep 16, 2023 | 5:11 PM

ಕಣ್ಣು ನಮ್ಮ ಸೌಂದರ್ಯದ ಅಂಗ ಮಾತ್ರವಲ್ಲದೆ ನಮ್ಮ ಆರೋಗ್ಯದ ಸಮಸ್ಯೆಗಳನ್ನು ಹೊರಸೂಸುವ ಅಂಗವೂ ಹೌದು. ಕಣ್ಣಿನ ಕೆಳಗೆ ಮೂಡುವ ಕಪ್ಪು ಕಲೆ ಅನಾರೋಗ್ಯದ ಸೂಚನೆಯೂ ಆಗಿರಬಹುದು. ಒತ್ತಡ, ನಿದ್ರಾಹೀನತೆ, ಅನಾರೋಗ್ಯ, ಕಣ್ಣಿನ ತೊಂದರೆ ಹೀಗೆ ನಾನಾ ಕಾರಣಗಳಿಂದ ಡಾರ್ಕ್ ಸರ್ಕಲ್‌ ಉಂಟಾಗುತ್ತದೆ. ಕಣ್ಣಿನ ಕೆಳಗೆ ಕಪ್ಪಾಗುವ ಸಮಸ್ಯೆಗೆ ಸರಳ ಮನೆಮದ್ದುಗಳು ಇಲ್ಲಿವೆ…

1. ತಣ್ಣನೆಯ ಟೀ ಬ್ಯಾಗ್:

ಡಾರ್ಕ್ ಸರ್ಕಲ್ ಅನ್ನು ನಿವಾರಿಸಲು ಅತ್ಯಂತ ಪರಿಣಾಮಕಾರಿ ಮತ್ತು ಅತ್ಯಂತ ಸುಲಭವಾದ ಮಾರ್ಗವೆಂದರೆ ತಣ್ಣನೆಯ ಚಹಾ ಬ್ಯಾಗ್​ಗಳನ್ನು ಬಳಸುವುದು. ಗ್ರೀನ್ ಟೀ ಅಥವಾ ಕ್ಯಾಮೊಮೈಲ್ ಟೀ ಬ್ಯಾಗ್‌ಗಳನ್ನು ಬಳಸಿದರೆ ಇನ್ನೂ ಒಳ್ಳೆಯದು. ಈ ಟೀ ಬ್ಯಾಗ್​ನಲ್ಲಿರುವ ಕೆಫೀನ್ ರಕ್ತನಾಳಗಳನ್ನು ಸಂಕುಚಿತಗೊಳಿಸಲು ಸಹಾಯ ಮಾಡುತ್ತದೆ. ಇದು ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಮತ್ತು ಕಪ್ಪು ವರ್ತುಲದಿಂದ ಸ್ವಲ್ಪ ಪರಿಹಾರವನ್ನು ನೀಡುತ್ತದೆ.

2. ತುರಿದ ಆಲೂಗಡ್ಡೆ ಅಥವಾ ತುರಿದ ಸೌತೆಕಾಯಿ:

ತುರಿದ ಆಲೂಗಡ್ಡೆ ಅಥವಾ ತುರಿದ ಸೌತೆಕಾಯಿ ಕಣ್ಣಿನ ಸುತ್ತಲಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಟಮಿನ್‌ಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ಈ ತಂಪಾಗಿಸುವ ತರಕಾರಿಗಳು ಕಣ್ಣಿನ ಸುತ್ತಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಕಣ್ಣಿನ ಕೆಳಗೆ ಕಪ್ಪಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Blueberries Benefits: ಸೂಪರ್ ಫ್ರೂಟ್ ಬ್ಲೂಬೆರಿ ಹಣ್ಣುಗಳ ಬಗ್ಗೆ ನಿಮಗೆಷ್ಟು ಗೊತ್ತು?

3. ತಣ್ಣನೆಯ ಹಾಲು:

ತಣ್ಣನೆಯ ಹಾಲು ಕಣ್ಣುಗಳಿಗೆ ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಕಣ್ಣುಗಳ ಸುತ್ತಲಿನ ಸೂಕ್ಷ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ತಣ್ಣನೆಯ ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲವಿದೆ. ಇದು ಚರ್ಮವನ್ನು ಹಗುರಗೊಳಿಸುತ್ತದೆ. ಹಾಲಿನಲ್ಲಿರುವ ಪೊಟ್ಯಾಸಿಯಮ್ ನಿಮಗೆ ಮೃದುವಾದ ಚರ್ಮವನ್ನು ನೀಡುತ್ತದೆ.

4. ಅಲೋವೆರಾ:

ಅಲೋವೆರಾ ಪರಿಣಾಮಕಾರಿ ಮಾಯಿಶ್ಚರೈಸರ್ ಆಗಿದೆ. ತೇವಾಂಶವುಳ್ಳ ಚರ್ಮವು ದೀರ್ಘಕಾಲದವರೆಗೆ ಆರೋಗ್ಯಕರವಾಗಿರುತ್ತದೆ. ಅಲೋವೆರಾ ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ. ಅಕಾಲಿಕವಾಗಿ ವಯಸ್ಸಾಗುವುದನ್ನು ತಡೆಯುತ್ತದೆ.

5. ಬಾದಾಮಿ ಎಣ್ಣೆ ಮತ್ತು ನಿಂಬೆ ರಸ:

ಕಪ್ಪು ವರ್ತುಲಕ್ಕೆ ಚಿಕಿತ್ಸೆ ನೀಡಲು ಮತ್ತೊಂದು ಪರಿಹಾರವೆಂದರೆ ಬಾದಾಮಿ ಎಣ್ಣೆ ಮತ್ತು ನಿಂಬೆ ರಸದ ಮಿಶ್ರಣ. ಇದು ಸೌಮ್ಯವಾದ ಬ್ಲೀಚಿಂಗ್ ಕ್ರಿಯೆಯನ್ನು ಸಹ ಹೊಂದಿದೆ. ಇದನ್ನು ಬಳಸುವಾಗ ಕೊಂಚ ಪ್ರಮಾಣದಲ್ಲಿ ಉಪಯೋಗಿಸಿ. ಇಲ್ಲವಾದರೆ, ಕಣ್ಣಿನ ಕೆಳಗಿನ ಸೂಕ್ಷ್ಮ ಚರ್ಮಕ್ಕೆ ಹಾನಿಯಾಗಬಹುದು.

6. ರೋಸ್ ವಾಟರ್:

ರೋಸ್ ವಾಟರ್ ಬಹಳ ಹಿಂದಿನ ಕಾಲದಿಂದಲೂ ಮುಖದ ಸೌಂದರ್ಯಕ್ಕೆ ಬಳಸಲಾಗುತ್ತಿರುವ ವಸ್ತು. ಇದನ್ನು ಎಲ್ಲಾ ರೀತಿಯ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಬಳಸಬಹುದು.

7. ಟೊಮ್ಯಾಟೊ:

ಟೊಮ್ಯಾಟೋಸ್ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್. ಇವುಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ಕಣ್ಣಿನ ಪ್ರದೇಶದ ಸುತ್ತಲಿನ ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Black Pepper: ಕಾಳು ಮೆಣಸಿನ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿಯ ಸಂಗತಿಗಳಿವು

8. ಯೋಗ ಮತ್ತು ಧ್ಯಾನ:

ಡಾರ್ಕ್ ಸರ್ಕಲ್​ಗೆ ಮತ್ತೊಂದು ಮುಖ್ಯ ಕಾರಣವೆಂದರೆ ಒತ್ತಡ, ಖಿನ್ನತೆ ಮತ್ತು ಅನಿಯಮಿತ ಜೀವನಶೈಲಿ. ಹೀಗಾಗಿ, ಯೋಗ ಮತ್ತು ಧ್ಯಾನವನ್ನು ದಿನವೂ ಮಾಡುವುದರಿಂದ ಕಪ್ಪು ವರ್ತುಲವನ್ನು ಕಡಿಮೆ ಮಾಡಬಹುದು.

9. ನಿಯಮಿತ ನಿದ್ರೆ:

ನಿಯಮಿತವಾಗಿ ಸಾಕಷ್ಟು ನಿದ್ರೆ ಪಡೆಯುವುದರಿಂದ ಹಲವು ಪ್ರಯೋಜನಗಳಿವೆ. ನಿಯಮಿತ ನಿದ್ರೆಯು ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಇದು ನಿಮ್ಮ ತ್ವಚೆಯ ತಾರುಣ್ಯವನ್ನು ಹಾಗೂ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.

10. ಕಿತ್ತಳೆ ರಸ:

ಕಿತ್ತಳೆ ರಸವು ವಿಟಮಿನ್‌ಗಳಲ್ಲಿ ಸಮೃದ್ಧವಾಗಿದೆ. ಇದರಲ್ಲಿ ವಿಶೇಷವಾಗಿ ವಿಟಮಿನ್ ಎ ಮತ್ತು ಸಿ ಅಂಶಗಳಿವೆ. ಇವೆರಡೂ ಆರೋಗ್ಯಕರ ಚರ್ಮಕ್ಕೆ ಸಹಾಯ ಮಾಡುತ್ತದೆ. ಕಿತ್ತಳೆ ರಸಕ್ಕೆ ಸ್ವಲ್ಪ ಗ್ಲಿಸರಿನ್ ಸೇರಿಸಿ ಮತ್ತು ಅದನ್ನು ನಿಮ್ಮ ಕಣ್ಣುಗಳ ಕೆಳಗೆ ಹಚ್ಚಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ