ಮುಖದ ತುಂಬಾ ಮೊಡವೆ ಇದ್ಯಾ? ಅಲೋವೆರಾವನ್ನು ಈ ರೀತಿ ಬಳಸಿ
ಅಲೋವೆರಾ ನಮ್ಮ ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಏಕೆಂದರೆ ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು ಚರ್ಮದ ಆರೈಕೆಗೆ ಉತ್ತಮವಾಗಿದೆ. ಹಾಗಾಗಿಯೇ ಅಲೋವೆರಾವನ್ನು ಮನೆಗಳಲ್ಲಿ ಬೆಳೆಸಲಾಗುತ್ತದೆ. ಆದರೆ ಅನೇಕರಿಗೆ ಅಲೋವೆರಾವನ್ನು ಸರಿಯಾಗಿ ಬಳಸುವುದು ಹೇಗೆ ಎಂಬುದು ತಿಳಿದಿಲ್ಲ. ಇದರಿಂದ ಅಲೋವೆರಾದ ಬಳಕೆಯನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾದರೆ ಚರ್ಮದ ಆರೈಕೆ ಸರಿಯಾಗಿ ಮಾಡಿ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಅಲೋವೆರಾವನ್ನು ಯಾವ ರೀತಿಯಲ್ಲಿ ಬಳಸಬೇಕು ಎಂಬುದನ್ನು ತಿಳಿದುಕೊಳ್ಳಿ.

ನಮ್ಮ ಮುಖ ಸುಂದರವಾಗಿ ಕಾಣಬೇಕು ಎಂದು ಎಲ್ಲರೂ ಬಯಸುವುದು ಸಹಜ. ಅದಕ್ಕಾಗಿಯೇ ನಾನಾ ರೀತಿಯ ಪ್ರಯತ್ನಗಳು ನಡೆಯುತ್ತಿರುತ್ತವೆ ಆದರೆ ಹೆಚ್ಚಿನ ಸಮಯದಲ್ಲಿ, ಇವು ಯಾವುದೂ ನಮಗೆ ಸಹಾಯ ಮಾಡುವುದಿಲ್ಲ. ಮುಖದ ಕಾಂತಿಯನ್ನು ಇಮ್ಮಡಿಗೊಳಿಸಲು ನಾನಾ ರೀತಿಯ ಸೋಪು, ಕ್ರೀಮ್ ಗಳ ಮೊರೆ ಹೋಗುವ ಬದಲು ಮನೆಯಲ್ಲಿ ಇರುವ ಔಷಧದ ಗಿಡಗಳಿಂದ ಸುಲಭವಾಗಿ, ಸರಳವಾಗಿ ಮನೆ ಮದ್ದನ್ನು ತಯಾರಿಸಿಕೊಳ್ಳಬಹುದು. ಅದರಲ್ಲಿಯೂ ಅಲೋವೆರಾ ನಮ್ಮ ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಏಕೆಂದರೆ ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು ಚರ್ಮದ ಆರೈಕೆಗೆ ಉತ್ತಮವಾಗಿದೆ. ಹಾಗಾಗಿಯೇ ಅಲೋವೆರಾವನ್ನು ಮನೆಗಳಲ್ಲಿ ಬೆಳೆಸಲಾಗುತ್ತದೆ. ಆದರೆ ಅನೇಕರಿಗೆ ಅಲೋವೆರಾವನ್ನು ಸರಿಯಾಗಿ ಬಳಸುವುದು ಹೇಗೆ ಎಂಬುದು ತಿಳಿದಿಲ್ಲ. ಇದರಿಂದ ಅಲೋವೆರಾದ ಬಳಕೆಯನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾದರೆ ಚರ್ಮದ ಆರೈಕೆ ಸರಿಯಾಗಿ ಮಾಡಿ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಅಲೋವೆರಾವನ್ನು ಯಾವ ರೀತಿಯಲ್ಲಿ ಬಳಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಸಂಸ್ಕೃತದಲ್ಲಿ ಕುಮಾರಿ ಎಂದು ಕರೆಯುವ ಈ ಅಲೋವೆರಾವನ್ನು ಸ್ಥಳೀಯವಾಗಿ ಲೋಳೆಸರ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಪ್ರಾಚೀನ ಕಾಲದಿಂದಲೂ ಇದನ್ನು ಬಳಸಲಾಗುತ್ತಿದೆ. ಹಾಗಾಗಿಯೇ ಆಯುರ್ವೇದದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದ ಅಲೋವೆರಾ ಅನೇಕ ಮನೆಮದ್ದುಗಳ ರೂಪದಲ್ಲಿಯೂ ಬಳಕೆಯಾಗುತ್ತದೆ. ಅಲೋವೆರಾ ಚರ್ಮವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಚರ್ಮದ ಮೇಲಿನ ಉರಿಯೂತ ಮತ್ತು ಕಪ್ಪು ಕಲೆಗಳಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲೋವೆರಾ ಸ್ಯಾಲಿಸಿಕ್ ಆಮ್ಲ ಮತ್ತು ಅಮೈನೋ ಆಮ್ಲಗಳಿಂದ ಸಮೃದ್ಧವಾಗಿದ್ದು ಚರ್ಮದ ಆರೈಕೆಗೆ ಉತ್ತಮವಾಗಿದೆ. ಹಾಗಾದರೆ ಇದರಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.
ಇದನ್ನೂ ಓದಿ: ಹೊಸ ಚಪ್ಪಲಿ ಧರಿಸಿ ಕಾಲಲ್ಲಿ ಗಾಯವಾಗಿದ್ಯಾ? ಮನೆಯಲ್ಲೇ ಈ ರೀತಿ ಗುಣಪಡಿಸಿ
ಅಲೋವೆರಾ ಅಥವಾ ಲೋಳೆಸರದ ಪ್ರಯೋಜನಗಳು;
ಚರ್ಮದ ಮೇಲೆ ಪದೇ ಪದೇ ಕಂಡು ಬರುವ ದದ್ದುಗಳು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಅಲೋವೆರಾ ತುಂಬಾ ಪರಿಣಾಮಕಾರಿಯಾಗಿದೆ. ಅಲೋವೆರಾದ ಉರಿಯೂತ ನಿವಾರಕ ಗುಣಗಳು ಇದಕ್ಕೆ ಸಹಾಯ ಮಾಡುತ್ತವೆ. ಅಲೋವೆರಾವನ್ನು ಕತ್ತರಿಸಿ ಅದರ ಸಿಪ್ಪೆ ತೆಗೆದು ಬಳಿಕ ಜೆಲ್ ಅನ್ನು ಫ್ರಿಜ್ ನಲ್ಲಿ ಚೆನ್ನಾಗಿ ತಣ್ಣಗಾಗಿಸಿ, ನಂತರ ಇದನ್ನು ಮುಖಕ್ಕೆ ಹಚ್ಚಿಕೊಳ್ಳಬಹುದು. ಅಲೋವೆರಾ ಕೂಡ ಉತ್ತಮ ಮಾಯಿಶ್ಚರೈಸರ್ ಆಗಿದ್ದು ಪ್ರತಿನಿತ್ಯ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಬಹುದು. ಅಲೋವೆರಾ ಜೆಲ್ ಅನ್ನು ನಿಮ್ಮ ಮುಖದ ಮೇಲೆ 10 ನಿಮಿಷಗಳ ಕಾಲ ಹಚ್ಚುವುದು ಚರ್ಮಕ್ಕೆ ಬಹಳ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಇದು ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ಹೊಳಪನ್ನು ನೀಡಿ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅಲೋವೆರಾದಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಕಿಣ್ವಗಳು ಚರ್ಮಕ್ಕೆ ಬಣ್ಣ ನೀಡಲು ಸಹಾಯ ಮಾಡುತ್ತದೆ. ಮೊಡವೆಗಳಿಂದ ಬಳಲುತ್ತಿರುವವರು ತಮ್ಮ ಮುಖಕ್ಕೆ ಅಲೋವೆರಾ ಜೆಲ್ ಅನ್ನು ಹಚ್ಚಿಕೊಳ್ಳಬಹುದು. ಇದು ಬಹುತೇಕ ಎಲ್ಲಾ ಚರ್ಮದ ಸಮಸ್ಯೆಗಳನ್ನು ಪರಿಹರಿಸುತ್ತದೆ. ಅಲೋವೆರಾವನ್ನು ಶೀತ, ಶುಷ್ಕ ಮತ್ತು ಅತಿಯಾದ ಧೂಳು ಇರುವಾಗ ಬಳಸಬಹುದು.
ಅಲೋವೆರಾವನ್ನು ಹೇಗೆ ಬಳಸಿದರೆ ಒಳ್ಳೆಯದು?
ಸಾಮಾನ್ಯವಾಗಿ ಅಲೋವೆರಾವನ್ನು ಮಾತ್ರ ಹಚ್ಚುವ ಬದಲು ಅದಕ್ಕೆ ಕೆಲವು ಪದಾರ್ಥಗಳನ್ನು ಸೇರಿಸುವುದು ಸೂಕ್ತ. ನೀವು ಇದನ್ನು ಮಾಯಿಶ್ಚರೈಸರ್ ಆಗಿ ಬಳಸುವಾಗ ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಬಹುದು. ಮೊಡವೆಯಿಂದ ಮುಕ್ತಿ ಪಡೆಯಲು ಹಚ್ಚುತ್ತಿದ್ದರೆ ಅರಿಶಿನವನ್ನು ಬಳಸಬಹುದು. ಅತಿಯಾದ ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ಅಲೋವೆರಾಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಹಚ್ಚಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆಗೆ ಬಹಳ ಬೇಗ ಪರಿಹಾರ ಸಿಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




