Kannada News Lifestyle Benefits of Sweating : Do you sweat a lot? Find out how it benefits the body! Lifestyle News in Kannada
Sweating : ಬೇಸಿಗೆಯಲ್ಲಿ ಅತಿಯಾಗಿ ಬೆವರಿದ್ರೆ ಆರೋಗ್ಯ ಲಾಭ ಖಂಡಿತ
ಬೇಸಿಗೆಯ ಸಮಯದಲ್ಲಿ ಹೊರಗಡೆ ಹೋಗಿ ಬಂದರೆ ಸಾಕು, ಮೈ ತುಂಬಾ ನೀರು ಇಳಿಯುತ್ತದೆ. ಯಾಕಾದ್ರೂ ಇಷ್ಟು ಬೆವರುತ್ತೇನಾ ಎಂದು ಒಳಗೊಳಗೇ ಬೈದುಕೊಳ್ಳುತ್ತಾರೆ. ಕೆಲವರನ್ನು ನೋಡಿದರಂತೂ ಸ್ನಾನ ಮಾಡಿರುವಂತೆ ಕಾಣುತ್ತಾರೆ. ಬಿಸಿಲಿನ ಝಳಕ್ಕೆ ಬೆವರುವುದು ಸಹಜ. ಆದರೆ ಭಯ, ಆತಂಕ, ಉದ್ವೇಗ ಅಥವಾ ದೈಹಿಕ ಚಟುವಟಿಕೆಯ ತೊಡಗಿಕೊಂಡಾಗಲು ಮೈಯಿಂದ ನೀರು ಹೊರಬರುತ್ತದೆ. ಆದರೆ ಈ ಬೆವರು ಕೂಡ ಆರೋಗ್ಯಕ್ಕೆ ಒಳ್ಳೆಯದಂತೆ, ಹಾಗಾದ್ರೆ ಆರೋಗ್ಯ ಲಾಭಗಳ ಕುರಿತಾದ ಸಂಪೂರ್ಣ ಮಾಹಿತಿಯಿಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ಬೆವರುವುದು ಸಹಜ ಪ್ರಕ್ರಿಯೆಯಾಗಿದ್ದರೂಕೂಡ ಸ್ವಲ್ಪ ಬೆವರನ್ನು ತಡೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ ಹೆಚ್ಚಿನವರು ಫ್ಯಾನಿನ ಮೊರೆ ಹೋಗುತ್ತಾರೆ. ಆದರೆ ಬೆವರುವುದು ಕೂಡ ಒಂದರ್ಥದಲ್ಲಿ ಆರೋಗ್ಯಕ್ಕೆ ಒಳ್ಳೆಯದು. ಎಲ್ಲರಿಗೂ ತಿಳಿದಿರುವಂತೆ ಬೆವರಿನ ಮೂಲಕ ದೇಹದಲ್ಲಿರುವ ಕಲ್ಮಶಗಳು ಮತ್ತು ವಿಷಕಾರಿ ವಸ್ತುಗಳು ಹೊರಹೋಗುವುದಲ್ಲದೆ, ಇನ್ನಿತ್ತರ ಆರೋಗ್ಯ ಪ್ರಯೋಜನಗಳು ಇವೆ.
ಬೆವರುವುದರಿಂದಾಗುವ ಆರೋಗ್ಯ ಪ್ರಯೋಜನಗಳು:
ಅತಿಯಾಗಿ ಬೆವರುವುದರಿಂದ ಚರ್ಮದ ರಂಧ್ರಗಳಲ್ಲಿರುವ ಕೊಳೆ, ಧೂಳು ಮತ್ತು ಬ್ಯಾಕ್ಟೀರಿಯಾಗಳು ಬೆವರಿನ ರೂಪದಲ್ಲಿ ಹೊರಬರುವ ಮೂಲಕ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.
ಬೆವರುವುದು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಂತೆ. ಈ ಹೃದಯವು ದೇಹದ ಎಲ್ಲಾ ಭಾಗಗಳಿಗೆ ನಿರಂತರವಾಗಿ ರಕ್ತವನ್ನು ಪೂರೈಸಸುವ ಕೆಲಸವನ್ನು ಮಾಡುತ್ತವೆ. ಆದರೆ ಬೆವರು ರಕ್ತದಿಂದ ವಿಷ ಮತ್ತು ಉಪ್ಪನ್ನು ಹೀರಿಕೊಂಡು ಹೊರಹಾಕುವ ಕೆಲಸವನ್ನು ಮಾಡುತ್ತದೆ.
ಅತಿಯಾಗಿ ಬೆವರುವುದರಿಂದ ದೇಹದಲ್ಲಿ ಎಂಡಾರ್ಫಿನ್ ಬಿಡುಗಡೆಯಾಗುತ್ತದೆ. ಇದು ದೇಹದಲ್ಲಿ ಕಾಣಿಸಿಕೊಳ್ಳುವ ನೋವನ್ನು ಕಡಿಮೆ ಮಾಡುತ್ತದೆ.
ಅತಿಯಾದ ಬೆವರಿ ದೇಹದಲ್ಲಿರುವ ನೀರು ಹೊರಗೆ ಹೋಗುವುದರಿಂದ ಬಾಯಾರಿಕೆಯಾಗುತ್ತದೆ. ಈ ವೇಳೆ ನೀರನ್ನು ಹೆಚ್ಚು ಕುಡಿಯುವುದರಿಂದ ಮೂತ್ರಪಿಂಡಗಳು ಆರೋಗ್ಯಕರವಾಗಿ ಕಾರ್ಯನಿರ್ವಹಿಸಲು ಸಹಾಯಕವಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ