Summer Drinks : ಸುಡುಬಿಸಿಲಿಗೆ ದೇಹವನ್ನು ಕೂಲ್ ಆಗಿಸುತ್ತೆ ಸೋರೆ ಕಾಯಿ ಜ್ಯೂಸ್

Bottle Gourd Juice : ಬಿಸಿಲ ಧಗೆಯೂ ಹೆಚ್ಚಾಗಿದೆ. ಹೊರಗದೇ ಕಾಲಿಡಲು ಆಗುತ್ತಿಲ್ಲ. ರಾಜ್ಯದ ಕೆಲವೆಡೆ ಮಳೆರಾಯನು ಭೂಮಿಯನ್ನು ತಂಪಾಗಿಸಿದ್ದಾನೆ. ಆದರೆ ಉರಿ ಸೆಕೆಯಂತೂ ಕಡಿಮೆಯಾಗಿಲ್ಲ. ಕಾಡುವ ಆರೋಗ್ಯ ಸಮಸ್ಯೆಗಳ ನಡುವೆ ಹೆಚ್ಚಿನವರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆದರೆ ದೇಹವನ್ನು ತಂಪಾಗಿಸಲು ಮನೆಯಲ್ಲೇ ಸೋರೆ ಕಾಯಿ ಜ್ಯೂಸ್ ಮಾಡಿ ಕುಡಿಯುವುದು ತುಂಬಾನೇ ಸುಲಭ.

Summer Drinks : ಸುಡುಬಿಸಿಲಿಗೆ ದೇಹವನ್ನು ಕೂಲ್ ಆಗಿಸುತ್ತೆ ಸೋರೆ ಕಾಯಿ ಜ್ಯೂಸ್
ಸೋರೆ ಕಾಯಿ ಜ್ಯೂಸ್Image Credit source: pinterest
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 18, 2024 | 4:54 PM

ಬೇಸಿಗೆ ಶಾಖಕ್ಕೆ ದಾಹವೂ ಹೆಚ್ಚಾಗುತ್ತಿದ್ದಂತೆ ತಂಪಾಗಿರುವ ಉಲ್ಲಾಸಕರವಾದ ಏನನ್ನಾದರೂ ಸೇವಿಸಬೇಕೆಂದೆನಿಸುವುದು ಸಹಜ. ಹೀಗಾಗಿ ಹೆಚ್ಚಿನವರು ಕೂಲ್ ಕೂಲ್ ಆಗಿಸುವ ಪೇಯಗಳತ್ತ ಮುಖ ಮಾಡುತ್ತಾರೆ. ಆದರೆ ನಿತ್ಯವೂ ಎಳನೀರು, ತಾಳೆಹಣ್ಣು, ಕಲ್ಲಂಗಡಿ, ಖರ್ಬೂಜ ಜ್ಯೂಸ್ ಕುಡಿದು ಬೇಸರವೆನಿಸಿದ್ದು, ಬೇರೆ ಏನಾದರೂ ಕುಡಿಯಬೇಕು ಎಂದುಕೊಂಡಿದ್ದರೆ ಸೋರೆಕಾಯಿ ಜ್ಯೂಸ್ ಕುಡಿದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಸೋರೆ ಕಾಯಿ ಜ್ಯೂಸ್ ಮಾಡಲು ಬೇಕಾಗುವ ಸಾಮಗ್ರಿಗಳು:

* ಒಂದು ಕಪ್ ಕಪ್ ಸೋರೆಕಾಯಿ / ಲೌಕಿ / ಬಾಟಲ್ ಗೌರ್ಡ್

* ಪುದೀನ ಎಲೆ

* ಒಂದು ಚಮಚದಷ್ಟು ಜೀರಿಗೆ ಪುಡಿ

* ಒಂದು ಚಮಚ ಕಾಳು ಮೆಣಸಿನ ಪುಡಿ

* ಶುಂಠಿ

* ಉಪ್ಪು

* ಎರಡು ಚಮಚ ನಿಂಬೆ ರಸ

* ನೀರು

ಇದನ್ನೂ ಓದಿ: ರಾತ್ರಿ ಮಲಗಿದಾಗ ಬಾಯಿ ಒಣಗುತ್ತದೆಯೇ? ಇಲ್ಲಿದೆ ಸರಳ ಮನೆ ಮದ್ದುಗಳು

ಸೋರೆ ಕಾಯಿ ಜ್ಯೂಸ್ ಮಾಡುವ ವಿಧಾನ:

* ಮೊದಲಿಗೆ ಮಿಕ್ಸಿ ಜಾರಿಗೆ ಒಂದು ಕಪ್ ನಷ್ಟು ಸಿಪ್ಪೆ ಸುಲಿದು ಕತ್ತರಿಸಿದ ಸೋರೆಕಾಯಿಯನ್ನು ಹಾಕಿಕೊಳ್ಳಿ.

* ಆ ಬಳಿಕ ಪುದೀನ ಎಲೆ, ಚಿಟಿಕೆಯಷ್ಟು ಜೀರಿಗೆ ಪುಡಿ ಹಾಗೂ ಕಾಳು ಮೆಣಸಿನ ಪುಡಿ, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಎರಡು ಚಮಚ ನಿಂಬೆ ರಸ ಹಾಗೂ ನೀರು ಹಾಕಿ ಸಣ್ಣಗೆ ರುಬ್ಬಿಕೊಳ್ಳಿ.

* ಕೊನೆಗೆ ರುಬ್ಬಿದ ಈ ಮಿಶ್ರಣವನ್ನು ಸೋಸಿ, ಐಸ್ ಕ್ಯೂಬ್ ಗಳನ್ನು ಸೇರಿಸಿದರೆ ಸೋರೆಕಾಯಿ ಜ್ಯೂಸ್ ಸವಿಯಲು ಸಿದ್ಧ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್