ಬೆಂಗಳೂರಿನಲ್ಲಿ ಆಫೀಸ್ ಕಾನ್ಫರೆನ್ಸ್ ಕಾಲ್​​ಗಳು, ವರ್ಕ್​ಗಳಿಗಾಗಿ ಕೆಫೆಟೇರಿಯವನ್ನು ಹುಡುಕುತ್ತಿದ್ದೀರಾ?

ಬೆಂಗಳೂರಿನಂತಹ ಅಧಿಕ ಜನದಟ್ಟನೆ ಇರುವಲ್ಲಿ ನೀವು ಆಫೀಸ್ ಕಾನ್ಫರೆನ್ಸ್ ಕಾಲ್​​ಗಳು, ಗೂಗಲ್​​ ಮೀಟ್​​​​ಗಳಿಗೆ ಶಾಂತವಾದ ಕೆಫೆಟೇರಿಯಗಳನ್ನು ಹುಡುಕುತ್ತಿದ್ದರೆ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ ಆಫೀಸ್ ಕಾನ್ಫರೆನ್ಸ್ ಕಾಲ್​​ಗಳು, ವರ್ಕ್​ಗಳಿಗಾಗಿ  ಕೆಫೆಟೇರಿಯವನ್ನು ಹುಡುಕುತ್ತಿದ್ದೀರಾ?
ಸಾಂದರ್ಭಿಕ ಚಿತ್ರImage Credit source: Veriu Hotels
Follow us
ಅಕ್ಷತಾ ವರ್ಕಾಡಿ
|

Updated on:Feb 17, 2023 | 12:32 PM

ಕೊರೊನಾ ನಂತರದ ದಿನಗಳಲ್ಲಿ ವರ್ಕ್​ ಫ್ರಮ್​​​ ಹೋಮ್​​​ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದಾಗಿ ಕಾನ್ಫರೆನ್ಸ್ ಕಾಲ್​​ಗಳು, ಗೂಗಲ್​​ ಮೀಟ್​​​​ಗಳ ಮೂಲಕ ಕೆಲಸಗಳು ನಡೆಯುತ್ತಿವೆ. ನೀವು ಬೆಂಗಳೂರಿನಲ್ಲಿ ಇದ್ದುಕೊಂಡು ಆಫೀಸ್​​ ವರ್ಕ್​ಗಳಿಗಾಗಿ ಒಂದೊಳ್ಳೆಯ ಕೆಫೆಟೇರಿಯವನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ ಬೆಂಗಳೂರಿನಂತಹ ಅಧಿಕ ಜನದಟ್ಟನೆ ಇರುವಲ್ಲಿ ನೀವು ಆಫೀಸ್ ಕಾನ್ಫರೆನ್ಸ್ ಕಾಲ್​​ಗಳು, ಗೂಗಲ್​​ ಮೀಟ್​​​​ಗಳಿಗೆ ಶಾಂತವಾದ ಕೆಫೆಟೇರಿಯಗಳನ್ನು ಹುಡುಕುತ್ತಿದ್ದರೆ ಮಾಹಿತಿ ಇಲ್ಲಿದೆ.

ಮ್ಯಾಟಿಯೊ ಕಾಫಿಯಾ, ಇಂದಿರಾನಗರ:

ಈ ಕೆಫೆಟೇರಿಯಾ ನಿಮ್ಮ ಆಫೀಸ್ ಕಾನ್ಫರೆನ್ಸ್ ಕಾಲ್​​ಗಳು, ಗೂಗಲ್​​ ಮೀಟ್​​​​ಗಳಿಗೆ ಉತ್ತಮ ಸ್ಥಳವಾಗಿದೆ. ಮ್ಯಾಟಿಯೊ ಕಾಫಿಯು ಉಚಿತ ವೈಫೈ, ಸಾಕಷ್ಟು ಪವರ್ ಔಟ್‌ಲೆಟ್‌ಗಳು ಮತ್ತು ಶಾಂತವಾದ ವಾತಾವರಣವನ್ನು ನಿಮಗೆ ಒದಗಿಸುತ್ತದೆ. ಜೊತೆಗೆ ನೀವು ಪುಸ್ತಕಗಳನ್ನು ಓದಲು ಕೂಡ ಉತ್ತಮ ಸ್ಥಳವಾಗಿದೆ.

ಸ್ಟಾರ್‌ಬಕ್ಸ್, ಚರ್ಚ್ ಸ್ಟ್ರೀಟ್:

ಕಾನ್ಫರೆನ್ಸ್ ಕರೆಗಳು ಅಥವಾ ವೈಯಕ್ತಿಕ ಮೀಟಿಂಗ್​​​​ಗಳಿಗೆ ಈ ಕೆಫೆಟೇರಿಯಾ ಉತ್ತಮ ಸ್ಥಳವಾಗಿದೆ. ನೀವಿಲ್ಲಿ ವೈಫೈ ಸೇವೆಗಳನ್ನು ಕೂಡ ಪಡೆಯಬಹುದಾಗಿದೆ. ಜೊತೆಗೆ ನೀವಿಲ್ಲಿ ಉತ್ತಮ ಗುಣಮಟ್ಟದ ಆಹಾರಗಳು ಹಾಗೂ ಪಾನೀಯಗಳನ್ನು ಸವಿಯಬಹುದು.

ಇದನ್ನೂ ಓದಿ: ಕೆಲವರು ಬಿಸಿ ಬಿಸಿ ಚಹಾವನ್ನು ಕ್ಷಣದಲ್ಲೇ ಹೀರಿಬಿಡುತ್ತಾರೆ, ಇನ್ನೂ ಕೆಲವರು ಅದೇ ಚಹಾ ಕುಡಿಯುವಾಗ ನಾಲಿಗೆ ಸುಟ್ಟುಕೊಳ್ಳುತ್ತಾರೆ ಏಕೆ?

ಡೈಲಾಗ್ಸ್ ಕೆಫೆ, ಜೆಪಿ ನಗರ:

ನೀವು ಕೆಫೆಗಳಲ್ಲಿ ನಿಮ್ಮ ಆಫೀಸ್​​ ಕರೆಗಳು ಮೀಟಿಂಗ್​​ಗಳನ್ನು ಮಾಡಲು ಬಯಸಿದರೆ ಜೆಪಿ ನಗರದಲ್ಲಿರುವ ಡೈಲಾಗ್ಸ್ ಕೆಫೆ ಉತ್ತಮ ಆಯ್ಕೆಯಾಗಿದೆ. ನೀವಿಲ್ಲಿ ಆರ್ಡರ್ ಮಾಡುವುದಕ್ಕಿಂತ ಹೆಚ್ಚಾಗಿ ಕೆಫೆಯಲ್ಲಿ ಕಳೆಯುವ ಸಮಯಕ್ಕೆ ಪಾವತಿಸಬೇಕಾಗುತ್ತದೆ. ಇಲ್ಲಿ ಗಂಟೆಯ ಪಾಸ್ ಮತ್ತು ದಿನದ ಪಾಸ್​​​ಗಳು ಲಭ್ಯವಿದ್ದು. ಪಾಸ್​​ನಿಂದ ನೀವು ಕೆಫೆಯ ದೈನಂದಿನ ಮೆನುವಿನಿಂದ ಆಹಾರ ಮತ್ತು ಪಾನೀಯಗಳನ್ನು ಪಡೆಯಬಹುದು.

ಟೀ ವಿಲ್ಲಾ ಕೆಫೆ, ಜಯನಗರ:

ಇದು ವೈವಿಧ್ಯಮಯವಾದ ಎಲ್ಲಾ ಸಸ್ಯಾಹಾರಿ ಮೆನುವನ್ನು ಹೊಂದಿದೆ ಮತ್ತು ಅದರ ನೈರ್ಮಲ್ಯ ಮತ್ತು ಅತ್ಯುತ್ತಮ ಸೇವೆಗೆ ಹೆಸರುವಾಸಿಯಾಗಿದೆ. ಬೆಂಗಳೂರಿನಂತಹ ಅಧಿಕ ಜನದಟ್ಟನೆ ಇರುವಲ್ಲಿ ನೀವು ಆಫೀಸ್ ಕಾನ್ಫರೆನ್ಸ್ ಕಾಲ್​​ಗಳು, ಗೂಗಲ್​​ ಮೀಟ್​​​​ಗಳಿಗೆ ಶಾಂತವಾದ ಸ್ಥಳಗಳನ್ನು ಹುಡುಕುತ್ತಿದ್ದರೆ ಜಯನಗರದ ಟೀ ವಿಲ್ಲಾ ಕೆಫೆ ಉತ್ತಮ ಆಯ್ಕೆಯಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:31 pm, Fri, 17 February 23