
ಮಕ್ಕಳ ಜೀವನದಲ್ಲಿ ತಂದೆಗೆ (Father) ವಿಶೇಷ ಸ್ಥಾನವಿದೆ. ಅಮ್ಮ ಮಮತೆಯ ಬಂಡಿಯಾದರೆ ತಂದೆ ಜವಬ್ದಾರಿ, ಶಿಸ್ತು, ನೈತಿಕತೆ, ಸದ್ಗುಣ, ಜೀವನ ಪಾಠಗಳನ್ನು ಕಲಿಸುವ ಶಿಕ್ಷಕ. ಇದೇ ಕಾರಣಕ್ಕೆ ತಂದೆ ಎಂಬ ಸೂಪರ್ ಹೀರೋ ಎಂದ್ರೆ ಮಕ್ಕಳಿಗೆ ಗೌರವ, ಪ್ರೀತಿ. ಪ್ರತಿಯೊಬ್ಬರು ತಮ್ಮ ತಂದೆಗೆ ವಿಶೇಷವಾದ ಗೌರವವನ್ನು ನೀಡೇ ನೀಡುತ್ತಾರೆ. ಹೀಗೆ ತಂದೆಗೆ ಯಾವ ರೀತಿ ಗೌರವ ನೀಡುತ್ತೇವೋ, ಅಷ್ಟೇ ಗೌರವವನ್ನು ಈ ನಾಲ್ವರಿಗೆ ನೀಡಬೇಕು ಎನ್ನುತ್ತಾರೆ ಚಾಣಕ್ಯರು. ಹಾಗಿದ್ರೆ ಚಾಣಕ್ಯರ (Chanakya) ಪ್ರಕಾರ ಯಾರನ್ನೆಲ್ಲಾ ತಂದೆಯಂತೆ ಗೌರವಿಸಬೇಕು ಎಂಬುದನ್ನು ನೋಡೋಣ ಬನ್ನಿ.
ಗುರುವನ್ನು ತಂದೆಯಂತೆ ಗೌರವಿಸಿ: ಆಚಾರ್ಯ ಚಾಣಕ್ಯರ ಪ್ರಕಾರ, ತಂದೆ-ತಾಯಿಯ ನಂತರ, ನಮ್ಮ ಯಶಸ್ಸನ್ನು ನೋಡಲು ಬಯಸುವ ವ್ಯಕ್ತಿ ಎಂದರೆ ಅದು ಗುರುಗಳು. ತಂದೆ ತನ್ನ ಮಕ್ಕಳ ಭವಿಷ್ಯವನ್ನು ನಿರ್ಮಿಸಲು ಹಗಲಿರುಳು ಶ್ರಮಿಸಿದರೆ, ಗುರುಗಳು ತಮ್ಮ ಜ್ಞಾನದ ಮೂಲಕ ವಿದ್ಯಾರ್ಥಿಗಳ ಜೀವನವನ್ನು ಬೆಳಗುತ್ತಾರೆ. ಆದ್ದರಿಂದ, ಗುರುವನ್ನು ತಂದೆಯಂತೆ ಗೌರವಿಸಬೇಕು ಎಂದು ಹೇಳಿದ್ದಾರೆ.
ಪುರೋಹಿತರು: ಆಚಾರ್ಯ ಚಾಣಕ್ಯರ ಪ್ರಕಾರ, ಯಜ್ಞ, ಪೂಜೆ, ಪುನಸ್ಕಾರ ನಡೆಸುವ ಪುರೋಹಿತರು ಸಹ ತಂದೆಯಂತೆ ಗೌರವಕ್ಕೆ ಅರ್ಹರು. ಹಾಗಾಗಿ ಪುರೋಹಿತರನ್ನು ತಂದೆಯಂತೆ ಗೌರವಿಸಬೇಕು.
ಇದನ್ನೂ ಓದಿ: ಯಾವುದೇ ಕಾರಣಕ್ಕೂ ಇಂತಹವರಿಗೆ ಹಣವನ್ನು ಸಾಲ ಕೊಡಬೇಡಿ; ಯಾಕೆ ಗೊತ್ತಾ?
ನಿಮ್ಮನ್ನು ತಂದೆಯಂತೆ ನೋಡಿಕೊಳ್ಳುವ ವ್ಯಕ್ತಿ: ನೀವು ವಿದೇಶದಲ್ಲಿ ಅಧ್ಯಯನ ಮಾಡುತ್ತಿದ್ದರೆ ಅಥವಾ ಮನೆ ಬಿಟ್ಟು ಬೇರೆ ಯಾವುದೋ ಕಡೆ ಕೆಲಸ ಮಾಡುತ್ತಿದ್ದರೆ, ಅಲ್ಲಿ ನಿಮ್ಮನ್ನು ನೋಡಿಕೊಳ್ಳುವ, ಆರೈಕೆ ಮಾಡುವ ವ್ಯಕ್ತಿಯನ್ನು ನೀವು ತಂದೆಯಂತೆ ಗೌರವಿಸಬೇಕು ಎಂದು ಹೇಳುತ್ತಾರೆ ಚಾಣಕ್ಯ.
ಕಷ್ಟದ ಸಮಯದಲ್ಲಿ ನಿಮಗೆ ಸಹಾಯ ಮಾಡುವ ವ್ಯಕ್ತಿ: ನಿಮ್ಮ ಕಷ್ಟದ ಸಮಯದಲ್ಲಿ ನಿಮಗೆ ಸಹಾಯ ಮಾಡುವ ವ್ಯಕ್ತಿ, ಅಪಾಯದ ಪರಿಸ್ಥಿಯಲ್ಲಿ ನಿಮ್ಮನ್ನು ರಕ್ಷಿಸುವ ವ್ಯಕ್ತಿಯನ್ನು ಸಹ ತಂದೆಯಂತೆಯೇ ಗೌರವಿಸಬೇಕು ಎಂದು ಆಚಾರ್ಯ ಚಾಣಕ್ಯೆ ಹೇಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ