Chanakya Niti: ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಈ ಪಾಠಗಳನ್ನು ಕಲಿಸಬೇಕು ಎನ್ನುತ್ತಾರೆ ಚಾಣಕ್ಯ

ಮಕ್ಕಳನ್ನು ಬೆಳೆಸುವುದೆಂದರೆ ಅವರಿಗೆ ಕೇವಲ ಉತ್ತಮ ಶಿಕ್ಷಣ ನೀಡುವುದು ಮಾತ್ರವಲ್ಲ, ಉತ್ತಮ ಅಭ್ಯಾಸಗಳು ಮತ್ತು ಮೌಲ್ಯಗಳನ್ನು ಕಲಿಸುವುದು ಹೌದು. ಇಂತಹ ಜೀವನ ಪಾಠಗಳನ್ನು ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಿದರೆ ಮಕ್ಕಳ ಭವಿಷ್ಯವು ಉಜ್ವಲವಾಗಿರುತ್ತದೆ. ಅದರಲ್ಲೂ ಈ ಒಂದಷ್ಟು ಜೀವನ ಪಾಠಗಳನ್ನು ಪ್ರತಿಯೊಬ್ಬ ಪೋಷಕರು ಸಹ ತಮ್ಮ ಮಕ್ಕಳಿಗೆ ಕಲಿಸಲೇಬೇಕು ಎಂದು ಅಚಾರ್ಯ ಚಾಣಕ್ಯರು ಹೇಳಿದ್ದಾರೆ. ಅವು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Chanakya Niti: ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಈ ಪಾಠಗಳನ್ನು ಕಲಿಸಬೇಕು ಎನ್ನುತ್ತಾರೆ ಚಾಣಕ್ಯ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jun 13, 2026 | 7:19 PM

ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರು (parent) ಬಹುಮುಖ್ಯ ಪಾತ್ರವನ್ನು  ವಹಿಸುತ್ತಾರೆ. ಹಾಗಾಗಿ ಮಕ್ಕಳಿಗೆ ಬಾಲ್ಯದಲ್ಲಿ ಶಿಕ್ಷಣದ ಜೊತೆಗೆ ಒಳ್ಳೆಯ ಮೌಲ್ಯಗಳನ್ನು, ಉತ್ತಮ ಅಭ್ಯಾಸಗಳನ್ನು ಕಲಿಸುವುದು ತುಂಬಾನೇ ಮುಖ್ಯವಾಗಿದೆ. ಪೋಷಕರು ಕಲಿಸುವ ಈ ಪಾಠಗಳು ಮಕ್ಕಳನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಅದರಲ್ಲೂ ಈ ಕೆಲವೊಂದು ವಿಷಯಗಳನ್ನು ಹೆತ್ತವರು ಮಕ್ಕಳಿಗೆ ಕಲಿಸಿಕೊಡಲೇಬೇಕು, ಇದು ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಹೆತ್ತವರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಯಾವೆಲ್ಲಾ ವಿಚಾರಗಳನ್ನು ಕಲಿಸಿಕೊಡಬೇಕು ಎಂಬುದನ್ನು ನೋಡೊಣ ಬನ್ನಿ.

ಪೋಷಕರು ಮಕ್ಕಳಿಗೆ ಕಲಿಸಿಕೊಡಬೇಕಾದ ಪಾಠಗಳು:

ಯಾವಾಗಲೂ ಸ್ನೇಹಿತರನ್ನು ಬುದ್ಧಿವಂತಿಕೆಯಿಂದ ಆರಿಸಿ: ಇದು ಮಕ್ಕಳಿಗೆ ಹೇಳಿಕೊಡಬೇಕಾದ ಅತ್ಯಂತ ಮುಖ್ಯವಾದ ಪಾಠಗಳಲ್ಲಿ ಒಂದಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ, ನಾವು ಜೊತೆಗಿರುವ ಜನರು ನಮ್ಮ ಅಭ್ಯಾಸಗಳು, ನಮ್ಮ ಆಲೋಚನೆ ಮತ್ತು ನಮ್ಮ ಭವಿಷ್ಯದ ಮೇಲೆ ಪ್ರಭಾವ ಬೀರುತ್ತಾರೆ. ಹಾಗಾಗಿ ಯಾವಾಗಲೂ ಒಳ್ಳೆಯವರ ಸಹವಾಸವೇ ಮಾಡಬೇಕು ಎಂದು ಪೋಷಕರು ಮಕ್ಕಳಿಗೆ ತಿಳಿಹೇಳಬೇಕು.

ಕಠಿಣ ಪರಿಶ್ರಮ ಅತ್ಯಗತ್ಯ: ಯಶಸ್ಸಿಗೆ ಶಾರ್ಟ್‌ಕಟ್‌ಗಳು ಇಲ್ಲ ಮತ್ತು ತ್ವರಿತ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ.  ಯಶಸ್ಸು ಯಾವಾಗಲೂ ಸಮರ್ಪಣೆ, ಶಿಸ್ತು ಮತ್ತು ನಿರಂತರ ಪ್ರಯತ್ನದಿಂದ ಬರುತ್ತದೆ. ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪವು ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಆದ್ದರಿಂದ ಪೋಷಕರು ಮಕ್ಕಳಿಗೆ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸನ್ನು ಗಳಿಸಲು ಸಾಧ್ಯ ಎಂಬುದನ್ನು ಕಲಿಸಬೇಕು. ಜೊತೆಗೆ ಈ ಯಶಸ್ಸಿನ ಹಾದಿಯಲ್ಲಿ ಶಿಸ್ತು ಎಷ್ಟು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಸಹ ಕಲಿಸಬೇಕು.

ಭಾವನೆಗಳನ್ನು ನಿಯಂತ್ರಿಸುವುದು ಹೇಗೆಂದು ಕಲಿಸಿ: ಪೋಷಕರು ತಮ್ಮ ಮಕ್ಕಳಿಗೆ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಮತ್ತು ಕಷ್ಟಕರವಾದ ಕ್ಷಣಗಳನ್ನು ಶಾಂತವಾಗಿ ನಿಭಾಯಿಸುವ ಹೇಗೆ ಎಂಬುದನ್ನು ಕಲಿಸಬೇಕು.

ಶಿಸ್ತಿನ ಮಹತ್ವವನ್ನು ವಿವರಿಸಿ: ಶಿಸ್ತು ಬದುಕುವ ಕಲೆಯನ್ನು ಕಲಿಸುತ್ತದೆ. ಆದ್ದರಿಂದ, ಮಕ್ಕಳಲ್ಲಿ ಮೊದಲಿನಿಂದಲೂ ಶಿಸ್ತನ್ನು ಬೆಳೆಸಿ. ಸಮಯಕ್ಕೆ ಸರಿಯಾಗಿ ಮಲಗುವುದು, ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಮತ್ತು ಸಮಯಕ್ಕೆ ಸರಿಯಾಗಿ ಆಟವಾಡುವುದು. ಈ ಎಲ್ಲಾ ಚಟುವಟಿಕೆಗಳನ್ನು ಶಿಸ್ತಿನ ಚೌಕಟ್ಟಿನೊಳಗೆ ಮಾಡುವುದನ್ನು ಕಲಿಸಿ.

ಇದನ್ನೂ ಓದಿ:  ಅತಿಯಾದ ಒಳ್ಳೆಯತನ ಒಳ್ಳೆಯದಲ್ಲ; ಏಕೆ ಗೊತ್ತಾ?

ಜ್ಞಾನ ಮತ್ತು ಕಲಿಕೆಯ ಹಸಿವು: ಜ್ಞಾನವು ವ್ಯಕ್ತಿಯ ದೊಡ್ಡ ಶಕ್ತಿ ಎಂದು ಚಾಣಕ್ಯ ನಂಬಿದ್ದರು. ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಕಲಿಯುವ ಕುತೂಹಲ ಮತ್ತು ಓದುವ ಅಭ್ಯಾಸವನ್ನು ಬೆಳೆಸುವುದು ಮುಖ್ಯ. ಇದು ಅವರ ಪರಿಧಿಯನ್ನು ವಿಸ್ತರಿಸುತ್ತದೆ ಮತ್ತು ಪ್ರತಿಯೊಂದು ಸಂದರ್ಭದಲ್ಲೂ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಅನುವು ಮಾಡಿಕೊಡುತ್ತದೆ.

ಧರ್ಮ ಮತ್ತು ನಂಬಿಕೆಯ ಬಗ್ಗೆ ಜಾಗೃತಿ ಮೂಡಿಸಿ: ಮಕ್ಕಳಿಗೆ ಧರ್ಮ ಮತ್ತು ನಂಬಿಕೆಯ ಬಗ್ಗೆ ಪೋಷಕರು ಮಕ್ಕಳಿಗೆ ಕಲಿಸಬೇಕು ಎನ್ನುತ್ತಾರೆ ಚಾಣಕ್ಯ. ಇದು ಅವರಿಗೆ ಸರಿ ಮತ್ತು ತಪ್ಪುಗಳ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.

ವಿಧೇಯತೆಯನ್ನು ಬೆಳೆಸಿಕೊಳ್ಳಿ: ಹಿರಿಯರಿಗೆ ಗೌರವ ಕೊಡುವುದು ಹೇಗೆ, ಸಮಾಜದಲ್ಲಿ ಹೇಗಿರಬೇಕು ಇತ್ಯಾದಿ ವಿಧೇಯತೆಯ ಪಾಠವನ್ನು ಮಾಡಬೇಕು. ಉತ್ತಮ ನಡವಳಿಕೆ ಎಷ್ಟು ಮುಖ್ಯ ಎಂಬುದನ್ನು ಹೇಳಬೇಕು. ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಇವು ಮಕ್ಕಳನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us