Chanakya Niti: ಪುರುಷರೇ… ಇಂತಹ ಹೆಣ್ಣನ್ನು ಯಾವ ಕಾರಣಕ್ಕೂ ಮದುವೆಯಾಗಬೇಡಿ

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು ಹೇಳಲಾಗುತ್ತದೆ. ಆದರೆ ಇಂತಹ ಹೆಣ್ಣನ್ನು ಮದುವೆಯಾದರೆ ಅಥವಾ ಹೆಂಡತಿಯಾದವಳಿಗೆ ಈ ಗುಣಗಳಿದ್ದರೆ ಗಂಡ ಮಾತ್ರವಲ್ಲ ಇಡೀ ಕುಟುಂಬದ ಶಾಂತಿ ನೆಮ್ಮದಿ ಹಾಳಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಪುರುಷನೂ ಈ ಕೆಲವು ಗುಣಗಳಿರುವ ಮಹಿಳೆಯನ್ನು ಎಂದಿಗೂ ಮದುವೆಯಾಗಬಾರದು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಹಾಗಿದ್ದರೆ ಎಂತಹ ಹೆಣ್ಣನ್ನು ಮದುವೆಯಾಗಬಾರದು ಎಂಬುದನ್ನು ನೋಡೋಣ ಬನ್ನಿ.

Chanakya Niti: ಪುರುಷರೇ… ಇಂತಹ ಹೆಣ್ಣನ್ನು ಯಾವ ಕಾರಣಕ್ಕೂ ಮದುವೆಯಾಗಬೇಡಿ
ಚಾಣಕ್ಯ ನೀತಿ
Image Credit source: Pinterest
Edited By:

Updated on: May 09, 2026 | 7:36 PM

ಮದುವೆ ಎನ್ನುವಂತಹದ್ದು ಜೀವನದ ಪ್ರಮುಖ ಘಟ್ಟ ಮಾತ್ರವಲ್ಲ ಜೀವನದ ಬಹುದೊಡ್ಡ ತಿರುವು ಕೂಡ ಹೌದು. ಆದ್ದರಿಂದ ಸರಿಯಾದ ಜೀವನ ಸಂಗಾತಿಯನ್ನು (Life Partner) ಆಯ್ಕೆ ಮಾಡುವುದು ತುಂಬಾನೇ ಮುಖ್ಯವಾಗಿದೆ. ಜೀವನ ಪಯಣದಲ್ಲಿ ನಿಮ್ಮ ಜೊತೆಗಿರುವ ಸಂಗಾತಿ ಸದ್ಗುಣಶೀಲರಾಗಿದ್ದರೆ, ಆ ಮನೆ ಸ್ವರ್ಗವಾಗುತ್ತದೆ. ಅದೇ ಕೆಲವು ನಕಾರಾತ್ಮಕ ಗುಣಗಳನ್ನು ಹೊಂದಿರುವ ಯಾರಾದರೂ ನಿಮ್ಮ ಜೀವನದಲ್ಲಿ ಪ್ರವೇಶಿಸಿದರೆ, ನಿಮಗೆ ಮನಸ್ಸಿನ ಶಾಂತಿ ಇರುವುದಿಲ್ಲ ಎಂದು ಚಾಣಕ್ಯ ಎಚ್ಚರಿಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಪುರುಷನೂ ಮದುವೆಯಾಗುವ ಮುನ್ನ ಈ ಕೆಲವು ವಿಷಯಗಳತ್ತ ಗಮನ ಹರಿಸಬೇಕು, ಅದರಲ್ಲೂ ಈ ಕೆಲವು ಗುಣಗಳಿರುವ ಹೆಣ್ಣನ್ನು ಮದುವೆಯಾಗಲೇಬಾರದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಹಾಗಿದ್ರೆ ಪುರುಷರು ಎಂತಹ ಹೆಣ್ಣನ್ನು ಮದುವೆಯಾಗಬಾರದು ಎಂಬುದನ್ನು ನೋಡೋಣ ಬನ್ನಿ,

ಪುರುಷರು ಇಂತಹ ಹೆಣ್ಣನ್ನು ಮದುವೆಯಾಗಬಾರದಂತೆ:

ಸೌಂದರ್ಯದ ಹೆಮ್ಮೆ ಪಡುವ ಹೆಣ್ಣು: ಚಾಣಕ್ಯನ ಪ್ರಕಾರ, ಒಬ್ಬ ಹುಡುಗಿ ತನ್ನ ಬಾಹ್ಯ ಸೌಂದರ್ಯದ ಬಗ್ಗೆ ಅತಿಯಾಗಿ ಹೆಮ್ಮೆಪಡುತ್ತಿದ್ದರೆ ಅಂತಹ ಹೆಣ್ಣನ್ನು ಮದುವೆಯಾಗಬಾರದಂತೆ. ಆಕೆ ತನ್ನ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸುತ್ತಾಳೆ.  ಅವಳು ಇತತರನ್ನು ಖುಷಿಯಾಗಿ ನೋಡಿಕೊಳ್ಳಲು ಸಾಧ್ಯವೇ ಇಲ್ಲ.

ಇತರರ ಬಗ್ಗೆ ಕೆಟ್ಟ ಮಾತುಗಳನ್ನಾಡುವ ಮಹಿಳೆ: ಯಾವಾಗಲೂ ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವ ಅಥವಾ ಇತರರ ಬಗ್ಗೆ ಕೆಟ್ಟ ಆಲೋಚನೆಗಳನ್ನು ಹೊಂದಿರುವ , ಚಾಡಿ ಹೇಳುವ ಮಹಿಳೆಯರಿಂದ ದೂರವಿರಬೇಕು. ಅಂತಹ ಮಹಿಳೆಯರು ಕುಟುಂಬದಲ್ಲಿ ಅಶಾಂತಿಯನ್ನು ಉಂಟುಮಾಡುತ್ತಾರೆ. ಹಾಗಾಗಿ ಅಂತಹ ಹೆಣ್ಣಿನಿಂದ ದೂರವಿದ್ದಷ್ಟು ಒಳ್ಳೆಯದು.

ಭೌತಿಕ ಸೌಕರ್ಯಗಳ ಬಗ್ಗೆ ಯೋಚಿಸುವುದು: ಮನೆ, ಕಾರು, ಆಭರಣ, ಹಣ ಅಂತೆಲ್ಲಾ ಭೌತಿಕ ಸೌಕರ್ಯಗಳಿಗೆ ಆದ್ಯತೆ ನೀಡುವ ಹುಡುಗಿಯರು ಅಥವಾ ಹೆಂಡತಿಯರು ತಮ್ಮ ಗಂಡನ ಭಾವನೆಗಳಿಗೆ ಎಂದಿಗೂ ಬೆಲೆ ಕೊಡಲಾರರು. ಇಂತಹ ಸ್ವಾರ್ಥಿ ಹೆಣ್ಣನ್ನು ಮದುವೆಯಾದರೆ ಜೀವನಪರ್ಯಂತ ನರಕಯಾತನೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ಆಚಾರ್ಯ ಚಾಣಕ್ಯ.

ಯಾವಾಗಲೂ ಇತರರನ್ನು ಅವಮಾನಿಸುವುದು: ಆಚಾರ್ಯ ಚಾಣಕ್ಯರ ಪ್ರಕಾರ, ಇತರರನ್ನು ನಿರಂತರವಾಗಿ ಅವಮಾನಿಸುವ ಮಹಿಳೆಯನ್ನು ಎಂದಿಗೂ ಮದುವೆಯಾಗಬಾರದು. ಅಂತಹ ಹುಡುಗಿಯರು ಎಂದಿಗೂ ತಮ್ಮ ಕುಟುಂಬಕ್ಕೆ ಗೌರವವನ್ನು ನೀಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಅತಿಯಾದ ನಿರೀಕ್ಷೆ ಒಳ್ಳೆಯದಲ್ಲ ಅನ್ನೋದು ಇದೇ ಕಾರಣಕ್ಕೆ ನೋಡಿ

ಸುಳ್ಳಿನ ಹಾದಿಯಲ್ಲಿ ನಡೆಯುವ ಹೆಣ್ಣು: ಚಾಣಕ್ಯನ ಪ್ರಕಾರ, ನಿರಂತರವಾಗಿ ಸುಳ್ಳು ಹೇಳುವ ಮತ್ತು ಕೆಟ್ಟ ಮಾರ್ಗವನ್ನು ಅನುಸರಿಸುವ ಅಭ್ಯಾಸ ಹೊಂದಿರುವ ಹೆಣ್ಣನ್ನು ಮದುವೆಯಾಗಬಾರದು. ಆಕೆ ಗಂಡನಿಗೆ ಮಾತ್ರವಲ್ಲ ಕುಟುಂಬಕ್ಕೂ ಹಾನಿಕಾರಕ ಎಂದಿದ್ದಾರೆ ಚಾಣಕ್ಯ. ಅಲ್ಲದೆ ಅಂತಹ ಹೆಣ್ಣು ಸಂಬಂಧದಲ್ಲಿ ಪ್ರಾಮಾಣಿಕಳಾಗಿ ಇರಲೂ ಸಾಧ್ಯವಿಲ್ಲ.

ಅಹಂಕಾರ ಮನೋಭಾವ: ಇತರರಿಗಿಂತ ತಾವು ಶ್ರೇಷ್ಠರೆಂದು ಭಾವಿಸುವ, ಅಹಂಕಾರ  ಭಾವವನ್ನು ಹೊಂದುರುವ ಹೆಣ್ಣನ್ನು ಮದುವೆಯಾಗಬಾರದು. ಏಕೆಂದರೆ ಆಕೆ ಸಂಬಂಧಗಳಿಗೆ ಗೌರವಿಸಲು ಸಾಧ್ಯವಿಲ್ಲ. ಇದು ಮನೆಯಲ್ಲಿ ಘರ್ಷಣೆಗಳಿಗೆ ಕಾರಣವಾಗಬಹುದು. ಹಾಗಾಗಿ ಇಂತಹ ಹೆಣ್ಣಿನಿಂದ ದೂರವಿರುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us