
ಪ್ರತಿಯೊಬ್ಬರೂ ಸಹ ಜೀವನದಲ್ಲಿ ಉದ್ಧಾರವಾಗಬೇಕು, ಯಶಸ್ಸನ್ನು (Success) ಸಾಧಿಸಬೇಕು, ನಾಲ್ಕು ಜನ ನಮ್ಮನ್ನು ಕೊಂಡಾಡುವ ಹಾಗೆ ಬದುಕಬೇಕು ಎಂದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ನಾವು ತಿಳಿದೋ ತಿಳಿಯದೆಯೋ ಮಾಡುವಂತಹ ಕೆಲವೊಂದು ತಪ್ಪುಗಳು ನಮ್ಮ ಸಂಪೂರ್ಣ ಜೀವನವನ್ನೇ ಹಾಳು ಮಾಡುತ್ತದೆ. ಆದ್ದರಿಂದ, ಜೀವನದಲ್ಲಿ ಯಶಸ್ವಿಯಾಗಲು, ಪ್ರತಿಯೊಬ್ಬ ವ್ಯಕ್ತಿಯು ಈ ನಾಲ್ಕು ತಪ್ಪುಗಳನ್ನು ಎಂದಿಗೂ ಮಾಡಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ದರೆ ವ್ಯಕ್ತಿಯ ಜೀವನವನ್ನು ಹಾಳು ಮಾಡುವಂತಹ ಆ ಅಭ್ಯಾಸಗಳು, ತಪ್ಪುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಸೋಮಾರಿತನ: ಸೋಮಾರಿತನವು ಜೀವನದ ಪ್ರಗತಿಗೆ, ಯಶಸ್ಸಿಗೆ ಅಡ್ಡಿಯಾಗುತ್ತದೆ, ಅಲ್ಲದೆ ಸೋಮಾರಿತನವು ವ್ಯಕ್ತಿಯ ಬಹುದೊಡ್ಡ ಶತ್ರು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಏಕೆಂದರೆ ಇದು ಪ್ರಗತಿಯಲ್ಲಿರುವ ಕೆಲಸವನ್ನು ಸಹ ಹಾಳುಮಾಡುತ್ತದೆ. ಜೊತೆಗೆ ಸೋಮಾರಿ ವ್ಯಕ್ತಿಯೂ ಎಂದಿಗೂ ಜೀವನದಲ್ಲಿ ಮುಂದೆ ಬರಲು ಸಾಧ್ಯವೇ ಇಲ್ಲ. ಜೀವನದಲ್ಲಿ ಉದ್ಧಾರವಾಗಲು ಬಯಸುವವರು ಮೊದಲಿಗೆ ಸೋಮಾರಿತನವನ್ನು ಬಿಡಬೇಕು. ಆಗ ಮಾತ್ರ ಅಂದುಕೊಂಡ ಕೆಲಸವನ್ನು ಸಾಧಿಸಲು ಸಾಧ್ಯವಾಗೋದು.
ಯೋಚಿಸದೆ ವರ್ತಿಸುವುದು: ಯೋಚಿಸದೆ ಯಾವುದೇ ಕಾರ್ಯಗಳನ್ನು ಕೈಗೊಳ್ಳಬಾರದು ಮತ್ತು ಯೋಚಿಸದೆ ಎಂದಿಗೂ ವರ್ತಿಸಬಾರದು, ಇದು ಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಜೀವನದಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು, ಅದರ ಫಲಿತಾಂಶದ ವಿವಿಧ ಅಂಶಗಳನ್ನು ಪರಿಗಣಿಸಬೇಕು. ಆಗ ಮಾತ್ರ ಅಂದುಕೊಂಡ ಕಾರ್ಯವನ್ನು ಸಾಧಿಸಲು ಹಾಗೂ ಯಶಸ್ಸನ್ನು ಗಳಿಸಲು ಸಾಧ್ಯ.
ಇದನ್ನೂ ಓದಿ: ಈ ಅಭ್ಯಾಸಗಳು ವ್ಯಕ್ತಿಯ ಗೌರವವನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ
ಕೆಟ್ಟವರ ಸಹವಾಸ: ಕೆಟ್ಟ ಜನರ ಸಹವಾಸದಿಂದ ಆದಷ್ಟು ದೂರವಿರಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಒಬ್ಬ ವ್ಯಕ್ತಿಯು ಒಳ್ಳೆಯ ಜನರೊಂದಿಗೆ ಸಹವಾಸ ಮಾಡಿದರೆ, ಅವರ ಜೀವನವು ಉತ್ತಮವಾಗಿರುತ್ತದೆ. ಅದೇ ಆತ ಕೆಟ್ಟವರ ಸಹವಾಸ ಮಾಡಿದರೆ, ಆತನೂ ಆ ಕೆಟ್ಟ ಗುಣಗಳನ್ನು ತನ್ನೊಳಗೆ ಅಳವಡಿಸಿಕೊಳ್ಲುತ್ತಾನೆ. ಇದು ಆತನ ಜೀವನವನ್ನೇ ಹಾಳು ಮಾಡುತ್ತದೆ, ಆದ್ದರಿಂದ ಯಾವಾಗಲೂ ಸಕಾರಾತ್ಮಕ ಜನರೊಂದಿಗೆ ಬೆರೆಯಬೇಕು. ಉತ್ತಮ ಜನರ ಸಹವಾಸ ಮಾಡಿದರೆ ನೀವು ಕೂಡ ಜೀವನದಲ್ಲಿ ಏಳಿಗೆ ಗಳಿಸಲು ಸಾಧ್ಯ.
ಸಮಯ ವ್ಯರ್ಥ ಮಾಡುವುದು: ಆಚಾರ್ಯ ಚಾಣಕ್ಯರು ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸುವಂತೆ ಸಲಹೆ ನೀಡಿದ್ದಾರೆ. ಏಕೆಂದರೆ ಈ ಒಂದು ತಪ್ಪು ಸಂಪೂರ್ಣ ಜೀವನವನ್ನೇ ಹಾಳು ಮಾಡುತ್ತದೆ. ಕಳೆದುಹೋದ ಹಣವನ್ನು ಕಠಿಣ ಪರಿಶ್ರಮದ ಮೂಲಕ ಮರಳಿ ಪಡೆಯಬಹುದು, ಆದರೆ ಒಮ್ಮೆ ಸಮಯ ಕಳೆದುಹೋದರೆ ಅದನ್ನು ಎಂದಿಗೂ ಮರಳಿ ಪಡೆಯಲು ಸಾಧ್ಯವಿಲ್ಲ. ಹಾಗಗಿ ಸಿಕ್ಕ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಆಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ