Chanakya Niti: ಮಹಿಳೆಯರು ಈ ರೀತಿಯ ಜನರಿಂದ ಸಾಧ್ಯವಾದಷ್ಟು ದೂರವಿರಬೇಕು ಎನ್ನುತ್ತಾರೆ ಚಾಣಕ್ಯ
ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಶ್ರೀಮಂತಿಕೆ, ಯಶಸ್ಸು ಮಾತ್ರವಲ್ಲದೆ ವೈಯಕ್ತಿಕ ಜೀವನಕ್ಕೆ ಬೇಕಾದ ಸಾಕಷ್ಟು ವಿಚಾರಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಮಹಿಳೆಯರಿಗೆ ಸಂಬಂಧಪಟ್ಟ ಒಂದಷ್ಟು ವಿಚಾರಗಳ ಬಗ್ಗೆ ಹೇಳಿದ್ದು, ಪ್ರತಿಯೊಬ್ಬ ಮಹಿಳೆಯೂ ಈ ಒಂದಷ್ಟು ಜನರಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದಿದ್ದಾರೆ. ಚಾಣಕ್ಯರು ಹೇಳಿರುವಂತೆ ಹೆಂಗಳೆಯರು ಎಂತಹ ಜನರ ಸಹವಾಸದಿಂದ ದೂರವಿದ್ದರೆ ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ.

ಸಮಾಜ ಎಷ್ಟೇ ಮುಂದುವರೆದಿದ್ದರೂ, ಇಂದಿನ ಈ ಜಗತ್ತಿನಲ್ಲಿ ಮಹಿಳೆಯರೂ ಎಲ್ಲಾ ಕ್ಷೇತ್ರದಲ್ಲೂ ಪ್ರಗತಿಯನ್ನು ಸಾಧಿಸುತ್ತಿದ್ದರೂ ಸಹ ಕೆಲವೊಂದು ವಿಚಾರಗಳ ಬಗ್ಗೆ ಅವರು ಕೇರ್‌ಫುಲ್ ಆಗಿದ್ದಷ್ಟು ತುಂಬಾನೇ ಒಳ್ಳೆಯದು ಎನ್ನುತ್ತಾರೆ ಆಚಾರ್ಯ ಚಾಣಕ್ಯ (Acharya Chanakya). ಅದರಲ್ಲೂ ಮಹಿಳೆಯರು ಈ ಒಂದಷ್ಟು ಜನರ ಬಗ್ಗೆ ತುಂಬಾನೇ ಜಾಗರೂಕರಾಗಿರಬೇಕು, ಅಂತಹ ಜನರ ಸಹವಾಸದಿಂದ ಸಾಧ್ಯವಾದಷ್ಟು ದೂರವಿರಬೇಕು, ಇಲ್ಲದಿದ್ದರೆ ಸಂಪೂರ್ಣ ಜೀವನವೇ ಹಾಳಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಚಾಣಕ್ಯರು ಹೇಳಿರುವಂತೆ ಮಹಿಳೆಯರು ಎಂತಹ ಜನರ ಸಹವಾಸದಿಂದ ದೂರವಿದ್ದರೆ ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ.
ಮಹಿಳೆಯರು ಈ ಜನರ ಸಹವಾಸದಿಂದ ದೂರವಿದ್ದಷ್ಟು ಒಳ್ಳೆಯದು:
ಮೋಸಗಾರರು ಮತ್ತು ಸುಳ್ಳುಗಾರರು: ಪ್ರತಿಯೊಂದು ಸಂಬಂಧದಲ್ಲಿಯೂ ಸತ್ಯವು ಪ್ರಮುಖ ಪಾತ್ರ ವಹಿಸುತ್ತದೆ, ಆದರೆ ಸಂಬಂಧದಲ್ಲಿ ಸುಳ್ಳು ಹೇಳುವವರು, ಮೋಸಗಾರರು ಸಹ ಇರುತ್ತಾರೆ. ಚಾಣಕ್ಯರ ಪ್ರಕಾರ, ಈ ರೀತಿ ನಿರಂತರವಾಗಿ ಸುಳ್ಳು ಹೇಳುವ ವ್ಯಕ್ತಿಯನ್ನು ಎಂದಿಗೂ ನಂಬಬಾರದು. ಅಂತಹ ಜನರು ತಮ್ಮ ಅನುಕೂಲಕ್ಕಾಗಿ ಯಾವುದೇ ಸಮಯದಲ್ಲಿ ಸುಳ್ಳನ್ನು ಸುಳ್ಳು ಹೇಳುತ್ತಾರೆ. ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ಹಾಗಾಗಿ ಇಂತಹ ಜನರೊಂದಿಗೆ ಮಹಿಳೆಯರು ಸ್ನೇಹ, ಸಂಬಂಧಗಳನ್ನು ಬೆಳೆಸಿಕೊಳ್ಳುವಾಗ ವಿಶೇಷವಾಗಿ ಜಾಗರೂಕರಾಗಿರಬೇಕು, ಏಕೆಂದರೆ ಅಂತಹ ಜನರು ಸಿಹಿ ಮಾತುಗಳಿಂದ ನಿಮ್ಮ ವಿಶ್ವಾಸವನ್ನು ಗೆಲ್ಲುತ್ತಾರೆ ಮತ್ತು ಅವಕಾಶ ಸಿಕ್ಕ ತಕ್ಷಣ ದ್ರೋಹ ಬಗೆಯುತ್ತಾರೆ.
ನಿಯಂತ್ರಿಸುವವರಿಂದ ದೂರವಿರಿ: ಕೆಲ ಪುರುಷರು ಮಹಿಳೆಯರನ್ನೂ ಪ್ರತಿಯೊಂದು ವಿಷಯಗಳಲ್ಲೂ ನಿಯಂತ್ರಿಸುತ್ತಾರೆ. ಹೌದು ನೀನು ಆ ಕೆಲಸ ಮಾಡಬೇಡ ಹಾಗೆ, ಹೀಗೆ ಅಂತೆಲ್ಲಾ ಮಹಿಳೆಯರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಹೀಗೆ ಪ್ರತಿಯೊಂದು ವಿಷಯದಲ್ಲೂ ನಿಮ್ಮನ್ನು ನಿಯಂತ್ರಿಸುತ್ತಾ, ನಿಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವವರಿಂದ ದೂರವಿದ್ದರೆಯೇ ಒಳ್ಳೆಯದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅಂತಹ ಜನರು ನಿಮ್ಮ ಸ್ವಾಭಿಮಾನಕ್ಕೆ ನೋವುಂಟು ಮಾಡುತ್ತಾರೆ ಚಾಣಕ್ಯರ ಪ್ರಕಾರ, ಮಹಿಳೆಯರು ಎಂದಿಗೂ ತಮ್ಮ ಸ್ವಾಭಿಮಾನವನ್ನು ರಾಜಿ ಮಾಡಿಕೊಳ್ಳಬಾರದು. ನಿಯಂತ್ರಿಸುವ, ಸ್ವಾಭಿಮಾನಕ್ಕೆ ಧಕ್ಕೆ ತರುವ ಜನರಿಂದ ಮಹಿಳೆಯರು ಆದಷ್ಟು ದೂರವಿರಬೇಕು.
ಇದನ್ನೂ ಓದಿ: ಆಫೀಸ್ ಪಾಲಿಟಿಕ್ಸ್‌ನಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ
ದುರಾಸೆಯ ಜನರಿಂದ ದೂರವಿರಿ: ದುರಾಸೆಯ ಜನರು ತಮ್ಮ ಲಾಭಕ್ಕಾಗಿ ಮಾತ್ರ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ. ತಮ್ಮ ಕೆಲಸ ಸಾಧಿಸಿದ ಮೇಲೆ ಮೋಸ ಮಾಡಿ ಹೋಗುತ್ತಾರೆ. ಭಾವನೆಗಳ ಜೊತೆ ಆಟವಾಡುವ ಇಂತಹ ಜನರರಿಂದ ಮಹಿಳೆಯರು ದೂರವಿರಬೇಕು. ಚಾಣಕ್ಯರ ಪ್ರಕಾರ ಮಹಿಳೆಯರು ಇಂತಹ ದುರಾಸೆಯ ಜನರಿಂದ ಸಾಧ್ಯವಾದಷ್ಟು ದೂರವಿರಬೇಕು ಮತ್ತು ಹೆಣ್ಣಿಗೆ ಗೌರವ ನೀಡುವ, ಬೆಂಬಮಲವಾಗಿ ನಿಲ್ಲುವ ಜನರೊಂದಿಗಿರಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




