
ಜೀವನದಲ್ಲಿ ಯಶಸ್ಸು (Success) ಸಾಧಿಸಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಕೆಲವರು ಅಲ್ಪ ಸಮಯದಲ್ಲಿಯೇ ಯಶಸ್ಸನ್ನು ಸಾಧಿಸಿದರೆ ಇನ್ನೂ ಕೆಲವರು ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸನ್ನು ಗಳಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಹೀಗೆ ಯಶಸ್ಸನ್ನು ಗಳಿಸಲು ಕಠಿಣ ಪರಿಶ್ರಮ ತುಂಬಾನೇ ಮುಖ್ಯ. ಇದರ ಜೊತೆಗೆ ಯಶಸ್ಸಿಗೆ ಉತ್ತಮ ತಂತ್ರದ ಅಗತ್ಯವೂ ಇದೆ. ಈ ತಂತ್ರಗಳನ್ನು ಮತ್ತು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ಯಶಸ್ಸು ನಿಮ್ಮದಾಗುತ್ತೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು (Acharya Chanakya). ಹಾಗಿದ್ರೆ ಯಶಸ್ಸು ನಿಮ್ಮನ್ನು ಹಿಂಬಾಲಿಸಲು ಚಾಣಕ್ಯರು ತಿಳಿಸಿರುವ ಯಶಸ್ಸಿನ ಆ ತಂತ್ರಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಸಮಯದ ಸರಿಯಾದ ಬಳಕೆ: ನಿಮಗೆ ಸಿಕ್ಕ ಸಮಯವನ್ನು ನೀವು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ನೀವು ಸರಿಯಾದ ನಿರ್ಧಾರಗಳ ಜೊತೆಗೆ ಸರಿಯಾದ ಕ್ರಮಗಳನ್ನು ತೆಗೆದುಕೊಂಡರೆ ಕಷ್ಟಕರವಾಗಿರುವಂತಹ ಕೆಲಸಗಳು ಸಹ ಸುಲಭವಾಗುತ್ತವೆ. ಸರಿಯಾದ ಸಮಯದಲ್ಲಿ ಕಾರ್ಯನಿರ್ವಹಿಸಲು ವಿಫಲವಾದರೆ ಅಥವಾ ಅಂದುಕೊಂಡ ಕೆಲಸ ಮಾಡಲು ವಿಳಂಬ ಮಾಡಿದರೆ ಅವಕಾಶಗಳು ನಿಮ್ಮ ಕೈತಪ್ಪಿ ಹೋಗುತ್ತವೆ. ಹಾಗಾಗಿ ಸಿಕ್ಕ ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಚಾಣಕ್ಯರು ಹೇಳುತ್ತಾರೆ.
ಯೋಜನೆಗಳೊಂದಿಗೆ ಕೆಲಸ ಮಾಡಿ: ಯೋಚಿಸದೆ ಕೆಲಸ ಮಾಡುವುದಕ್ಕಿಂತ ಯೋಜನೆಯೊಂದಿಗೆ ಕೆಲಸ ಮಾಡುವುದು ಉತ್ತಮ. ಆಚಾರ್ಯ ಚಾಣಕ್ಯರ ಪ್ರಕಾರ, ಬುದ್ಧಿವಂತ ವ್ಯಕ್ತಿಯು ಮೊದಲು ಯೋಚಿಸಿ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಯೋಜನೆ ರೂಪಿಸಿದಾಗ ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಮತ್ತು ಪ್ರಯತ್ನಕ್ಕೆ ಸರಿಯಾದ ಫಲಿತಾಂಶವೂ ಸಿಗುತ್ತದೆ. ಹಾಗಾಗಿ ಯಾವುದೇ ಕೆಲಸ ಮಾಡುವ ಮುನ್ನ ಸರಿಯಾದ ಯೋಜನೆಗಳನ್ನು ರೂಪಿಸಿ.
ಇದನ್ನೂ ಓದಿ: ಈ ಜನರಿಗೆ ಸಹಾಯ ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ
ಸರಿಯಾದ ಜನರೊಂದಿಗೆ ಸ್ನೇಹ: ಚಾಣಕ್ಯರ ಪ್ರಕಾರ, ನಾವು ಮುಂದುವರಿಯಲು, ಯಶಸ್ಸು ಗಳಿಸಲು ನಮ್ಮ ಸುತ್ತಮುತ್ತಲಿನವರಿಂದಲೂ ಸಾಕಷ್ಟು ಕಲಿಯಬೇಕು. ಸರಿಯಾದ ಜನರೊಂದಿಗೆ ನೀವು ಸ್ನೇಹವನ್ನು ಬೆಳೆಸಿದರೆ ಮತ್ತು ಅವರ ಸಂಘದೊಂದಿಗೆ ಇದ್ದರೆ ಅವರ ಅನುಭವಗಳಿಂದ ನಿಮಗೆ ಸಾಕಷ್ಟು ಕಲಿಯಲು ಅವಕಾಶ ಸಿಗುತ್ತದೆ. ಸರಿಯಾದ ಜನರು ಸರಿಯಾದ ಸಮಯದಲ್ಲಿ ಸ್ಫೂರ್ತಿ ನೀಡುತ್ತಾರೆ, ಯಾವುದೇ ತಪ್ಪುಗಳಾಗದಂತೆ ನೋಡಿಕೊಂಡು ನಿಮಗೆ ಸರಿಯಾದ ದಿಕ್ಕನ್ನು ತೋರಿಸುತ್ತಾರೆ. ಇದು ಕೂಡ ಯಶಸ್ಸಿಗೆ ಅತ್ಯಗತ್ಯ ಎನ್ನುತ್ತಾರೆ ಚಾಣಕ್ಯ.
ವಿಷಯಗಳನ್ನು ಕಲಿಯುತ್ತಲೇ ಇರಿ: ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಜೀವನದಲ್ಲಿ ಯಶಸ್ವಿಯಾಗಬೇಕಾದರೆ, ನೀವು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿರಬೇಕು. ಜೀವನಕ್ಕೆ ಸಂಬಂಧಿಸಿದ ವಿಚಾರಗಳು, ಅನುಭವಗಳನ್ನು ಕಲಿಯುತ್ತಲೇ ಇರಬೇಕು. ಈ ಅನುಭವಗಳು ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ