Chanakya Niti: ತಂದೆ-ತಾಯಿ ಮಾಡುವ ಈ ತಪ್ಪುಗಳಿಂದ ಮಕ್ಕಳ ಜೀವನವೇ ಹಾಳಾಗಬಹುದು
ಪ್ರತಿಯೊಬ್ಬ ತಂದೆ-ತಾಯಿಯೂ ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಾರೆ, ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸಬೇಕು ಎಂದು ಬಯಸುತ್ತಾರೆ. ಆದರೆ ತಂದೆ ತಾಯಿ ಮಾಡುವಂತಹ ಈ ಕೆಲವೊಂದು ತಪ್ಪುಗಳು ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಆ ತಪ್ಪುಗಳನ್ನು ತಿದ್ದಿಕೊಂಡರೆ ತುಂಬಾನೇ ಒಳ್ಳೆಯದು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಹಾಗಿದ್ದರೆ ಪೋಷಕರ ಯಾವ ತಪ್ಪುಗಳು ಮಕ್ಕಳ ಜೀವನವನ್ನು ಹಾಳು ಮಾಡುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಮಕ್ಕಳು ತಂದೆ-ತಾಯಿಯನ್ನು (parents) ನೋಡಿ ಅನೇಕ ವಿಚಾರಗಳನ್ನು ಕಲಿಯುತ್ತಾರೆ. ಉದಾಹರಣೆಗೆ ತಂದೆತಾಯಿ ಮಕ್ಕಳ ಮುಂದೆ ಯಾರಿಗಾದರೂ ಕೆಟ್ಟ ಪದವನ್ನು ಉಪಯೋಗಿಸಿದರೆ, ಮಕ್ಕಳು ಕೂಡ ಅದನ್ನೇ ಹೇಳುತ್ತಾರೆ. ಭವಿಷ್ಯದ ದೃಷ್ಟಿಯಿಂದ ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸುವ ಕರ್ತವ್ಯ ಪೋಷಕರದ್ದು. ಪ್ರತಿಯೊಬ್ಬ ತಂದೆ ತಾಯಿಯೂ ತಮ್ಮ ಮಕ್ಕಳು ಸಂಸ್ಕಾರವಂತರಾಗಿಯೇ ಬೆಳೆಯಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಸಾಕಷ್ಟು ಶ್ರಮವನ್ನೂ ಪಡುತ್ತಾರೆ. ಆದರೆ ಎಷ್ಟೇ ಮೌಲ್ಯಗಳನ್ನು ಕಲಿಸಿದರೂ ಪೋಷಕರು ಮಾಡುವ ಈ ಕೆಲವೊಂದಿಷ್ಟು ತಪ್ಪುಗಳು ಮಕ್ಕಳ ಜೀವನವನ್ನೇ ಹಾಳು ಮಾಡುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗಿದ್ದರೆ, ಪೋಷಕರ ಯಾವ ತಪ್ಪುಗಳು ಮಕ್ಕಳ ಜೀವನದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ನೋಡೋಣ ಬನ್ನಿ.
ಪೋಷಕರ ಯಾವ ತಪ್ಪುಗಳು ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ?
ಅತಿಯಾಗಿ ಮುದ್ದಿಸುವುದು: ಕೆಲ ಪೋಷಕರು ತಮ್ಮ ಮಕ್ಕಳನ್ನು ಅತಿಯಾಗಿ ಮುದ್ದಿಸುತ್ತಾರೆ, ಅವರು ಕೇಳಿದ್ದೆಲ್ಲವನ್ನೂ ತಂದು ಕೊಡುತ್ತಾರೆ. ಯಾವತ್ತೂ ಈ ರೀತಿ ಮಾಡಬಾರದು, ಇದರಿಂದ ಮಕ್ಕಳು ಹಠಮಾರಿ ಮತ್ತು ಸ್ವಾರ್ಥಿಗಳಾಗುತ್ತಾರೆ ಎನ್ನುತ್ತಾರೆ ಚಾಣಕ್ಯರು. ಆದ್ದರಿಂದ ಮಕ್ಕಳಿಗೆ ಶಿಸ್ತು, ಜವಾಬ್ದಾರಿ, ತಾಳ್ಮೆಯನ್ನು ಕಲಿಸಿಕೊಡಬೇಕು.
ಮಕ್ಕಳ ಮುಂದೆ ಕೋಪ, ಅಹಂಕಾರವನ್ನು ವ್ಯಕ್ತಪಡಿಸುವುದು: ಚಾಣಕ್ಯ ನೀತಿಯ ಪ್ರಕಾರ, ಪೋಷಕರು ತಮ್ಮ ಮಕ್ಕಳ ಮುಂದೆ ಎಂದಿಗೂ ಕೋಪ ಅಥವಾ ದುರಹಂಕಾರವನ್ನು ಪ್ರದರ್ಶಿಸಬಾರದು. ತಂದೆ ತಾಯಿ ಹೀಗೆ ಮಾಡಿದಾಗ, ಮಕ್ಕಳು ಸಹ ಇದನ್ನೇ ಕಲಿಯುತ್ತಾರೆ, ಜೊತೆಗೆ ಅವರು ತಮ್ಮ ಸ್ನೇಹಿತರೊಂದಿಗೆ ಇದೇ ರೀತಿ ವರ್ತಿಸುತ್ತಾರೆ, ಇದು ಖಂಡಿತವಾಗಿಯೂ ಮಕ್ಕಳ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಹಾಗಾಗಿ ನೀವು ಯಾವಾಗಲೂ ನಿಮ್ಮ ಮಕ್ಕಳಿಗೆ ಒಳ್ಳೆಯದನ್ನು ಕಲಿಸಬೇಕು ಇದು ಅವರ ಜೀವನವನ್ನು ಉತ್ತಮಗೊಳಿಸುತ್ತವೆ.
ಪ್ರತಿಯೊಂದು ಆಸೆಯನ್ನು ಪೂರೈಸುವುದು: ಅನೇಕ ಪೋಷಕರು ತಮ್ಮ ಮಕ್ಕಳ ಮೇಲಿನ ಕುರುಡು ಪ್ರೀತಿಯ ಕಾರಣದಿಂದ ಅವರು ಆಸೆ ಪಟ್ಟಿದ್ದನ್ನೆಲ್ಲಾ ಕೊಟ್ಟುಬಿಡುತ್ತಾರೆ. ಹೀಗೆ ಮಾಡುವುದು ಪೋಷಕರ ಅತಿ ದೊಡ್ಡ ತಪ್ಪು, ಇದು ಮಕ್ಕಳ ಭವಿಷ್ಯವನ್ನೇ ಹಾಳು ಮಾಡಿಬಿಡುತ್ತದೆ, ಮತ್ತು ಮಕ್ಕಳು ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಡುತ್ತಾರೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು.
ಮಕ್ಕಳ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವುದು: ಮಕ್ಕಳು ದೊಡ್ಡವರಾಗುತ್ತಿದ್ದಂತೆ, ಪೋಷಕರು ಅವರಿಗೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶವನ್ನು ನೀಡಬೇಕು, ಅವರ ಅಭಿಪ್ರಾಯಗಳನ್ನು ಗೌರವಿಸಬೇಕು. ಪ್ರತಿಯೊಂದು ವಿಷಯದಲ್ಲೂ ಹಸ್ತಕ್ಷೇಪ ಮಾಡಿದರೆ ಮಕ್ಕಳ ಆತ್ಮವಿಶ್ವಾಸ ಕುಂದುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
ಇದನ್ನೂ ಓದಿ: ಇಂತಹ ಜನರೊಂದಿಗೆ ಇದ್ದರೆ ನೀವು ಜೀವನದಲ್ಲಿ ಉದ್ಧಾರವಾಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಚಾಣಕ್ಯ
ಗೌರವದಿಂದ ನಡೆದುಕೊಳ್ಳದಿರುವುದು: ಪೋಷಕರು ತಮ್ಮ ಮಕ್ಕಳನ್ನು ಪರಸ್ಪರ ಗೌರವದಿಂದ ನಡೆಸಿಕೊಳ್ಳದಿದ್ದರೆ, ಅವರು ಸಹ ಇದೇ ನಡವಳಿಕೆಯನ್ನು ಕಲಿಯುತ್ತಾರೆ. ಇದರಿಂದ ಮಕ್ಕಳು ಹಿರಿಯರು ಕಿರಿಯರೆನ್ನದೆ ಎಲ್ಲರನ್ನೂ ಅಗೌರವದಿಂದ ಕಾಣುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಕ್ಕಳ ಮುಂದೆ ಗೌರವಯುತವಾಗಿ ವರ್ತಿಸಿ, ಕೆಟ್ಟ ಪದಗಳನ್ನು ಬಳಸಬೇಡಿ, ಸುಳ್ಳುಹೇಳಬೇಡಿ ಎನ್ನುತ್ತಾರೆ ಆಚಾರ್ಯ ಚಾಣಕ್ಯರು.
ಕಟುವಾದ ಮಾತುಗಳು: ಪೋಷಕರು ತಮ್ಮ ಮಕ್ಕಳ ಮುಂದೆ ಎಂದಿಗೂ ಜಗಳವಾಡಬಾರದು, ಕಠಿಣ ಅಥವಾ ನಿಂದನೀಯ ಭಾಷೆಯನ್ನು ಬಳಸಬಾರದು. ಏಕೆಂದರೆ ಮಕ್ಕಳು ಸಹ ಅದೇ ಭಾಷೆಯನ್ನು ಕಲಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಆಚಾರ್ಯ ಚಾಣಕ್ಯರು ಮಕ್ಕಳ ಮುಂದೆ ಯಾವಾಗಲೂ ಸಿಹಿಯಾಗಿ ಮಾತನಾಡಬೇಕು, ಅವರಿಗೆ ನೈತಿಕ ಮೌಲ್ಯದ ಬಗ್ಗೆ ಕಲಿಸಬೇಕು, ನಕಾರಾತ್ಮಕ ವಿಷಯಗಳನ್ನು ಮಕ್ಕಳಿಂದ ಸಾಧ್ಯವಾದಷ್ಟು ದೂರವಿಡಬೇಕು ಎಂದು ಸಲಹೆ ನೀಡುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




