Chanakya Niti: ಈ ಅಭ್ಯಾಸಗಳನ್ನು ಬದಲಾಯಿಸದಿದ್ದರೆ ನಿಮ್ಮ ಆದಾಯ ಎಂದಿಗೂ ಹೆಚ್ಚಳವಾಗುವುದಿಲ್ಲ

ಆಚಾರ್ಯ ಚಾಣಕ್ಯರು ರಾಜಕೀಯ ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ಹೇಳಿದ್ದಾರೆ. ಯಶಸ್ಸು ಗಳಿಸುವುದು ಹೇಗೆ, ಶ್ರೀಮಂತಿಕೆ ಗಳಿಸುವುದು ಹೇಗೆ ಎಂಬುದನ್ನು ಹೇಳಿದ್ದಾರೆ. ಅದೇ ರೀತಿ ಅವರು ಶ್ರೀಮಂತಿಕೆ ಗಳಿಸಲು ಹಣ ಉಳಿತಾಯ ಮಾಡುವುದು ಎಷ್ಟು ಮುಖ್ಯ, ಹಣ ಉಳಿತಾಯ ಮಾಡಲು ಏನು ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ. ಜೊತೆಗೆ ಈ ಕೆಲವೊಂದು ಅಭ್ಯಾಸಗಳನ್ನು ಬದಲಾಯಿಸದಿದ್ದರೆ ಎಷ್ಟೇ ಕಷ್ಟಪಟ್ಟು ದುಡಿದರೂ ಹಣ ಉಳಿತಾಯ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ. ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ಅಭ್ಯಾಸಗಳನ್ನು ಬದಲಾಯಿಸದಿದ್ದರೆ ನಿಮ್ಮ ಆದಾಯ ಎಂದಿಗೂ ಹೆಚ್ಚಳವಾಗುವುದಿಲ್ಲ
ಚಾಣಕ್ಯ ನೀತಿ
Image Credit source: Pinterest

Updated on: Jun 20, 2026 | 7:41 PM

ಜೀವನದಲ್ಲಿ ಯಶಸ್ಸನ್ನು ಗಳಿಸಬೇಕು, ಸಾಕಷ್ಟು ಹಣ (Money) ಸಂಪಾದನೆ ಮಾಡಬೇಕು, ಶ್ರೀಮಂತಿಕೆಯನ್ನು ಗಳಿಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಎಲ್ಲರೂ ಕಷ್ಟಪಟ್ಟು ಕೆಲಸವನ್ನು ಮಾಡುತ್ತಾರೆ. ಆದರೆ ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ, ಎಷ್ಟೇ ಸಂಪಾದನೆ ಮಾಡಿದರೂ ಅವರಿಗೆ ಹಣ ಗಳಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಅವರ ಈ ಅಭ್ಯಾಸಗಳೇ ಕಾರಣ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಆ ಅಭ್ಯಾಸಗಳು ನಿಮ್ಮಲ್ಲೂ ಇದ್ದರೆ ಇಂದೇ ಬದಲಾಯಿಸಿ, ಇಲ್ಲದಿದ್ದರೆ ನಿಮಗೂ ಸಾಕಷ್ಟು ಹಣ ಗಳಿಸಲು, ಶ್ರೀಮಂತಿಕೆ ಗಳಿಸಲು ಸಾಧ್ಯವಿಲ್ಲ ಎಂದೂ ಎಚ್ಚರಿಕೆಯನ್ನು ನೀಡಿದ್ದಾರೆ. ಆ ಅಭ್ಯಾಸಗಳು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಹಣ ಗಳಿಕೆಗೆ ಅಡ್ಡಿಯಾಗುವ ಅಭ್ಯಾಸಗಳು:

ಅನಗತ್ಯವಾಗಿ ಖರ್ಚು: ಚಾಣಕ್ಯರ ಪ್ರಕಾರ, ಸಂಪತ್ತನ್ನು ಸಂಗ್ರಹಿಸುವುದು ಅದನ್ನು ಗಳಿಸುವಷ್ಟೇ ಮುಖ್ಯ. ಪ್ರದರ್ಶನಕ್ಕಾಗಿ ಹಣವನ್ನು ಖರ್ಚು ಮಾಡುವುದು ಅಥವಾ ಅನಗತ್ಯ ಖರೀದಿಗಳನ್ನು ಮಾಡುವುದು ಒಬ್ಬ ವ್ಯಕ್ತಿಯ ಆರ್ಥಿಕ ಯೋಗಕ್ಷೇಮವನ್ನು ಕುಗ್ಗಿಸುತ್ತದೆ. ಒಬ್ಬ ವ್ಯಕ್ತಿಯು ಅನಗತ್ಯ ಖರ್ಚುಗಳನ್ನು ನಿಯಂತ್ರಿಸದಿದ್ದರೆ, ಎಷ್ಟೇ ಸಂಪಾದನೆ ಮಾಡಿದರೂ ಸಹ ಹಣ ಉಳಿಯುವುದೇ ಇಲ್ಲ. ಎಲ್ಲಾ ದುಡ್ಡು ಸಹ ಖರ್ಚಾಗುತ್ತದೆ. ಹಾಗಾಗಿ ಅನಗತ್ಯ ವಿಷಯಗಳಿಗೆ ಹಣ ಖರ್ಚು ಮಾಡಬೇಡಿ, ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿ, ಉಳಿತಾಯ ಮಾಡಿ.

ಸಮಯ ವ್ಯರ್ಥ ಮಾಡಬೇಡಿ: ಆಚಾರ್ಯ ಚಾಣಕ್ಯರು ಹೇಳುವಂತೆ ಸಮಯವು ವ್ಯಕ್ತಿಯ ಅತ್ಯಂತ ಅಮೂಲ್ಯ ಆಸ್ತಿ. ಅವರ ಪ್ರಕಾರ, ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳದ ವ್ಯಕ್ತಿಯು ಎಂದಿಗೂ ದೊಡ್ಡ ಯಶಸ್ಸನ್ನು ಸಾಧಿಸಲು ಅಥವಾ ಸಂಪತ್ತನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಚಾಣಕ್ಯ ನೀತಿಯ ಪ್ರಕಾರ, ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸುವುದರಿಂದ ದಕ್ಷತೆ ಹೆಚ್ಚಾಗುತ್ತದೆ.ಯಶಸ್ಸನ್ನೂ ಸಾಧಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಮಹಿಳೆಯರಿಗೆ ಇಷ್ಟವಾಗೋದೇ ಪುರುಷರ ಗುಣಗಳು ಎನ್ನುತ್ತಾರೆ ಚಾಣಕ್ಯ

ಸೋಮಾರಿತನ ಬಿಟ್ಟುಬಿಡಿ: ಚಾಣಕ್ಯರು ಹೇಳುವಂತೆ ನಿರಂತರವಾಗಿ ಕಷ್ಟಪಟ್ಟು ಕೆಲಸ ಮಾಡುವವರು ಮಾತ್ರ ಪ್ರಗತಿ ಸಾಧಿಸಬಹುದು. ಕೆಲಸಗಳನ್ನು ಮುಂದೂಡುವ ಪ್ರವೃತ್ತಿಯು ಆದಾಯವನ್ನು ಮಿತಿಗೊಳಿಸುತ್ತದೆ. ಆದ್ದರಿಂದ, ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಬೇಕು ಮತ್ತು ಕಠಿಣ ಪರಿಶ್ರಮವನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಕು, ಸೋಮಾರಿತನವನ್ನು ಬಿಟ್ಟು ಅಂದಿನ ಕೆಲಸವನ್ನು ಅಂದೇ ಮಾಡಿ ಮುಗಿಸಬೇಕು. ಆಗ ಮಾತ್ರ ಭವಿಷ್ಯದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು ಎಂದು ಸಲಹೆ ನೀಡಿದ್ದಾರೆ.

ಕೆಟ್ಟ ಸಹವಾಸದಿಂದ ದೂರವಿರಿ: ನಕಾರಾತ್ಮಕ, ಸೋಮಾರಿ ಮತ್ತು ದೂರು ನೀಡುವವರಿಂದ ಯಾವಾಗಲೂ ಅಂತರ ಕಾಯ್ದುಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಏಕೆಂದರೆ ಅಂತಹ ಜನರು ಪ್ರಗತಿಗೆ ಅಡ್ಡಿಯಾಗುತ್ತಾರೆ. ಆದ್ದರಿಂದ, ಅಂತಹ ದುರ್ಗುಣ ಹೊಂದಿರುವ ಜನರಿಂದ ದೂರವಿರಬೇಕು. ಅಲ್ಲದೆ ದುರ್ಬುದ್ಧಿ ಇರುವ ಜನರು ನಿಮ್ಮ ಕೈಯಿಂದ ಹಣ ಖರ್ಚು ಮಾಡಿಸುವ ಸಾಧ್ಯತೆಯೂ ಹೆಚ್ಚು. ಇಂತಹವರ ಸಹವಾಸ ಮಾಡಿದರೆ ಶ್ರೀಮಂತಿಕೆಯನ್ನು ಗಳಿಸಲು ಸಾಧ್ಯವಿಲ್ಲ, ಜೀವನದಲ್ಲಿ ಯಶಸ್ಸನ್ನೂ ಕಾಣಲು ಸಾಧ್ಯವಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us