Chanakya Niti: ತಪ್ಪಿಯೂ ಇಂತಹ ಜನರಿಗೆ ಸಹಾಯ ಮಾಡಬಾರದು

ಆಚಾರ್ಯ ಚಾಣಕ್ಯರು ಜೀವನಕ್ಕೆ ಸಂಬಂಧಿಸಿದ ಹಲವಾರು ಸಂಗತಿಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ಗೌರವ ಮತ್ತು ಶಾಂತಿ ಬೇಕಾದರೆ ಒಂದಷ್ಟು ಜನರಿಗೆ ಸಹಾಯವನ್ನು ಮಾಡಬಾರದು, ಅವರಿಂದ ಅಂತರವನ್ನು ಕಾಯ್ದುಕೊಳ್ಳಬೇಕು ಎಂದೂ ಹೇಳಿದ್ದಾರೆ. ಹಾಗಿದ್ರೆ ಎಂತಹ ಜನರಿಗೆ ಸಹಾಯ ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.

Chanakya Niti: ತಪ್ಪಿಯೂ ಇಂತಹ ಜನರಿಗೆ ಸಹಾಯ ಮಾಡಬಾರದು
ಚಾಣಕ್ಯ ನೀತಿ
Image Credit source: Pinterest

Updated on: Mar 02, 2026 | 7:46 PM

ಸಹಾಯ (Help) ಎಂದು ಬೇಡಿ ಬಂದವರಿಗೆ ಉಪಕಾರ ಮಾಡುವುದು ಮಾನವನ ಸಹಜ ಗುಣ. ಪ್ರತಿಯೊಬ್ಬರೂ ಸಹ ತಮ್ಮವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯವನ್ನು ಮಾಡುತ್ತಲೇ ಇರುತ್ತಾರೆ. ಆದರೆ ಈ ರೀತಿ ಎಲ್ಲರಿಗೂ ಸಹಾಯ ಮಾಡುವುದು ಸರಿಯಲ್ಲ, ಇದರಿಂದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ಹೌದು ಒಂದು ಜನರಿಗೆ ಸಹಾಯ ಮಾಡಿದರೆ ಅದರಿಂದ ಒಳ್ಳೆಯದಕ್ಕಿಂದ ಕೆಟ್ಟದಾಗುವುದೇ ಹೆಚ್ಚಂತೆ. ಹಾಗಿದ್ರೆ ಯಾರಿಗೆಲ್ಲಾ ಸಹಾಯ ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.

ಇಂತಹ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ:

ಸಹಾಯ ಮಾಡದವರಿಗೆ ಸಹಾಯ ಮಾಡಬೇಡಿ: ನೀವು ಮೊದಲು ಮಾಡಿದ ಸಹಾಯವನ್ನು ಹಗುರವಾಗಿ ಪರಿಗಣಿಸುವ, ನಿಮ್ಮ ಕಷ್ಟಕಾಲದಲ್ಲಿ ನಿಮ್ಮ ಸಹಾಯ ಮಾಡದೆ ಕಟುವಾಗಿ ವರ್ತಿಸಿದವರಿಗೆ ನೀವು ಎಂದಿಗೂ ಸಹಾಯ ಮಾಡಬೇಡಿ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಇಂತಹ ಜನರು ನಿಮ್ಮ ಸಹಾಯವನ್ನು ಗೌರವಿಸುವುದಿಲ್ಲ ಜೊತೆಗೆ ಇಂತಹವರಿಂದ ನೀವು ಬರೀ ನಿರಾಶೆಯನ್ನೇ ಅನುಭವಿಸುತ್ತೀರಿ. ಹಾಗಾಗಿ ಈ ರೀತಿಯ ಜನರಿಗೆ ಸಹಾಯ ಮಾಡುವ ತಪ್ಪನ್ನು ಮಾಡಬೇಡಿ.

ಪದೇ ಪದೇ ತಪ್ಪುಗಳನ್ನು ಮಾಡುವ ಜನರು: ಆಚಾರ್ಯ ಚಾಣಕ್ಯ ಹೇಳುವಂತೆ ಕೆಲವು ಜನರು ತಮ್ಮ ತಪ್ಪುಗಳಿಂದ ಕಲಿಯುವುದಿಲ್ಲ, ಬದಲಿಗೆ ಅವುಗಳನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಲೇ ಇರುತ್ತಾರೆ. ಅಂತಹ ಜನರು ಯಾವಾಗಲೂ ಇತರರಿಂದ ಸಹಾಯವನ್ನು ನಿರೀಕ್ಷಿಸುತ್ತಾರೆ. ನೀವು ಅಂತಹ ವ್ಯಕ್ತಿಗೆ ಸಹಾಯ ಮಾಡಿದಾಗ, ಅವರ ಸಮಸ್ಯೆ ಬಗೆಹರಿಯುತ್ತದೆ, ಆದರೆ ಅವರು ಸುಧಾರಿಸಲು ಯಾವುದೇ ಪ್ರಯತ್ನ ಮಾಡುವುದಿಲ್ಲ. ನೀವು ಪ್ರತಿ ಬಾರಿಯೂ ಅವರಿಗೆ ಸಹಾಯ ಮಾಡಿದರೆ ನಿಮ್ಮ ಸಮಯ, ಶಕ್ತಿ ವ್ಯರ್ಥವಾಗುವುದಲ್ಲದೆ, ನಿಮ್ಮ ಮಾನಸಿಕ ಶಾಂತಿಯೂ ಹಾಳಾಗುತ್ತದೆ.

ಸ್ವಾರ್ಥಿ ಜನರು: ಆಚಾರ್ಯ ಚಾಣಕ್ಯರ ಪ್ರಕಾರ, ಸ್ವಾರ್ಥಿಗಳು ಸಂಬಂಧಗಳನ್ನು ಭಾವನೆಗಳ ಆಧಾರದ ಮೇಲೆ ನೋಡುವುದಿಲ್ಲ, ಬದಲಿಗೆ ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಉಪಯೋಗಿಸುತ್ತಾರೆ ಮತ್ತು ತಮ್ಮ ಕಾರ್ಯ ಸಾಧಿಸಿದ ನಂತರ ನಿಮ್ಮನ್ನು ದೂರವಿಡುತ್ತಾರೆ. ಇಂತಹ ಸ್ವಾರ್ಥಿಗಳಿಗೆ ಸಹಾಯ ಮಾಡುವುದರಿಂದ ನಿಮ್ಮ ಭಾವನೆಗಳಿಗೆ ಪೆಟ್ಟಾಗುತ್ತದೆ. ಆದ್ದರಿಂದ ಇಂತಹ ಸ್ವಾರ್ಥ ಮನೋಭಾವದವರಿಗೆ ಸಹಾಯವನ್ನು ಮಾಡಬೇಡಿ.

ಇದನ್ನೂ ಓದಿ: ಶ್ರೀಮಂತಿಕೆಯನ್ನು ಗಳಿಸಬೇಕೆಂದರೆ ಮೊದಲು ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

ನಕಾರಾತ್ಮಕವಾಗಿ ಯೋಚಿಸುವ ಜನರು: ಚಾಣಕ್ಯ ನೀತಿಯ ಪ್ರಕಾರ, ನಕಾರಾತ್ಮಕ ಚಿಂತನೆಯುಳ್ಳ ಜನರು ಪ್ರತಿಯೊಂದು ಸನ್ನಿವೇಶದಲ್ಲೂ ನ್ಯೂನತೆಗಳು ಮತ್ತು ಸಮಸ್ಯೆಗಳನ್ನು ಮಾತ್ರ ನೋಡುತ್ತಾರೆ. ನೀವು ಅವರಿಗೆ ಎಷ್ಟೇ ಸಹಾಯ ಮಾಡಿದರೂ ಅವರು ಎಂದಿಗೂ ತೃಪ್ತರಾಗಲು ಸಾಧ್ಯವಿಲ್ಲ. ಜೊತೆಗೆ ನೀವು ಅವರಿಗೆ ಸಹಾಯ ಮಾಡಿದ್ದೀರೆಂದು ಕೃತಜ್ಞತೆಯನ್ನೂ ತೋರುವುದಿಲ್ಲ.  ಅಂತಹ ಜನರಿಗೆ ಸಹಾಯ ಮಾಡುವುದರಿಂದ ನಿಮ್ಮ ಮಾನಸಿಕ ಶಾಂತಿ ಸಂಪೂರ್ಣವಾಗಿ ನಾಶವಾಗುತ್ತದೆ, ನಿಮ್ಮ ಆತ್ಮವಿಶ್ವಾಸವೇ ಕಡಿಮೆಯಾಗುತ್ತದೆ ಎನ್ನುತ್ತಾರೆ ಚಾಣಕ್ಯ.

ಮೋಸಗಾರರು: ಚಾಣಕ್ಯನ ಪ್ರಕಾರ, ಸುಳ್ಳು ಹೇಳುವ ಮತ್ತು ಮೋಸ ಮಾಡುವ ಜನರಿಂದ ಒಬ್ಬರು ದೂರವಿದ್ದಷ್ಟೂ ಒಳ್ಳೆಯದು. ಅಂತಹ ಜನರು ತಮ್ಮ ಅಗತ್ಯಗಳಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಅಂತಹವರಿಗೆ ಸಹಾಯ ಮಾಡುವುದರಿಂದ ನಿಮಗೆ ಅಪಾಯ ಹೆಚ್ಚು. ಇದಲ್ಲದೆ ಕೆಟ್ಟ ಚಟವನ್ನು ಹೊಂದಿರುವ, ದುರಾಸೆ ಮನೋಭಾವದ ಜನರಿಗೂ ಸಹಾಯ ಮಾಡಬಾರದು ಎಂದಿದ್ದಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us