ಕಲೆ, ಪಾಚಿ ಕಟ್ಟಿದ ಪ್ಲಾಸ್ಟಿಕ್ ಬಕೆಟ್‌ಗಳನ್ನು ನಿಮಿಷದಲ್ಲೇ ಕ್ಲೀನ್ ಮಾಡುತ್ತೆ ಈ ಮನೆಮದ್ದು
ದಿನನಿತ್ಯ ಬಳಸುವ ಈ ಬಕೆಟ್‌ಗಳ ಮೇಲೆ ಬಹು ಬೇಗನೆ ಹಳದಿ ಬಣ್ಣದ ಕೊಳೆಯ ಪದರ, ಕೊಳೆ ಸಂಗ್ರಹವಾಗುತ್ತದೆ. ಹೆಚ್ಚಿನವರು ಇದನ್ನು ಸ್ವಚ್ಛಗೊಳಿಸಲು ದುಬಾರಿ ಕ್ಲೀನರ್‌ಗಳನ್ನು ಬಳಸುತ್ತಾರೆ. ಆದರೂ ಕೂಡ ಹೆಚ್ಚಿನ ಸಂದರ್ಭಗಳಲ್ಲಿ ಈ ಕಲೆಗಳು ಹೋಗುವುದೇ ಇಲ್ಲ. ಹೀಗಿರುವಾಗ ಈ ಕೆಲವು ಸರಳ ಮನೆಮದ್ದುಗಳ ಸಹಾಯದಿಂದ ನೀವು ಕಲೆಗಟ್ಟಿದ ಬಕೆಟ್‌ಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.

ಸಾಮಾನ್ಯವಾಗಿ ಪ್ರತಿ ಮನೆಗಳಲ್ಲೂ ಬಾತ್‌ರೂಮ್‌ಗಳಲ್ಲಿ ಪ್ಲಾಸ್ಟಿಕ್ ಬಕೆಟ್ (plastic buckets), ಮಗ್‌ಗಳನ್ನೇ ಬಳಸುವುದು. ಇವುಗಳ ನಿರಂತರ ಬಳಕೆಯಿಂದಾಗಿ, ಬಕೆಟ್‌ಗಳ ಹೊಳಪು ಕಳೆದುಹೋಗುತ್ತದೆ ಮತ್ತು ಅದರ ಮೇಲೆ ಹಳದಿ ಬಣ್ಣದ ಕೊಳೆ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ, ಬಕೆಟ್ ತುಂಬಾ ಕೊಳಕಾಗಿ ಕಾಣುತ್ತದೆ. ಹಾಗಾಗಿ ಇವುಗಳನ್ನು ಸ್ವಚ್ಛಗೊಳಿಸಲು ಹೆಚ್ಚಿನವರು ದುಬಾರಿ ಕ್ಲೀನರ್‌ಗಳ ಮೊರೆ ಹೋಗುತ್ತಾರೆ. ಆದರೆ ಇವುಗಳು ಅಷ್ಟು ಪರಿಣಾಮಕಾರಿಯಾಗಿ ಬಕೆಟ್‌ಗಳ ಕೊಳೆಗಳನ್ನು ತೆಗೆದುಹಾಕುವುದಿಲ್ಲ. ಬಕೆಟ್‌ನ ಮೂಲ ಹೊಳಪು ಹೆಚ್ಚಾಗಿ ಹಿಂತಿರುಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಈ ಕೆಲವು ಸರಳ ಮನೆಮದ್ದುಗಳನ್ನು ಬಳಸಿಕೊಂಡು ನೀವು ಅತ್ಯಂತ ಕೊಳಕಾದ ಬಕೆಟ್‌ಗಳನ್ನು ಸಹ ಹೊಸದರಂತೆ ಹೊಳೆಯುವಂತೆ ಮಾಡಬಹುದು. ಆ ಪರಿಣಾಮಕಾರಿ ಮನೆಮದ್ದುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಪ್ಲಾಸ್ಟಿಕ್ ಬಕೆಟ್‌ಗಳನ್ನು ಸ್ವಚ್ಛಗೊಳಿಸಲು ಸಹಕಾರಿ ಈ ಮನೆಮದ್ದುಗಳು:
ಅಡಿಗೆ ಸೋಡಾ ಮತ್ತು ವಿನೆಗರ್: ಬಕೆಟ್ ಮೇಲಿನ ಹಳದಿ ಲೇಪನವನ್ನು ಹೋಗಲಾಡಿಸಲು ನೀವು ಅಡಿಗೆ ಸೋಡಾ ಮತ್ತು ವಿನೆಗರ್ ಅನ್ನು ಬಳಸಬಹುದು. ಇದನ್ನು ಮಾಡಲು, ಬಕೆಟ್‌ಗೆ 2 ರಿಂದ 3 ಚಮಚ ಅಡಿಗೆ ಸೋಡಾವನ್ನು ಸೇರಿಸಿ ನಂತರ ಅರ್ಧ ಕಪ್ ವಿನೆಗರ್ ಸೇರಿಸಿ. ಮಿಶ್ರಣವನ್ನು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಬ್ರಷ್ ಅಥವಾ ಸ್ಕ್ರಬ್ ಪ್ಯಾಡ್ ಬಳಸಿ ಬಕೆಟ್ ಅನ್ನು ಸಂಪೂರ್ಣವಾಗಿ ಸ್ಕ್ರಬ್ ಮಾಡಿ ಸ್ವಚ್ಛಗೊಳಿಸಿ.
ನಿಂಬೆ ಮತ್ತು ಉಪ್ಪು: ನಿಮ್ಮ ಬಕೆಟ್ ಹೊಸದರಂತೆ ಹೊಳೆಯುವಂತೆ ಮಾಡಲು ನೀವು ನಿಂಬೆ ಮತ್ತು ಉಪ್ಪನ್ನು ಸಹ ಬಳಸಬಹುದು. ಈ ವಿಧಾನವನ್ನು ಅನ್ವಯಿಸಲು, ಬಕೆಟ್ ಒಳಭಾಗದಲ್ಲಿ ಉಪ್ಪನ್ನು ಸಿಂಪಡಿಸಿ. ಕೆಲವು ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಟ್ಟು ನಂತರ, ನಿಂಬೆ ಹೋಳಿನಿಂದ ಸ್ವಚ್ಛಗೊಳಿಸಿ. ಇದರಿಂದ ಬಕೆಟ್ ಹೊಸದರಂತೆ ಹೊಳೆಯಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ: ಈ ಗಿಡಗಳನ್ನು ಮನೆ ಸುತ್ತ ನೆಟ್ಟರೆ ಇನ್ನೆಂದೂ ಸೊಳ್ಳೆಗಳ ಹಾವಳಿಯೇ ಇರೋದಿಲ್ಲ
ಡಿಟರ್ಜೆಂಟ್ ಮತ್ತು ಬಿಸಿನೀರು: ನಿಮ್ಮ ಬಕೆಟ್ ಅನ್ನು ಸ್ವಚ್ಛಗೊಳಿಸಲು ನೀವು ಡಿಟರ್ಜೆಂಟ್ ಮತ್ತು ಬೆಚ್ಚಗಿನ ನೀರನ್ನು ಸಹ ಬಳಸಬಹುದು. ಮೊದಲು ಬಕೆಟ್ ಅನ್ನು ಬೆಚ್ಚಗಿನ ನೀರಿನಿಂದ ತುಂಬಿಸಿ ನಂತರ 2-3 ಚಮಚ ಡಿಟರ್ಜೆಂಟ್ ಮಿಶ್ರಣ ಮಾಡಿ. ಅದನ್ನು ಅರ್ಧ ಗಂಟೆ ನೆನೆಯಲು ಬಿಡಿ ಮತ್ತು ನಂತರ ಬ್ರಷ್‌ನಿಂದ ಸುಲಭವಾಗಿ ಸ್ವಚ್ಛಗೊಳಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




