Kitchen Tips in Kannada : ಕೊತ್ತಂಬರಿ ಸೊಪ್ಪು ಹಾಳಾಗದಂತೆ ಸಂಗ್ರಹಿಸಿಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಕ್ಸ್

ಅಡುಗೆಯ ರುಚಿ ಹಾಗೂ ಘಮವನ್ನು ಹೆಚ್ಚಿಸಲು ಕೊತ್ತಂಬರಿ ಸೊಪ್ಪನ್ನು ಬಳಸುತ್ತೇವೆ. ಈ ಸೊಪ್ಪಿನಲ್ಲಿ ಖನಿಜಗಳು, ಥಿಯಮೈನ್, ವಿಟಮಿನ್ ಸಿಯಂತಹ ವಿಟಮಿನ್‍ಗಳು, ರೈಬೊಫ್ಲವಿನ್, ರಂಜಕ, ಕ್ಯಾಲ್ಸಿಯಂ, ಪ್ರೊಟೀನ್, ಕೊಬ್ಬು, ನಾರು ಮತ್ತು ನೀರಿನ ಅಂಶವು ಹೇರಳವಾಗಿದೆ. ಆದರೆ ಮಾರುಕಟ್ಟೆಯಲ್ಲಿ ತಂದ ಈ ಸೊಪ್ಪನ್ನು ಸರಿಯಾಗಿ ಶೇಖರಿಸದೇ ಹೋದರೆ ಬೇಗನೇ ಹಾಳಾಗುತ್ತದೆ. ಆದರೆ ಈ ಕೊತ್ತಂಬರಿ ಸೊಪ್ಪನ್ನು ತಾಜಾವಾಗಿ ಸಂಗ್ರಹಿಸಿಡಲು ಈ ಟ್ರಿಕ್ ಪಾಲಿಸಬಹುದು.

Kitchen Tips in Kannada : ಕೊತ್ತಂಬರಿ ಸೊಪ್ಪು ಹಾಳಾಗದಂತೆ ಸಂಗ್ರಹಿಸಿಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಕ್ಸ್
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: May 15, 2024 | 3:38 PM

ಘಮ್ ಎನ್ನುವ ಕೊತ್ತಂಬರಿ ಸೊಪ್ಪಿನಲ್ಲಿ ರುಚಿ ಮಾತ್ರವಲ್ಲದೇ ಆರೋಗ್ಯಕಾರಿ ಲಾಭಗಳು ಹಲವಾರಿವೆ. ನಾನಾ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಕೊತ್ತಂಬರಿ ಸೊಪ್ಪನ್ನು ಸರಿಯಾಗಿ ಶೇಖರಿಸಿ ಇಡದೇ ಹೋದರೆ ಬೇಗನೇ ಕೆಡುತ್ತವೆ . ಮಾರುಕಟ್ಟೆಯಿಂದ ತಂದ ಈ ಸೊಪ್ಪನ್ನು ಹಾಗೆಯೇ ಇಟ್ಟು ಬಿಟ್ಟರೆ ಕಸದ ಡಬ್ಬಿಗೆ ಹಾಕಬೇಕಾಗುತ್ತದೆ. ಹೀಗಾಗಿ ಸರಳ ವಿಧಾನಗಳ ಮೂಲಕ ಕೊತ್ತಂಬರಿ ಸೊಪ್ಪನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಬಹುದು.

ಕೊತ್ತಂಬರಿ ಸೊಪ್ಪನ್ನು ಶೇಖರಿಸಿಡಲು ಈ ಟಿಕ್ಸ್ ಬಳಸಿ:

* ಕೊತ್ತಂಬರಿ ಸೊಪ್ಪನ್ನು ತೊಳೆದು, ಒಂದು ಲೋಟದಲ್ಲಿ ನೀರು ತುಂಬಿಸಿ ಅದರಲ್ಲಿ ತಂದ ಕೊತ್ತಂಬರಿ ಸೊಪ್ಪನ್ನು ಇಡುವುದು ಒಳ್ಳೆಯದು. ಆದರೆ ಎರಡು ಮೂರು ದಿನಕ್ಕೊಮ್ಮೆ ನೀರು ಬದಲಾಯಿಸುವ ಮೂಲಕ ಕೊತ್ತಂಬರಿ ಸೊಪ್ಪು ಹಾಳಾಗದಂತೆ ನೋಡಿಕೊಳ್ಳಬಹುದು.

* ಕೊತ್ತಂಬರಿ ಸೊಪ್ಪನ್ನು ತಂದ ಕೂಡಲೇ ತೊಳೆದು ಬೇರುಗಳನ್ನು ಕತ್ತರಿಸಿ, ನೀರನ್ನು ಆರಲು ಬಿಡಬೇಕು. ಆ ಬಳಿಕ ಝಿಪ್‌ಲಾಕ್‌ ಬ್ಯಾಕ್‌ನಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟರೆ ಬೇಗನೇ ಕೊಳೆಯುವುದಿಲ್ಲ.

* ಕೊತ್ತಂಬರಿ ಸೊಪ್ಪನ್ನು ಕ್ಲೀನ್‌ ಮಾಡಿ, ಸ್ವಚ್ಛ ಪ್ಲಾಸ್ಟಿಕ್‌ ಡಬ್ಬದಲ್ಲಿ ಶೇಖರಿಸಿ ಇಡುವುದು ಉತ್ತಮವಾದ ವಿಧಾನವಾಗಿದೆ. ಆದರೆ ಈ ಡಬ್ಬಿಗಳ ಮೇಲೆ ಬಟ್ಟೆಯನ್ನು ಮುಚ್ಚಿ, ಆ ಬಳಿಕ ಮುಚ್ಚಳ ಹಾಕಿ ಫ್ರಿಡ್ಜ್‌ನಲ್ಲಿಟ್ಟರೆ ಸೊಪ್ಪು ಬೇಗನೇ ಒಣಗಿ ಹೋಗುವುದಿಲ್ಲ.

ಇದನ್ನೂ ಓದಿ: ಟಾಯ್ಲೆಟ್​​ನಲ್ಲಿ ಎರಡು ಫ್ಲಶ್ ಬಟನ್‌ಗಳು ಏಕೆ ಇರುತ್ತವೆ ಎಂದು ತಿಳಿದಿದೆಯೇ?

* ಕೊತ್ತಂಬರಿ ಸೊಪ್ಪನ್ನು ತೊಳೆದು ನೀರು ಆರಿದ ಬಳಿಕ ಕತ್ತರಿಸಿಟ್ಟು ಗಾಳಿಯಾಡದ ಪ್ಲಾಸ್ಟಿಕ್‌ ಡಬ್ಬದಲ್ಲಿ ಹಾಕಿಡಬಹುದು.

* ಕೊತ್ತಂಬರಿ ಸೊಪ್ಪನ್ನು ತೊಳೆದು ಬೇರನ್ನು ಕತ್ತರಿಸಿ ಪೇಪರ್‌ನಲ್ಲಿ ಸುತ್ತಿ ಅದನ್ನು ಫ್ರಿಡ್ಜ್‌ನಲ್ಲಿಟ್ಟರೆ ಅದು ಒಂದು ವಾರದವರೆಗೆ ಫ್ರೆಶ್ ಆಗಿರುತ್ತದೆ.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ