Dating: ಇಬ್ಬರ ಜತೆ ಡೇಟಿಂಗ್ ಮಾಡುವುದು ಎರಡು ದೋಣಿಗಳ ಮೇಲೆ ಕಾಲಿಡುವುದು ಎರಡೂ ಒಂದೇ
ಸಂಬಂಧ(Relationship)ಗಳ ಬಗೆಗಿನ ಗಂಭೀರತೆಯು ನಿಮ್ಮ ಜೀವನವನ್ನು ಆಹ್ಲಾದಕರ ಹಾಗೂ ಚಿಂತೆ ಮುಕ್ತವನ್ನಾಗಿಸಲು ಸಹಾಯ ಮಾಡುತ್ತದೆ.
ಸಂಬಂಧ(Relationship)ಗಳ ಬಗೆಗಿನ ಗಂಭೀರತೆಯು ನಿಮ್ಮ ಜೀವನವನ್ನು ಆಹ್ಲಾದಕರ ಹಾಗೂ ಚಿಂತೆ ಮುಕ್ತವನ್ನಾಗಿಸಲು ಸಹಾಯ ಮಾಡುತ್ತದೆ. ಒಂದೇ ದೋಣಿ ಮೇಲೆ ಕಾಲಿಟ್ಟಾಗ ನೀವು ಹೋಗಬೇಕಾದ ಸ್ಥಳವನ್ನು ನಿರಾಯಾಸವಾಗಿ ತಲುಪಬಹುದು ಆದರೆ ಎರಡು ದೋಣಿಗಳ ಮೇಲೆ ಕಾಲಿಟ್ಟರೆ ಸ್ವಲ್ಪ ದೂರವೂ ಕ್ರಮಿಸಲಾಗದು. ಹಾಗೆಯೇ ಸಂಬಂಧಗಳು ಕೂಡ. ನೀವು ಒಬ್ಬರ ಜತೆ ಡೇಟಿಂಗ್ ಮಾಡುತ್ತಿದ್ದರೆ, ಆ ಸಮಯದಲ್ಲಿ ಮತ್ತೊಬ್ಬರಲ್ಲಿ ಏನೋ ಹೊಸತನವಿದ್ದರೆ ಆಕರ್ಷಿತರಾಗಬಾರದು, ಒಂದೊಮ್ಮೆ ಹಾಗಾದರೆ ಅದು ನಿಮ್ಮ ಸಂಬಂಧ ಹಾಗೂ ಮಾನಸಿಕ ಸ್ವಾಸ್ತ್ಯ ಎರಡನ್ನೂ ಹಾಳು ಮಾಡುತ್ತದೆ. ಒಂದಕ್ಕಿಂತ ಹೆಚ್ಚು ಜನರ ಜತೆ ಡೇಟಿಂಗ್ ಮಾಡಿದರೆ ಆಗುವ ಅಪಾಯಗಳ ಬಗ್ಗೆ ತಿಳಿಯಿರಿ
ಸರಿಯಾದ ಸಂಗಾತಿಯನ್ನು ನಿರ್ಧರಿಸಲು ಸಾದ್ಯವಿಲ್ಲ ಒಂದೇ ಸಮಯದಲ್ಲಿ ಇಬ್ಬರ ಬಗ್ಗೆ ಆಕರ್ಷಿತರಾದರೆ ಸರಿಯಾದ ಸಂಗಾತಿಯ ಆಯ್ಕೆಯು ಕಷ್ಟವಾಗಲಿದೆ. ಅದೊಂದೇ ವಿಚಾರವಲ್ಲ, ಎರಡೂ ಸಂಬಂಧದಲ್ಲಿ ಸಿಲುಕಿಕೊಂಡರೆ ತಪ್ಪಿಸಿಕೊಳ್ಳುವುದು ಅಸಾಧ್ಯವಾಗುವುದು. ಅದು ನಿಮ್ಮ ವೃತ್ತಿ ಜೀವನದ ಮೇಲೂ ಕೂಡ ಪರಿಣಾಮ ಬೀರಬಹುದು. ಜೀವನದ ಉದ್ದೇಶವೇ ಬದಲಾಗಬಹುದು.
ಮತ್ತಷ್ಟು ಓದಿ: ನಿಮ್ಮ ಮನೆ ನಲ್ಲಿಯೂ ಸೋರುತ್ತಿದೆಯೇ? ಸೋರುವ ನಲ್ಲಿ ಸರಿಪಡಿಸಿ, ನೀರನ್ನು ಉಳಿಸಲು ಸರಳ ಸಲಹೆ ಇಲ್ಲಿದೆ
ನಂಬಿಕೆ ಕೊರತೆ ನಿಮ್ಮ ಬಗ್ಗೆ ನಿಮ್ಮ ಸಂಗಾತಿಗೆ ಒಂದೊಮ್ಮೆ ತಿಳಿದರೆ ನಿಮ್ಮ ಮೇಲೆ ನಂಬಿಕೆ ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ, ಆಗ ನೀವು ಕೂಡ ಕುಗ್ಗುತ್ತಾ ಹೋಗುತ್ತೀರಿ, ದುಃಖ, ಒಂಟಿತನ ಕಾಡಲಾರಂಭಿಸುತ್ತದೆ. ನೀವು ಸೋತಿದ್ದೀರಿ ಎನ್ನುವ ಭಾವನೆ ಮೂಡುತ್ತದೆ.
ಒತ್ತಡ ಸಂಬಂಧದಲ್ಲಿ ಏರು ಪೇರು ಉಂಟಾಗುವುದು, ಸಿಕ್ಕಿ ಬೀಳುವ ಭಯ ಇತರೆ ಆತಂಕಗಳು ಹೆಚ್ಚಾಗುವುದು.
ಸಮಯ ನಿರ್ವಹಣೆ ಕೊರತೆ ಇಬ್ಬರ ಜತೆ ಡೇಟಿಂಗ್ ಮಾಡುತ್ತಿದ್ದರೆ ನಿಮಗೆ ಸಮಯದ ಅಭಾವ ಹೆಚ್ಚಾಗುತ್ತದೆ. ಯಾರೊಂದಿಗೂ ಸರಿಯಾಗಿ ಸಮಯ ಕೊಡಲು ಸಾಧ್ಯವಾಗುವುದಿಲ್ಲ, ಕೋಪ, ಹತಾಷೆ ಎಲ್ಲವೂ ಕಾಡುತ್ತದೆ.
ಕೆಲಸದ ಮೇಲೆ ಪರಿಣಾಮ ನಿಮಗೆ ಹಲವಾರು ರೀತಿಯ ಜವಾಬ್ದಾರಿಗಳಿರುತ್ತವೆ, ನೀವು ಇಬ್ಬರ ಜತೆ ಡೇಟಿಂಗ್ ಂಆಡುತ್ತಿದ್ದರೆ ಇಬ್ಬರಿಗೂ ಸರಿಯಾದ ಸಮಯ ಕೊಡಲು ಸಾಧ್ಯವಿಲ್ಲ ಹಾಗೆಯೇ ನಿಮ್ಮ ಜವಾಬ್ದಾರಿಗಳನ್ನು ಕೂಡ ಮರೆಯುತ್ತಾ ಹೋಗುತ್ತೀರಿ. ನೀವು ಸಂಬಂಧಗಳ ಬಗೆಗಿನ ನಂಬಿಕೆಯನ್ನು ಕಳೆದುಕೊಂಡರೆ ಮತ್ತೆ ಯಾರ ಮೇಲೂ ಪ್ರೀತಿ ಹುಟ್ಟಲು ಸಾಧ್ಯವಿಲ್ಲ, ಹೀಗಾಗಿ ಯಾರನ್ನು ಪ್ರೀತಿಸುತ್ತೀರೋ ಅವರನ್ನು ಸಂಪೂರ್ಣವಾಗಿ ಪ್ರೀತಿಸಿ, ನಿಮ್ಮೆಲ್ಲಾ ಸಮಯವನ್ನು ಅವರ ಮೇಲೆ ಧಾರೆ ಎರೆಯಿರಿ ಖುಷಿ ಖುಷಿಯಾಗಿರಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ