Purity Of Gold: ಶುದ್ಧ ಚಿನ್ನ ಯಾವುದು?  24 ಕ್ಯಾರಟ್, 22 ಕ್ಯಾರಟ್, 18 ಕ್ಯಾರಟ್ ಯಾವ ಚಿನ್ನ  ಬೆಸ್ಟ್? 

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 24, 2024 | 4:15 PM

ಚಿನ್ನ ಎಂದರೆ ಬಹುತೇಕ ಭಾರತೀಯರೆಲ್ಲರಿಗೂ ಅಚ್ಚುಮೆಚ್ಚು. ಈ ಚಿನ್ನ ಬೇರೆ ಬೇರೆ ಕ್ಯಾರೆಟ್ ಗಳಲ್ಲಿ ಲಭ್ಯವಿದೆ. ಆದರೆ ಇನ್ನೂ ಹಲವು ಮಂದಿಗೆ ಈ ಕ್ಯಾರಟ್ ಎಂದರೇನು, ಚಿನ್ನದಲ್ಲಿ ಎಷ್ಟು ಕ್ಯಾರಟ್ ಗಳಿವೆ, ಎಂಬುದು ಗೊತ್ತಿಲ್ಲ. ಹಾಗಾಗಿ ಇವುಗಳಲ್ಲಿ ಯಾವ ಚಿನ್ನ ಬೆಸ್ಟ್, ಅವುಗಳು ಗುಣಮಟ್ಟದ ಬಗ್ಗೆ  ಸಂಪೂರ್ಣ ಮಾಹಿತಿ ಇಲ್ಲಿದೆ. 

Purity Of Gold: ಶುದ್ಧ ಚಿನ್ನ ಯಾವುದು?  24 ಕ್ಯಾರಟ್, 22 ಕ್ಯಾರಟ್, 18 ಕ್ಯಾರಟ್ ಯಾವ ಚಿನ್ನ  ಬೆಸ್ಟ್? 
ಸಾಂದರ್ಭಿಕ ಚಿತ್ರ
Follow us on

ಹಬ್ಬ ಹರಿದಿನಗಳು, ಮದುವೆ ಇನ್ನಿತರ ಸಮಾರಂಭಗಳಲ್ಲಿ ಭಾರತೀಯರು ಚಿನ್ನಾಭರಣಗಳನ್ನು ಖರೀದಿಸುತ್ತಾರೆ. ಆದರೆ ಇಂದಿಗೂ ಹಲವರಿಗೆ ಚಿನ್ನದ ಗುಣಮಟ್ಟದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಎಷ್ಟೋ ಮಂದಿ ಚಿನ್ನ ಖರೀಸುವಾಗ ಅವರು ಎಷ್ಟು ಕ್ಯಾರಟ್ ಚಿನ್ನವನ್ನು ಖರೀದಿಸುತ್ತಿದ್ದಾರೆ  ಎಂಬ ಮಾಹಿತಿಯನ್ನೂ ಪಡೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ಚಿನ್ನದ ಶುದ್ಧತೆ ಕುರಿತು ತಿಳಿಯಬೇಕಾದ ಮಾಹಿತಿ ಇಲ್ಲಿದೆ.

ವಿವಿಧ ಕ್ಯಾರಟ್ ಚಿನ್ನ ಮತ್ತು ಅದರ ಶುದ್ಧತೆ:

24 ಕ್ಯಾರಟ್ ಚಿನ್ನ:

24 ಕ್ಯಾರಟ್ ಚಿನ್ನವು ಶೇ 99.99% ಶುದ್ಧ ಚಿನ್ನವಾಗಿದೆ. ಇದರಲ್ಲಿ  ಬೇರೆ ಯಾವುದೇ ತರಹದ ಲೋಹಗಳನ್ನು  ಬೆರೆಸುವುದಿಲ್ಲ. ಇದು ಚಿನ್ನದ ಶುದ್ಧ ರೂಪವಾಗಿದ್ದು, ಇದು ಪ್ರಕಾಶಮಾನವಾದ  ಹಳದಿ ಬಣ್ಣವನ್ನು ಹೊಂದಿದೆ.  ಈ ಚಿನ್ನದ  ಗುಣಮಟ್ಟದ ಕಾರಣದಿಂದಾಗಿ ಇದರ ಬೆಲೆಯೂ ದುಬಾರಿಯಾಗಿದೆ.  ಈ ಚಿನ್ನ ಮೃದುತ್ವವನ್ನು ಹೊಂದಿರುವುದರಿಂದ ಸಾಮಾನ್ಯವಾಗಿ ಇವುಗಳನ್ನು ಆಭರಣ ತಯಾರಿಕೆಯಲ್ಲಿ ಬಳಸುವುದಿಲ್ಲ. ಬದಲಿಗೆ ಇದರಿಂದ ನಾಣ್ಯ, ಬಿಸ್ಕೆಟ್, ಬಾರ್ಗಳನ್ನು ತಯಾರಿಸಲಾಗುತ್ತದೆ.

22 ಕ್ಯಾರಟ್ ಚಿನ್ನ:

22 ಕ್ಯಾರಟ್ ಚಿನ್ನವು ಶೇ 91.67% ರಷ್ಟು  ಶುದ್ದ ಚಿನ್ನವನ್ನು ಹೊಂದಿರುತ್ತದೆ. ಉಳಿದ 8.33% ಇತರೆ ಲೋಹಗಳನ್ನು ಮಿಶ್ರಣ ಮಾಡಲಾಗುತ್ತದೆ. ಇದರಲ್ಲಿ ಶುದ್ಧ ಚಿನ್ನದ ಜೊತೆಗೆ ಬೆಳ್ಳಿ, ಸತು ಸೇರಿದಂತೆ ಇತರೆ ಮಿಶ್ರ ಲೋಹಗಳನ್ನು ಇದಕ್ಕೆ ಸೇರಿಸಲಾಗುತ್ತದೆ. ಈ ಲೋಹಗಳು ಚಿನ್ನವನ್ನು ಗಟ್ಟಿಗೊಳಿಸುವ ಕಾರಣ ಸಾಮಾನ್ಯವಾಗಿ ಆಭರಣ ತಯಾರಿಕೆಯಲ್ಲಿ 22 ಕ್ಯಾರಟ್ ಚಿನ್ನವನ್ನು ಬಳಸಲಾಗುತ್ತದೆ.

ಇದನ್ನೂ ಓದಿ; ಬೇಸಿಗೆಯಲ್ಲಿ ಬಟ್ಟೆ ಮೇಲಿನ ಬೆವರಿನ ಕಲೆ ಹೋಗಲಾಡಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

18 ಕ್ಯಾರಟ್  ಚಿನ್ನ:

18 ಕ್ಯಾರಟ್ ಚಿನ್ನವು ಶೇ 75% ರಷ್ಟು  ಶುದ್ಧ ಚಿನ್ನವನ್ನು ಹೊಂದಿರುತ್ತದೆ. ಉಳಿದ ಶೇ 25% ರಷ್ಟು ಇದಕ್ಕೆ ತಾಮ್ರ, ಬೆಳ್ಳಿ ಸೇರಿದಂತೆ ಇತರೆ ಲೋಹಗಳನ್ನು ಮಿಶ್ರಣ ಮಾಡಲಾಗುತ್ತದೆ.  ಹೀಗಾಗಿ 18 ಕ್ಯಾರಟ್ ಚಿನ್ನದಲ್ಲಿ ಗಡಸುತನ ಹೆಚ್ಚಾಗಿರುತ್ತದೆ. ಹಾಗಾಗಿ ದಿನನಿತ್ಯದ ಬಳಕೆಗೆ 18 ಕ್ಯಾರಟ್ ಚಿನ್ನದ ಆಭರಣಗಳನ್ನು ಧರಿಸುವುದು ಸೂಕ್ತ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ