ಐಸ್ ಕ್ರೀಂ (ice cream) ಯಾರಿಗೆ ಇಷ್ಟವಿಲ್ಲ ಹೇಳಿ, ಈ ಬೇಸಿಗೆಯಲ್ಲಿ ಅದೊಂದು ಆರಾಮ ಹಾಗೂ ಆನಂದದಾಯಕ ತಿನಿಸು, ಬೇರೆ ಬೇರೆ ರೀತಿಯ ಐಸ್ ಕ್ರೀಮ್ ಫ್ಲೇವರ್ಸ್ಗಳು ಇವೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಐಸ್ ಕ್ರೀಮ್ಗಳನ್ನು ಖಾರ ಅಥವಾ ಬಿಸಿ ಖಾದ್ಯಗಳೊಂದಿಗೆ ಸಂಯೋಜನೆ ಮಾಡುತ್ತಾರೆ. ಇಂತಹ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಐಸ್ ಕ್ರೀಂ ಜತೆಗೆ ಆಲೂಗಡ್ಡೆ ಫ್ರೈಸ್ (rispy potato) ಹಾಕಿ ಸೇವನೆ ಮಾಡುವ ಬಗ್ಗೆ ವಿಡಿಯೋ ವೈರಲ್ ಆಗಿದೆ. ಇದು ವಿಚಿತ್ರವಾಗಿದೆ, ಸಿಹಿ, ಕೋಲ್ಡ್, ಉಪ್ಪು, ಬಿಸಿ ಎಲ್ಲವೂ ಇದರಲ್ಲಿ ವಿಶ್ರಣವಾಗಿ ಸಿಗುತ್ತದೆ. ಗರಿಗರಿಯಾಗಿಯೂ ಈ ಐಸ್ ಕ್ರೀಂ ಇರುತ್ತದೆ. ಈ ಬಗ್ಗೆ @digitaldiarylondon ಎಂಬ Instagram ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಇದೀಗ ಈ ವಿಚಿತ್ರ ಖಾದ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿಂದೆ ವೆನಿಲ್ಲಾ ಐಸ್ ಕ್ರೀಂನಲ್ಲಿ ಫ್ರೆಂಚ್ ಫ್ರೈಸ್ ಹಾಕಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಆಲೂಗಡ್ಡೆ ಗರಿಗರಿಯಾದ ಫ್ರೈಸ್ನ್ನು ಐಸ್ ಕ್ರೀಂ ತಿನ್ನುವ ವಿಡಿಯೋ ವೈರಲ್ ಆಗಿದೆ. ಲಂಡನ್‌ನಲ್ಲಿರುವ ಚಿನ್ ಚಿನ್ ಐಸ್ ಕ್ರೀಮ್ ಎಂಬ ರೆಸ್ಟೋರೆಂಟ್‌ನಲ್ಲಿ ಈ ವಿಚಿತ್ರ ಖಾದ್ಯವನ್ನು ಮಾಡಲಾಗಿದೆ. ಇದೊಂದು ನವೀನ ರೀತಿ ಐಸ್ ಕ್ರೀಂ ಆಗಿದೆ. ಫ್ರೈಸ್ ಮತ್ತು ವೆನಿಲ್ಲಾ ಸಾಫ್ಟ್ ಸರ್ವ್/ಮಿಲ್ಕ್‌ಶೇಕ್ ಇಷ್ಟವಾಗಿಲ್ಲ ಎಂದರೆ ಈ ರೀತಿಯ ಐಸ್ ಕ್ರೀಂ ಪ್ರಯತ್ನ ಮಾಡಬಹುದು. ಇದನ್ನು ಮನೆಯಲ್ಲೂ ಮಾಡಬಹುದು. ಜತೆಗೆ ಇದು ಸರಳವಾಗಿದೆ.
ಇದನ್ನೂ ಓದಿ: 15 ನಿಮಿಷದಲ್ಲಿ ಸುಲಭವಾಗಿ ಮಾಡಬಹುದು ಬೆಂಡೆಕಾಯಿ ಮಸಾಲೆ, ಇಲ್ಲಿದೆ ನೋಡಿ
ಐಸ್ ಕ್ರೀಮ್ ಮತ್ತು ಆಲೂಗಡ್ಡೆ ಫ್ರೈ ಇದು ಎಂತಹ ಕಾಂಬಿನೇಷನ್ ಎಂಬ ಯೋಚನೆ ಬರಬಹುದು, ಆದರೆ ಕೆಲವರಿಗೆ ಇಂತಹ ವಿಚಿತ್ರ ಕಾಂಬಿನೇಷನ್ ಇಷ್ಟವಾಗುವುದು. ಈ ಬಗ್ಗೆ ಜನರು ಏನ್ ಹೇಳಿದ್ರು ಇಲ್ಲಿದೆ ನೋಡಿ. ಒಬ್ಬ ಬಳಕೆದಾರರು, “ಅದು ಫ್ರೈಸ್ ತಿನ್ನುವ ನನ್ನ ನೆಚ್ಚಿನ ವಿಧಾನ!” ಎಂದು ಬರೆದಿದ್ದಾರೆ.ಮತ್ತೊಬ್ಬರು, “ಇದು ತುಂಬಾ ಚೆನ್ನಾಗಿ ಕಾಣುತ್ತದೆ” ಎಂದು ಹೇಳಿದರು. ಖಂಡಿತ ಪ್ರಯತ್ನಿಸಿ!! ಉಪ್ಪು ಮತ್ತು ಸಿಹಿ ತುಂಬಾ ಚೆನ್ನಾಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ನಿಜವಾಗಿಯೂ ಇದನ್ನು ಪ್ರಯತ್ನಿಸುತ್ತೇವೆ ಎಂದು ಇನ್ನು ಕೆಲವರು ಹೇಳಿದ್ದಾರೆ. ಈ ವಿಡಿಯೋವನ್ನು ಎಪ್ರಿಲ್ 23ಕ್ಕೆ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನಿಂದವರೆಗೆ 12,749 ಲೈಕ್ ಪಡೆದುಕೊಂಡಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ