Kannada News Lifestyle Ear Itching : Effective home remedies for Ear Itching! Health Care Tips in Kannada
Health Care Tips in Kannada : ಪದೇ ಪದೇ ಕಿವಿ ತುರಿಸುತ್ತಿದ್ದರೆ ಈ ಸೂಪರ್ ಮನೆ ಮದ್ದು ಬಳಸಿ
ಸುಮ್ಮನೆ ಕುಳಿತುಕೊಂಡಿದ್ದರೂ ಕೆಲವೊಮ್ಮೆ ಕೈ ಕಿವಿಯತ್ತ ಹೋಗುತ್ತದೆ. ಹೌದು ವಿಪರೀತವಾದ ಕಿವಿ ತುರಿಕೆಯನ್ನು ತಡೆದುಕೊಳ್ಳಲಾಗುವುದಿಲ್ಲ. ಹೆಚ್ಚಿನವರು ಕಿವಿ ತುರಿಕೆಯಿಂದಾಗಿ ಕಿವಿಯೊಳಗೆ ಬೆರಳನ್ನು ಹಾಕುವುದು, ಇಲ್ಲವಾದರೆ ಕಡ್ಡಿ, ಪಿನ್ ಹಾಕುತ್ತಾರೆ. ಆದರೆ ಮನೆಯಲ್ಲಿಯೇ ಸರಳವಾದ ಮನೆ ಮದ್ದಿನಿಂದ ಕಿವಿ ತುರಿಕೆಯಂತಹ ಸಮಸ್ಯೆಯೂ ದೂರವಾಗುತ್ತದೆ.
ಸಾಂದರ್ಭಿಕ ಚಿತ್ರ
Follow us on
ದೇಹದ ಸೂಕ್ಷ್ಮವಾದ ಅಂಗಗಳಲ್ಲಿ ಕಿವಿ ಕೂಡ ಒಂದು. ಆದರೆ ಕೆಲವೊಮ್ಮೆ ಏಕಾಏಕಿ ಕಿವಿಯೊಳಗೆ ತುರಿಕೆಯೂ ಕಾಣಿಸಿಕೊಳ್ಳುವುದಿದೆ. ಧೂಳು ಮತ್ತು ಸೋಂಕು ಸೇರಿದಾಗ ತುರಿಕೆಯೂ ಉಂಟಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಪ್ರಾರಂಭದಲ್ಲಿ ಮನೆ ಮದ್ದಿನ ಮೂಲಕ ಪರಿಹಾರವನ್ನು ಕಂಡುಕೊಂಡರೂ ಸಮಸ್ಯೆಯೂ ಗಂಭೀರವಾದರೆ ವೈದ್ಯರನ್ನು ಭೇಟಿಯಾಗುವುದು ಒಳಿತು.
ಕಿವಿ ತುರಿಕೆಗೆ ಸರಳ ಮನೆ ಮದ್ದುಗಳು:
ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಕರಗಿಸಿ ಒಂದೆರಡು ಹಾನಿ ಉಪ್ಪು ನೀರನ್ನು ಕಿವಿಗೆ ಬಿಡಬೇಕು. ಐದು ನಿಮಿಷಗಳ ಬಳಿಕ ತಲೆಯನ್ನು ಬಾಗಿಸಿದರೆ ಕಿವಿಯಲ್ಲಿರುವ ಕೊಳಕು ಹೊರ ಬರುತ್ತದೆ. ಕ್ರಮೇಣವಾಗಿ ಕಿವಿಯ ತುರಿಕೆ ಕಡಿಮೆಯಾಗುತ್ತದೆ.
ಅಲೋವೆರಾದಲ್ಲಿ ಆ್ಯಂಟಿ ಇನ್‌ಫ್ಲಾಮೇಟರಿ ಗುಣವಿದ್ದು. ಹೀಗಾಗಿ ಮೂರು ನಾಲ್ಕು ಹನಿ ಲೋಳೆಸರವನ್ನು ಕಿವಿಗೆ ಬಿಡುವುದರಿಂದ ಪರಿಣಾಮಕಾರಿಯಾಗಿದೆ.
ಬಿಸಿ ಎಣ್ಣೆಯಲ್ಲಿ ಒಂದು ಬೆಳ್ಳುಳ್ಳಿ ಜಜ್ಜಿ ಹಾಕಿ, ನಂತರದಲ್ಲೂ ಈ ಬೆಳ್ಳುಳ್ಳಿಯನ್ನು ಕಿವಿಯ ಹೊರಭಾಗಕ್ಕೆ ಹಚ್ಚಿದರೆ ಕಿವಿ ತುರಿಕೆಯು ನಿವಾರಣೆಯಾಗುತ್ತದೆ.
ಒಂದೆರಡು ಹನಿ ತೆಂಗಿನೆಣ್ಣೆಯನ್ನು ಕಿವಿಯೊಳಗೆ ಬಿಟ್ಟುಕೊಳ್ಳುವುದರಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
ಬಿಳಿ ವಿನೇಗರ್ ಮತ್ತು ನೀರನ್ನು ಸಮ ಪ್ರಮಾಣದಲ್ಲಿ ಸೇರಿಸಿಕೊಂಡು, ಈ ಮಿಶ್ರಣವನ್ನು ಮೂರು ದಿನಗಳ ಕಾಲ ಪ್ರತೀ ದಿನ ಕಿವಿಗೆ ಹಾಕಿಕೊಳ್ಳುವುದರಿಂದ ಕಿವಿ ತುರಿಕೆಯು ಗುಣ ಮುಖವಾಗುತ್ತದೆ.
ಈ ಮನೆ ಮದ್ದನ್ನು ಪ್ರಯತ್ನಿಸುವ ಮುನ್ನ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ