AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Grapes Cleaning Tips: ದ್ರಾಕ್ಷಿ ಹಣ್ಣನ್ನು ಸ್ವಚ್ಛಗೊಳಿಸಲು ಈ ಕ್ರಮಗಳನ್ನು ಅನುಸರಿಸಿ

ಸಾಮಾನ್ಯವಾಗಿ ದ್ರಾಕ್ಷಿ ಹಣ್ಣಿನಲ್ಲಿ ಹೆಚ್ಚಿನ ರಾಸಾಯನಿಕಗಳು, ಕೀಟನಾಶಕಗಳು ಇರುತ್ತವೆ. ಬರೀ ನೀರಿನಿಂದ ತೊಳೆದರೆ ಅಷ್ಟು ಸುಲಭವಾಗಿ ದ್ರಾಕ್ಷಿ ಹಣ್ಣಿನ ಮೇಲೆ ಅಂಟಿರುವ ಈ ಕೀಟನಾಶಕಗಳು ಹೋಗುವುದಿಲ್ಲ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ದ್ರಾಕ್ಷಿ ಹಣ್ಣನ್ನು ಸ್ವಚ್ಛಗೊಳಿಸುವಾಗ ಈ ಸರಿಯಾದ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

Grapes Cleaning Tips: ದ್ರಾಕ್ಷಿ ಹಣ್ಣನ್ನು ಸ್ವಚ್ಛಗೊಳಿಸಲು ಈ ಕ್ರಮಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Jul 12, 2026 | 8:09 PM

Share

ಮುಖ್ಯಾಂಶಗಳು

  • ಬೇರೆ ಹಣ್ಣುಗಳಿಗೆ ಹೋಲಿಸಿದರೆ ದ್ರಾಕ್ಷಿಯಲ್ಲಿ ಹೆಚ್ಚಿನ ಕೀಟನಾಶಕ, ರಾಸಾಯನಿಕಗಳಿರುತ್ತವೆ
  • ದ್ರಾಕ್ಷಿಯನ್ನು ಬರೀ ನೀರಿನಿಂದ ತೊಳೆದರೆ ಅವುಗಳ ಮೇಲೆ ಅಂಟಿರುವ ಕೀಟನಾಶಕಗಳು ಹೋಗುವುದಿಲ್ಲ
  • ದ್ರಾಕ್ಷಿಯನ್ನು ಯಾವಾಗಲೂ ಉಪ್ಪು ನೀರು, ಅಡುಗೆ ಸೋಡಾ, ವಿನೆಗರ್‌ ಬಳಸಿ ಸ್ವಚ್ಛಗೊಳಿಸುವುದು ಉತ್ತಮ

ಇಂದಿನ ಕಾಲದಲ್ಲಿ ಹೆಚ್ಚು ರಾಸಾಯನಿಕ ಮತ್ತು ಕೀಟನಾಶಗಳನ್ನು ಬಳಸಿಯೇ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಲಾಗುತ್ತದೆ. ಅದಕ್ಕಾಗಿಯೇ ಮಾರುಕಟ್ಟೆಯಿಂದ ತಂದಂತಹ ಹಣ್ಣು ಮತ್ತು ತರಕಾರಿಗಳನ್ನು ನೀರಿನಲ್ಲಿ ಸ್ವಚ್ಛಗೊಳಿಸಿಯೇ ಬಳಸಬೇಕು ಎಂದು ತಜ್ಞರು ಸಲಹೆ ನೀಡುವುದು. ಆದರೆ ದ್ರಾಕ್ಷಿ ಹಣ್ಣಿನ (grapes) ವಿಚಾರಕ್ಕೆ ಬಂದ್ರೆ ಇದನ್ನು ಬರೀ ನೀರಿನಿಂದ ತೊಳೆದರೆ ಸಾಕಾಗುವುದಿಲ್ಲ, ಇದನ್ನು ಸ್ವಚ್ಛಗೊಳಿಸಲು ಸರಿಯಾದ ಕ್ರಮಗಳನ್ನು ಪಾಲಿಸಬೇಕಾಗುವುದು ತುಂಬಾನೇ ಮುಖ್ಯ. ಹೌದು ಇದರ ಮೇಲ್ಭಾಗದಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕ, ರಾಸಾಯನಿಕಗಳನ್ನು ಅಂಟಿರುವುದರಿಂದ ಅವನ್ನು ಸಂಪೂರ್ಣವಾಗಿ ಹೋಗಲಾಡಿಸಲು, ದ್ರಾಕ್ಷಿ ಕ್ಲೀನ್‌ ಮಾಡುವ ಸಮಯದಲ್ಲಿ ಈ ಒಂದಷ್ಟು ಕ್ರಮಗಳನ್ನು ಅನುಸರಿಸಬೇಕು.

ದ್ರಾಕ್ಷಿಯಲ್ಲಿ ಹೆಚ್ಚು ಕೀಟನಾಶಕಗಳು ಏಕೆ ಇರುತ್ತವೆ? 

ಬೇರೆ ಹಣ್ಣುಗಳಿಗೆ ಹೋಲಿಸಿದರೆ ದ್ರಾಕ್ಷಿ ಹಣ್ಣಿನಲ್ಲಿ ಹೆಚ್ಚಿನ ಕೀಟನಾಶಕ, ರಾಸಾಯನಿಕಗಳಿರುತ್ತವೆ. ಇದರ ಹಿಂದಿನ ಕಾರಣವೆಂದರೆ ಕೃಷಿಯ ಸಮಯದಲ್ಲಿ ದ್ರಾಕ್ಷಿಗಳಿಗೆ ಕೀಟಗಳು ಹೆಚ್ಚು ಆವರಿಸುತ್ತದೆ, ಅಲ್ಲದೆ ಇವುಗಳಲ್ಲಿ ಶಿಲೀಂಧ್ರಗಳು ಬೆಳೆಯುತ್ತವೆ. ಈ ಸಮಸ್ಯೆಗಳಿಂದ ದ್ರಾಕ್ಷಿಯನ್ನು ಕಾಪಾಡಿಕೊಳ್ಳಲು ಹೆಚ್ಚು ಕೀಟನಾಶಕಗಳನ್ನು ಸಿಂಪಡಿಸಲಾಗುತ್ತದೆ.

ದ್ರಾಕ್ಷಿ ಹಣ್ಣು ತೊಳೆಯುವ ಸರಿಯಾದ ಕ್ರಮ ಯಾವುದು?

ಉಪ್ಪು ನೀರಿನಿಂದ ತೊಳೆಯಿರಿ: ಬರೀ ನೀರಿನ ಬದಲು ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಅದರಲ್ಲಿ ದ್ರಾಕ್ಷಿ ಹಣ್ಣನ್ನು ತೊಳೆಯಿರಿ. ಅದಕ್ಕಾಗಿ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಟೀಚಮಚ ಉಪ್ಪು ಸೇರಿಸಿ ಅದರಲ್ಲಿ ದ್ರಾಕ್ಷಿಯನ್ನು 15 ರಿಂದ 20 ನಿಮಿಷಗಳ ಕಾಲ ನೆನೆಸಿ. ನಂತರ ಅವುಗಳನ್ನು ಮತ್ತೊಮ್ಮೆ ಶುದ್ಧ ನೀರಿನಿಂದ ತೊಳೆಯಿರಿ.ಉಪ್ಪು ನೀರುಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ.

ಅಡುಗೆ ಸೋಡಾ: ದ್ರಾಕ್ಷಿಯಲ್ಲಿ ಅಂಟಿರುವ ರಾಸಾಯನಿಕಗಳನ್ನು ತೆಗೆದುಹಾಕಲು ನೀವು ಅಡುಗೆ ಸೋಡಾವನ್ನು ಬಳಸಬಹುದು. ನೀರಿಗೆ ಅರ್ಧ ಟೀ ಚಮಚ ಅಡಿಗೆ ಸೋಡಾವನ್ನು ಹಾಕಿ, ದ್ರಾಕ್ಷಿಯನ್ನು ಈ ದ್ರಾವಣದಲ್ಲಿ 15 ನಿಮಿಷಗಳ ಕಾಲ ನೆನೆಸಿಡಿ. ನಂತರ ಸ್ವಚ್ಛ ನೀರಿನಿಂದ ತೊಳೆಯಿರಿ. ಈ ವಿಧಾನ ದ್ರಾಕ್ಷಿಯಲ್ಲಿ ಅಂಟಿರುವ ರಾಸಾಯನಿಕ ಮತ್ತು ಕೀಟನಾಶಕಗಳನ್ನು ತೆಗೆದುಹಾಕಲು ತುಂಬಾನೇ ಸಹಕಾರಿ.

ಇದನ್ನೂ ಓದಿ: ಚಹಾ ತಯಾರಿಸುವಾಗ, ಸೇವಿಸುವಾಗ ಮಾಡುವ ಈ ತಪ್ಪುಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು

ಬಿಳಿ ವಿನೆಗರ್: ಬಿಳಿ ವಿನೆಗರ್‌ ಕೂಡ ದ್ರಾಕ್ಷಿಯನ್ನು ಸ್ವಚ್ಛಗೊಳಿಸಲು ಸಹಕಾರಿ. ಒಂದು ಬೌಲ್‌ ನೀರಿಗೆ ಸ್ವಲ್ಪ ವಿನೆಗರ್‌ ಸೇರಿಸಿ ಈ ಮಿಶ್ರಣದಲ್ಲಿ ದ್ರಾಕ್ಷಿಯನ್ನು 10 ರಿಂದ 15 ನಿಮಿಷಗಳ ಕಾಲ ಅದರಲ್ಲಿ ನೆನೆಸಿಡಿ. ನಂತರ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ. ವಿನೆಗರ್  ದ್ರಾಕ್ಷಿಯಲ್ಲಿನ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಮತ್ತು ಅವುಗಳ ಮೇಲ್ಮೈಗೆ ಅಂಟಿಕೊಂಡಿರುವ ಯಾವುದೇ ಕೊಳಕು ಅಥವಾ ಶೇಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಹೀಗೆ ದ್ರಾಕ್ಷಿ ಹಣ್ಣನ್ನು ಚೆನ್ನಾಗಿ ತೊಳೆದ ನಂತರ, ಅವುಗಳನ್ನು ಸ್ವಚ್ಛವಾದ ಹತ್ತಿ ಬಟ್ಟೆ ಅಥವಾ ಟಿಶ್ಯೂ ಪೇಪರ್ ಮೇಲೆ ಹರಡಿ ಒಣಗಲು ಬಿಡಿ. ನಂತರವೇ ಅವುಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ