
ನಮ್ಮಲ್ಲಿ ಬೆಳ್ಳುಳ್ಳಿಯನ್ನು (Garlic) ಪ್ರತಿ ಅಡುಗೆಯಲ್ಲೂ ಬಳಸಲಾಗುತ್ತದೆ. ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಈ ಬೆಳ್ಳುಳ್ಳಿಯನ್ನು ಅಡುಗೆ ಮಾತ್ರವಲ್ಲದೆ ಮನೆ ಮದ್ದುಗಳಲ್ಲೂ (home remedy) ಸಹ ಬಳಸಲಾಗುತ್ತದೆ. ಇದರಲ್ಲಿರುವ ಆಂಟಿಮೈಕ್ರೊಬಿಯಲ್, ಉತ್ಕರ್ಷಣ ನಿರೋಧಕ ಅಂಶ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ6, ವಿಟಮಿನ್ ಸಿ ನಂತಹ ಹಲವು ಪೋಷಕಾಂಶಗಳಿದ್ದು, ಇದು ಹೃದಯದ ಆರೋಗ್ಯಕ್ಕೆ, ಕೆಮ್ಮು ಮತ್ತು ಶೀತ ಸಮಸ್ಯೆಯನ್ನು ನಿವಾರಿಸಲು, ಜೀರ್ಣಾಕ್ರಿಯೆಯ ಸುಧಾರಣೆಗೆ, ರಕ್ತದ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು, ಚರ್ಮದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇಷ್ಟೆಲ್ಲಾ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಬೆಳ್ಳುಳ್ಳಿಯನ್ನು ಹೆಚ್ಚಾಗಿ ಅಡುಗೆಗೆ ಒಗ್ಗರಣೆ ಹಾಕಲು ಬಳಸಲಾಗುತ್ತದೆ. ಅಷ್ಟೇ ಅಲ್ಲದೆ ಇದರಿಂದ ಉಪ್ಪಿನಕಾಯಿಯನ್ನು ಕೂಡಾ ತಯಾರಿಸಬಹುದು. ನಾಲಿಗೆಗೆ ರುಚಿ ಮಾತ್ರವಲ್ಲದೆ, ಆರೋಗ್ಯಕ್ಕೂ ಉತ್ತಮವಾದ ಬೆಳ್ಳುಳ್ಳಿ ಉಪ್ಪಿನಕಾಯಿಯ ಸಿಂಪಲ್ ರೆಸಿಪಿ ಇಲ್ಲಿದೆ.
ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಬೆಳ್ಳುಳ್ಳಿ ಉಪ್ಪಿನಕಾಯಿಯನ್ನು ಮನೆಯಲ್ಲಿಯೇ ಸಿಂಪಲ್ಲಾಗಿ ತಯಾರಿಸಬಹುದು. ಇದಕ್ಕೆ ಬೇಕಾಗಿರುವ ಪದಾರ್ಥಗಳೆಂದರೆ; ¾ ಕಪ್ ಬೆಳ್ಳುಳ್ಳಿ ಎಸಳುಗಳು, 1 ನಿಂಬೆ ಗಾತ್ರದ ಹುಣಸೆಹಣ್ಣು, 3-4 ಚಮಚ ಅಚ್ಚ ಖಾರದ ಪುಡಿ, ¼ ಟೀಸ್ಪೂನ್ ಇಂಗು, ¼ ಟೀಸ್ಪೂನ್ ಅರಶಿನ ಪುಡಿ, ಸ್ವಲ್ಪ ಕರಿಬೇವು, 2-4 ಚಮಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಬೆಲ್ಲ (ಐಚ್ಛಿಕ), 2 ಟೀಸ್ಪೂನ್ ಕೊತ್ತಂಬರಿ ಬೀಜ, 1 ಚಮಚ ಜೀರಿಗೆ, 1 ಚಮಚ ಮೆಂತ್ಯ
ಇದನ್ನೂ ಓದಿ: ಸಿಹಿ ತಿಂಡಿಯಿಂದ ರೇಷ್ಮೆ ಸೀರೆಗಳವರೆಗೆ : ಕರ್ನಾಟಕದ ಈ ಜಿಲ್ಲೆಗಳು ಈ ಕಾರಣಕ್ಕೆ ಫೇಮಸ್ ನೋಡಿ
ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ