Happy Mother’s Day 2026: ಮಮತೆಯ ಮಡಿಲು, ತ್ಯಾಗದ ಒಡಲು; ಇಲ್ಲಿವೆ ಅಮ್ಮಂದಿರ ದಿನದ ಅರ್ಥಪೂರ್ಣ ಶುಭ ಸಂದೇಶಗಳು

ಪ್ರತಿವರ್ಷ ಮೇ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನವು ತಾಯಂದಿರ ಪ್ರೀತಿ, ತ್ಯಾಗ, ನಿಸ್ವಾರ್ಥ ಸೇವೆಯನ್ನು ಗೌರವಿಸಲು ಹಾಗೂ ತಾಯಿಯ ಮೌಲ್ಯವನ್ನು ಜಗತ್ತಿಗೆ ಸಾರಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ನಿಮ್ಮ ಪ್ರೀತಿಯ ಅಮ್ಮನಿಗೆ ಶುಭಾಶಯಗಳನ್ನು ಕೋರಲು ಬಯಸಿದರೆ ನಿಮಗಾಗಿ ಇಲ್ಲಿವೆ ಅರ್ಥಪೂರ್ಣ ಶುಭ ಸಂದೇಶಗಳು.

Happy Mothers Day 2026: ಮಮತೆಯ ಮಡಿಲು, ತ್ಯಾಗದ ಒಡಲು; ಇಲ್ಲಿವೆ ಅಮ್ಮಂದಿರ ದಿನದ ಅರ್ಥಪೂರ್ಣ ಶುಭ ಸಂದೇಶಗಳು
ತಾಯಂದಿರ ದಿನದ ಶುಭಾಶಯಗಳು
Image Credit source: Getty Images

Updated on: May 10, 2026 | 9:51 AM

ಈ ಜಗತ್ತಿನಲ್ಲಿ ತಾಯಿಯ (Mother) ನಿಷ್ಕಲ್ಮಶ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಆಕೆ ತನ್ನ ಕುಟುಂಬ ಮತ್ತು ಮಕ್ಕಳಿಗಾಗಿ ಎಂತಹ ತ್ಯಾಗಕ್ಕೂ ಬೇಕಾದರೂ ಸಿದ್ಧಳಿರುತ್ತಾಳೆ, ತಾನು ನೋವುಂಡರೂ ತನ್ನ ಮಕ್ಕಳಿಗೆ ಬರೀ ಖುಷಿಯನ್ನೇ ಹಂಚುತ್ತಾಳೆ.  ಅದಕ್ಕಾಗಿಯೇ ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎಂದು ಹೇಳುವುದು. ಇಂತಹ ದೈವಸ್ವರೂಪಿ ತಾಯಿಗೆ ಗೌರವವನ್ನು ಸಲ್ಲಿಸಲು ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 10 ಅಂದರೆ ಇಂದು ತಾಯಂದಿರ ದಿನವನ್ನು ಆಚರಿಸಲಾಗುತ್ತಿದ್ದು, ಈ ಶುಭ ಸಂದರ್ಭದಲ್ಲಿ ನಿಮ್ಮ ತಾಯಿಗೆ ಧನ್ಯವಾದ ತಿಳಿಸಲು, ಶುಭಾಶಯವನ್ನು ಕೋರಲು ಬಯಸಿದರೆ, ಇಲ್ಲಿವೆ ನಿಮಗಾಗಿ ಅರ್ಥಪೂರ್ಣ ಶುಭ ಸಂದೇಶಗಳು.

ತಾಯಂದಿರ ದಿನದಂದು ನಿಮ್ಮ ಅಮ್ಮನಿಗೆ ಈ ರೀತಿ ಶುಭಾಶಯ ಕೋರಿ:

  • ಮಮತೆಯ ಮಡಿಲು, ತ್ಯಾಗದ ಒಡಲು ಆಗಿರುವ ದೈವಸ್ವರೂಪಿಯಾದ ಎಲ್ಲಾ ತಾಯಂದಿರಿಗೂ ಮದರ್ಸ್‌ ಡೇ ಶುಭಾಶಯಗಳು.
  • ತಾಯಿ ಪ್ರೀತಿಗಿಂತ ಶ್ರೇಷ್ಠವಾದ ಪ್ರೀತಿಯಿಲ್ಲ, ತಾಯಿಗಿಂತ ದೊಡ್ಡ ದೇವರಿಲ್ಲ. ಎಲ್ಲಾ ತಾಯಂದಿರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.
  • ನನ್ನಿರುವಿಕೆಗೆ ಕಾರಣ ನೀವು, ನನ್ನ ಕನಸುಗಳಿಗೆ ಪ್ರೇರಣೆ ನೀವು, ನಿಮಗೆ ತಾಯಂದಿರ ದಿನದ ಶುಭಾಶಯಗಳು ಅಮ್ಮಾ.
  • ಈ ಜಗತ್ತುನಲ್ಲಿ ಕಣ್ಣಿಗೆ ಕಾಣುವ ದೇವರೆಂದರೆ ಅದು ಅಮ್ಮ… ನನ್ನ ಪಾಲಿನ ಶಕ್ತಿ ದೇವತೆಗೆ ಅಮ್ಮಂದಿರ ದಿನದ ಶುಭಾಶಯಗಳು.
  • ಹ್ಯಾಪಿ ಮದರ್ಸ್‌ ಡೇ, ಕಣ್ಣಿಗೆ ಕಾಣದ ದೇವರಲ್ಲಿ ಭಕ್ತಿ, ನಂಬಿಕೆ ಇಟ್ಟಿರುವಾಗ, ಕಣ್ಣಿಗೆ ಕಾಣುವ ದೇವಯೆ ನೀನು, ನಿನ್ನ ಮೇಲೆ ನನ್ನ ಪ್ರಾಣನೇ ಇಟ್ಟಿರುವೆ ಅಮ್ಮ…
  • ಈ ಪ್ರಪಂಚದಲ್ಲಿ ಒಂದಿಷ್ಟೂ ಸಂದೇಹ ಪಡದೆ ನಂಬಬಹುದಾದ ಜೀವ ಎಂದರೆ ಅದು ನೀವು, ನೀವು ಮಾತ್ರ ಅಮ್ಮಾ… ನಿಮ್ಮ ಪಡೆದ ನಾನೇ ಅದೃಷ್ಟವಂತ. ನನ್ನ ಪಾಲಿನ ಈ ಅದೃಷ್ಟ ದೇವತೆಗೆ ಅಮ್ಮಂದಿರ ದಿನದ ಶುಭಾಶಯಗಳು.
  • ಅತ್ತಾಗ ಕಣ್ಣೀರು ಒರೆಸಿದ ದೇವತೆ, ಬಿದ್ದಾಗ ಎತ್ತಿ ಮುನ್ನಡೆಸಿದ ಮಾತೆ.. ಅಮ್ಮಾ ನಿಮಗೆ ತಾಯಂದಿರ ದಿನದ ಶುಭಾಶಯಗಳು.
  • ಅಮ್ಮನೇ ಅದ್ಭುತ ಪ್ರಪಂಚ. ಅಮ್ಮನ ಪ್ರೀತಿಯೇ ಅಮೃತ, ಎಲ್ಲಾ ಅಮ್ಮಂದಿರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.
  • ನಿಸ್ವಾರ್ಥ ಪ್ರೀತಿ, ನಿರ್ಮಲ ಮನಸ್ಸಿನ ಅಮ್ಮನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಈ ಜಗತ್ತಿನ ಎಲ್ಲಾ ಅಮ್ಮಂದಿರಿಗೂ ತಾಯಂದಿರ ದಿನದ ಶುಭಾಶಯಗಳು.
  • ಪ್ರೀತಿಯಲ್ಲಿ ಆಗಸ, ತಾಳ್ಮೆಯಲ್ಲಿ ಭೂಮಿ, ಮಮಕಾರದಲ್ಲಿ ಕಡಲು ನೀನು. ಹ್ಯಾಪಿ ಮದರ್ಸ್‌ ಡೇ ಅಮ್ಮ.
  • ಅಮ್ಮಾ… ನನೆ ಬದುಕಿನ ಪಾಠ ಕಲಿಸಿದ ಗುರು ನೀವು, ಸರಿ ದಾರಿ ತೋರಿದ ಬೆಳಕು ನೀವು. ನಿಮಗೆ ಅಮ್ಮಂದಿರ ದಿನದ ಶುಭಾಶಯಗಳು.
  • ದೇವರು ನನಗೆ ಕೊಟ್ಟ ಅತಿ ದೊಡ್ಡ ಕೊಡುಗೆ ನೀವು ಅಮ್ಮಾ… ಹ್ಯಾಪಿ ಮದರ್ಸ್‌ ಡೇ
  • ನೀವು ನನಗೆ ಬದುಕು ನೀಡಿದ್ದೀರಿ. ನಾನೆಂದೂ ನಿಮಗೆ ಋಣಿ, ನನ್ನ ಬದುಕು ರೂಪಿಸಿದ ನಿಮಗೆ ಧನ್ಯವಾದ, ನಿಮಗೆ ಅಮ್ಮಂದಿರ ದಿನದ ಶುಭಾಶಯಗಳು.
  • ಅಮ್ಮಾ.. ನೀವೇ ನನ್ನ ಗುರಿ, ನೀವೇ ನನ್ನ ಸ್ನೇಹಿತೆ, ನೀವೇ ನನ್ನ ಬದುಕಿನ ದಾರಿ, ನಿಮಗೆ ಅಮ್ಮಂದಿರ ದಿನದ ಶುಭಾಶಯಗಳು.
  • ಇದು ನಿಮ್ಮ ದಿನ, ನಿಮ್ಮ ತ್ಯಾಗ, ನಿಷ್ಕಲ್ಮಶ ಪ್ರೀತಿ, ಶ್ರಮಕ್ಕೆ ಗೌರವ ಸಲ್ಲಿಸಲು ಇರುವ ದಿನ. ಎಲ್ಲಾ ತಾಯಂದಿರಿಗೂ ಅಮ್ಮಂದಿರ ದಿನದ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us