AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲ ನಡವಳಿಕೆಗಳು ದಾಂಪತ್ಯ ಜೀವನದಲ್ಲಿ ಆಸಕ್ತಿ ಇಲ್ಲ ಎನ್ನುವುದರ ಸೂಚಕ

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಮಹತ್ವದ ಘಟ್ಟ. ಹೀಗಾಗಿ ದಾಂಪತ್ಯ ಜೀವನ ಮಧುರವಾಗಿರಬೇಕೆಂದರೆ ಪತಿ ಪತ್ನಿಯರಿಬ್ಬರೂ ಹೊಂದಿಕೊಂಡು ಹೋಗಬೇಕು. ಸಂಸಾರದಲ್ಲಿ ಪ್ರೀತಿಯ ಜೊತೆಗೆ ಕೋಪ, ಮುನಿಸು, ಭಿನ್ನಾಭಿಪ್ರಾಯಗಳು ಬರುತ್ತದೆ. ಆದರೆ ದಂಪತಿಗಳಿಬ್ಬರೂ ಸಣ್ಣ ಪುಟ್ಟ ಕೋಪ ತಾಪವನ್ನು ದೊಡ್ಡದು ಮಾಡದೇ ಸಂಸಾರವನ್ನು ಸರಿದೂಗಿಸಿಕೊಂಡು ಮುಂದಕ್ಕೆ ಸಾಗಬೇಕು. ಈ ಸಂದರ್ಭದಲ್ಲಿ ಕೆಲವರು ದಾಂಪತ್ಯ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡು ಬಿಡುತ್ತಾರೆ. ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳಾದರೆ ದಾಂಪತ್ಯದಲ್ಲಿ ಬೇಸರಗೊಂಡಿದ್ದೀರಾ ಎನ್ನುವುದು ಸಾರಿ ಹೇಳುತ್ತದೆ.

ಕೆಲ ನಡವಳಿಕೆಗಳು ದಾಂಪತ್ಯ ಜೀವನದಲ್ಲಿ ಆಸಕ್ತಿ ಇಲ್ಲ ಎನ್ನುವುದರ ಸೂಚಕ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jan 27, 2024 | 6:31 PM

Share

ಸಂಸಾರಿಕ ಜೀವನದಲ್ಲಿ ಪ್ರೀತಿಯೊಂದಿದ್ದರೆ ಮಾತ್ರ ಸಾಲುವುದಿಲ್ಲ. ಮದುವೆ ಎಂಬ ಬಂಧನವು ಪ್ರೀತಿ, ಪ್ರೇಮ, ಸ್ನೇಹ, ಜಗಳ, ಕೋಪ, ಭಿನ್ನಾಭಿಪ್ರಾಯಗಳ ಸಮ್ಮಿಲನವಾಗಿದ್ದು, ಈ ಎಲ್ಲವೂ ಸೇರಿದ್ದರೇನೇ ಚಂದ. ಪ್ರತಿಯೊಬ್ಬರ ಜೀವನದಲ್ಲಿಯೂ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ನಾನು ನನ್ನದು ಎನ್ನುವ ಬದಲು ನಾವು ನಮ್ಮದು ಎನ್ನುವುದಾಗುತ್ತದೆ. ಈ ವೇಳೆಯಲ್ಲಿ ತಮ್ಮ ಸುಂದರ ಬದುಕಿಗಾಗಿ ಸತಿ ಪತಿಯರಿಬ್ಬರೂ ಕೆಲವೊಂದು ತ್ಯಾಗ ಮಾಡಲೇ ಬೇಕು. ಆದರೆ ಪ್ರಾರಂಭದಲ್ಲಿ ಎಲ್ಲವು ಚೆನ್ನಾಗಿರುವಂತೆ ಕಂಡರೂ, ವರ್ಷಗಳು ಉರುಳಿದಂತೆ ದಾಂಪತ್ಯ ಜೀವನವು ಬೋರ್ ಅನಿಸಬಹುದು. ಪತಿ ಅಥವಾ ಪತ್ನಿಯೂ ಮಾಡುವ ಯಾವುದೇ ಕೆಲಸವು ಇಷ್ಟವಾಗದಿರಬಹುದು. ಮನಸ್ತಾಪಗಳು ಹೆಚ್ಚಾಗಿ ಯಾವುದರಲ್ಲಿ ಆಸಕ್ತಿಯಿಲ್ಲದ್ದಂತಾಗಬಹುದು. ಹೀಗಾದಾಗ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವುದು ಜಾಣ್ಮೆಯೂ ಇಬ್ಬರಿಗೂ ಇರಬೇಕು.

ದಾಂಪತ್ಯ ಜೀವನದಲ್ಲಿ ಬೇಸರಗೊಂಡಿರುವ ಸೂಚಕಗಳು

* ಯಾವುದೇ ಕೆಲಸದಲ್ಲಿಯು ಆಸಕ್ತಿಯಿಲ್ಲದೇ ಇರುವುದು: ದಾಂಪತ್ಯ ಜೀವನದಲ್ಲಿ ಖುಷಿಯಾಗಿದ್ದರೆ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ. ಆದರೆ ಸಾಂಸಾರಿಕ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡಾಗ ಯಾವ ಕೆಲಸವನ್ನು ಮನಸ್ಸು ಪೂರ್ವಕವಾಗಿ ಮಾಡಲಾಗುವುದಿಲ್ಲ. ಅರೆ ಮನಸ್ಸಿನಿಂದಲೇ ಕೆಲಸವನ್ನು ಮುಗಿಸಿಬಿಡುವುದು. ಇಲ್ಲವಾದರೆ ಮಾಡಿದ ಕೆಲಸದಲ್ಲಿ ಅಚ್ಚುಕಟ್ಟುತನವಿರುವುದಿಲ್ಲ.

* ಸಂಗಾತಿಯ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು : ಸಂಗಾತಿಯು ಏನೇ ಹೇಳಿದರೂ ಅದರಲ್ಲಿ ಒಂದಲ್ಲ ಒಂದು ತಪ್ಪನ್ನು ಹುಡುಕುವುದು. ಅವರ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡು, ಮನಸ್ತಾಪವನ್ನು ಮಾಡಿಕೊಳ್ಳುವುದು.

* ದಾಂಪತ್ಯದಲ್ಲಿ ಸಂವಹನದ ಕೊರತೆ : ದಂಪತಿಗಳ ನಡುವೆ ಮಾತನಾಡಲು ಯಾವುದೇ ಹೊಸ ವಿಷಯಗಳಿರುವುದಿಲ್ಲ. ಒಬ್ಬರಿಗೊಬ್ಬರು ಮಾತನಾಡುವುದೇ ಇಲ್ಲ. ಹೀಗಾಗಿ ಇಬ್ಬರಲ್ಲಿಯು ಸಂವಹನ ಕೊರತೆಯು ಉಂಟಾಗುತ್ತದೆ. ಇದು ದಾಂಪತ್ಯ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದೀರಿ ಎನ್ನುವುದು ಸೂಚಿಸುತ್ತದೆ.

ಇದನ್ನೂ ಓದಿ: ತುಳಸಿ ಎಲೆಯ ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ, ಇಲ್ಲಿದೆ ನೋಡಿ

* ಆತ್ಮೀಯತೆ ಕಡಿಮೆಯಾಗುವುದು : ದೈಹಿಕ ಹಾಗೂ ಭಾವನಾತ್ಮಕ ಆತ್ಮೀಯತೆಯು ಕಡಿಮೆಯಾಗುವುದು ಕೂಡ ಸಂಬಂಧದಲ್ಲಿ ಆಸಕ್ತಿಯಿಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ಸಂಗಾತಿಗೆ ಭಾವನಾತ್ಮಕವಾಗಿ ಯಾವುದೇ ಸ್ಪಂದನೆಯನ್ನು ನೀಡದೆ ಇದ್ದರೆ ಸಂಸಾರವು ಸ್ವಾದವನ್ನು ಕಳೆದುಕೊಳ್ಳುತ್ತದೆ.

* ತನ್ನ ಆಯ್ಕೆಯು ಸರಿ ಇದೆಯೇ ಎನ್ನುವ ಪ್ರಶ್ನೆ : ನಿಮ್ಮ ಎದುರು ನಿಮ್ಮ ಸ್ನೇಹಿತರು ಅವರ ಸಂಗಾತಿಯನ್ನು ಹೊಗಳಿದಾಗ ಸಹಜವಾಗಿ ಹೊಟ್ಟೆ ಕಿಚ್ಚಾಗುವುದು. ತಾನು ಮಾಡಿರುವ ಸಂಗಾತಿಯ ಆಯ್ಕೆಯು ಸರಿಯಾಗಿದೆಯೇ ಎನ್ನುವ ಪ್ರಶ್ನೆಗಳು ಮೂಡುವುದು ದಾಂಪತ್ಯ ಜೀವನದಲ್ಲಿ ಸುಖವಾಗಿಲ್ಲ ಎನ್ನುವುದನ್ನು ತೋರಿಸುವ ಚಿಹ್ನೆಗಳಾಗಿವೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್