ದಿನವೂ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಹೀಗೆಲ್ಲ ಆಗುತ್ತಂತೆ!

ತಣ್ಣೀರಿನ ಸ್ನಾನ ಎಂದಕೂಡಲೆ ನಿಮ್ಮ ಹುಬ್ಬೇರುವುದು ಸಾಮಾನ್ಯ. ಆದರೆ, ಇದರಿಂದ ಚರ್ಮ ಮತ್ತು ಕೂದಲು ಎರಡಕ್ಕೂ ಹಲವು ಪ್ರಯೋಜನಗಳಿವೆ. ತಣ್ಣೀರಿನ ಸ್ನಾನದ ಉಪಯೋಗಗಳ ಬಗ್ಗೆ ಚರ್ಮರೋಗ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ದಿನವೂ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಹೀಗೆಲ್ಲ ಆಗುತ್ತಂತೆ!
ಸ್ನಾನImage Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 18, 2023 | 7:59 PM

ಪ್ರತಿದಿನವೂ ಸ್ನಾನ ಮಾಡುವುದರಿಂದ ನಮ್ಮ ದೇಹ ಸ್ವಚ್ಛಗೊಳ್ಳುವುದು ಮಾತ್ರವಲ್ಲದೆ ಆರೋಗ್ಯವೂ ಚೆನ್ನಾಗಿರುತ್ತದೆ. ನಮ್ಮಲ್ಲಿ ಬಹುತೇಕ ಜನರಿಗೆ ಬಿಸಿ ನೀರಿನ ಸ್ನಾನ ಇಷ್ಟ. ಅದರಲ್ಲೂ ಮಳೆಗಾಲ, ಚಳಿಗಾಲದಲ್ಲಿ ತಣ್ಣೀರಿನ ಸ್ನಾನವನ್ನು ಕಲ್ಪನೆ ಮಾಡಿಕೊಳ್ಳಲು ಕೂಡ ಸಾಧ್ಯವಿಲ್ಲ. ಆದರೆ, ಚರ್ಮರೋಗ ತಜ್ಞರು ಈ ಬಿಸಿನೀರಿನ ಸ್ನಾನದ ಬದಲು ತಣ್ಣೀರಿನ ಸ್ನಾನ ಮಾಡಿದರೆ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳು ಇವೆ ಎಂಬ ಬಗ್ಗೆ ಸಲಹೆ ನೀಡಿದ್ದಾರೆ.

ತಣ್ಣೀರಿನ ಸ್ನಾನ ಎಂದಕೂಡಲೆ ನಿಮ್ಮ ಹುಬ್ಬೇರುವುದು ಸಾಮಾನ್ಯ. ಆದರೆ, ಇದರಿಂದ ಚರ್ಮ ಮತ್ತು ಕೂದಲು ಎರಡಕ್ಕೂ ಹಲವು ಪ್ರಯೋಜನಗಳಿವೆ. ತಣ್ಣೀರಿನ ಸ್ನಾನದ ಉಪಯೋಗಗಳ ಬಗ್ಗೆ ಚರ್ಮರೋಗ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

1. ಚರ್ಮದ ಉರಿಯೂತ ಕಡಿಮೆ ಆಗುತ್ತದೆ. ತಣ್ಣನೆಯ ನೀರು ಹಿತವಾದ ಗುಣಗಳನ್ನು ಹೊಂದಿದೆ. ಇದು ಸೂಕ್ಷ್ಮ ಚರ್ಮದವರಿಗೆ ಸೂಕ್ತವಾದ ಆಯ್ಕೆಯಾಗಿದೆ. ರೊಸಾಸಿಯಂತಹ ಚರ್ಮದ ಸಮಸ್ಯೆ, ಮುಖದಲ್ಲಿ ಕೆಂಪು ಕಲೆ ಉಂಟಾಗುವುದಕ್ಕೆ ತಣ್ಣೀರಿನ ಸ್ನಾನ ಮಾಡಿ ನೋಡಿ.

ಇದನ್ನೂ ಓದಿ: ಚರ್ಮ, ಮುಖದ ಸೌಂದರ್ಯಕ್ಕೆ ಮೊಸರಿನಿಂದ ಆಗುವ 10 ಪ್ರಯೋಜನಗಳಿವು

2. ಚರ್ಮದ ರಂಧ್ರ ಬಿಗಿಯಾಗುತ್ತದೆ. ಉತ್ತಮ ಮೈಬಣ್ಣಕ್ಕಾಗಿ ಹಂಬಲಿಸುವವರಿಗೆ ತಣ್ಣನೆಯ ಸ್ನಾನವು ಪ್ರಯೋಜನಕಾರಿಯಾಗಿದೆ. ತಣ್ಣೀರು ತಾತ್ಕಾಲಿಕವಾಗಿ ರಂಧ್ರಗಳನ್ನು ಬಿಗಿಗೊಳಿಸುವ ಮತ್ತು ಸಂಕುಚಿತಗೊಳಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ.

3. ಹೊಳೆಯುವ, ಆರೋಗ್ಯಕರ ಕೂದಲಿಗೆ ತಣ್ಣೀರಿನ ಸ್ನಾನ ಸಹಕಾರಿ. ಬಿಸಿನೀರು ನಿಮ್ಮ ಕೂದಲಿನ ನೈಸರ್ಗಿಕ ಎಣ್ಣೆಗಳನ್ನು ತೆಗೆದುಹಾಕಬಹುದು. ಆದರೆ ತಣ್ಣೀರು ನಿಮ್ಮ ಕೂದಲಿಗೆ ರಕ್ಷಕನಾಗಿ ಕೆಲಸ ಮಾಡುತ್ತದೆ. ಇದು ಕೂದಲಿನ ಹೊರಪೊರೆಯನ್ನು ಮುಚ್ಚುತ್ತದೆ. ಇದರ ಪರಿಣಾಮವಾಗಿ ಮೃದುವಾದ, ಹೊಳೆಯುವ ಕೂದಲು ನಿಮ್ಮದಾಗುತ್ತದೆ.

4. ತುರಿಕೆ ಕಡಿಮೆಯಾಗುತ್ತದೆ. ತಣ್ಣೀರಿನಿಂದ ಸ್ನಾನ ಮಾಡಿದರೆ ಮೈಯಲ್ಲಿರುವ ತುರಿಕೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅದರಲ್ಲೂ ಎಸ್ಜಿಮಾ ಅಥವಾ ಕೀಟ ಕಡಿತದಂತಹ ಸಮಸ್ಯೆಗಳಿಗೆ ತಣ್ಣೀರಿನ ಸ್ನಾನ ಅತ್ಯುತ್ತಮವಾಗಿದೆ.

5. ನೆತ್ತಿಯ ಆರೋಗ್ಯ ಸುಧಾರಿಸುತ್ತದೆ. ತಣ್ಣನೆಯ ಸ್ನಾನವು ನೆತ್ತಿಯ ಆರೋಗ್ಯಕ್ಕೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಅದು ತುರಿಕೆ ಅಥವಾ ಕಿರಿಕಿರಿಯುಂಟುಮಾಡುವ ನೆತ್ತಿಯನ್ನು ಶಮನಗೊಳಿಸಲು ಮತ್ತು ತಲೆಹೊಟ್ಟನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ, ಒಮ್ಮೆಲೇ ತೀರಾ ತಣ್ಣಗಿನ ಸ್ನಾನ ಮಾಡಬೇಡಿ. ಮೊದಲು ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಂತರ ತಣ್ಣೀರಿನಲ್ಲಿ ಸ್ನಾನ ಮಾಡಿ.

ಇದನ್ನೂ ಓದಿ: ಸ್ನಾನ ಮಾಡಿದ ತಕ್ಷಣ ಬೆವರುತ್ತೀರಾ? ಇದಕ್ಕೆ ಪರಿಹಾರವೇನು?

ಇತ್ತೀಚೆಗೆ ಜನಪ್ರಿಯತೆ ಗಳಿಸುತ್ತಿರುವ ಚಿಕಿತ್ಸೆಯ ಒಂದು ಸಮಗ್ರ ವಿಧಾನವೆಂದರೆ ಜಲಚಿಕಿತ್ಸೆ. ವಾರಕ್ಕೆ 2ರಿಂದ 3 ಬಾರಿ ತಣ್ಣೀರಿನ ಸ್ನಾನವನ್ನು 5 ನಿಮಿಷಗಳವರೆಗೆ ಮಾಡುವುದರಿಂದ ಖಿನ್ನತೆಯ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ಖಿನ್ನತೆಯಿರುವ ಜನರಿಗೆ ಶೀತಲ ಸ್ನಾನವು ಒಂದು ರೀತಿಯ ಸೌಮ್ಯವಾದ ಎಲೆಕ್ಟ್ರೋಶಾಕ್ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸುತ್ತದೆ. ತಣ್ಣೀರು ನಿಮ್ಮ ಮೆದುಳಿಗೆ ಅನೇಕ ವಿದ್ಯುತ್ ಪ್ರಚೋದನೆಗಳನ್ನು ಕಳುಹಿಸುತ್ತದೆ. ಈ ಸಮಯದಲ್ಲಿ ಕೆಲವೊಮ್ಮೆ ಸಂತೋಷದ ಹಾರ್ಮೋನುಗಳು ಎಂದು ಕರೆಯಲ್ಪಡುವ ಎಂಡಾರ್ಫಿನ್​ಗಳು ಸಹ ಬಿಡುಗಡೆಯಾಗುತ್ತವೆ.

ಬೊಜ್ಜು ಹೊಂದಿರುವ ಜನರು ವಾರಕ್ಕೆ 2 ಅಥವಾ 3 ಬಾರಿ ತಣ್ಣನೆಯ ಸ್ನಾನ ಮಾಡುವುದರಿಂದ ಚಯಾಪಚಯವನ್ನು ಹೆಚ್ಚಿಸಲು ಕಾರಣವಾಗಬಹುದು. ಇದು ಕಾಲಾನಂತರದಲ್ಲಿ ಸ್ಥೂಲಕಾಯತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ತಣ್ಣೀರಿನ ಸ್ನಾನವು ಜನರು ತೂಕವನ್ನು ಕಳೆದುಕೊಳ್ಳಲು ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಸಂಶೋಧನೆ ಇನ್ನಷ್ಟು ನಡೆಯಬೇಕಿದೆ. ಒಂದುವೇಳೆ ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ಇತ್ತೀಚಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ ಅಥವಾ ರೋಗನಿರೋಧಕ ಶಕ್ತಿ ಕಡಿಮೆಯಿದ್ದರೆ ತಣ್ಣೀರಿನ ಸ್ನಾನ ಮಾಡಬೇಡಿ. ತಣ್ಣೀರಿನ ಸ್ನಾನದ ಅಭ್ಯಾಸವು ಹೆಚ್ಚಿನ ಜನರಿಗೆ ಪ್ರಯೋಜನಕಾರಿಯಾಗಿದ್ದರೂ, ಅದು ನಮ್ಮ ದೇಹಕ್ಕೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್