Health Tips: ಬಿಳಿ ಮತ್ತು ಕಂದು ಅಕ್ಕಿಯಲ್ಲಿ ಯಾವುದು ಹೆಚ್ಚು ಆರೋಗ್ಯಕರ? ಇಲ್ಲಿದೆ ಆಸಕ್ತಿದಾಯಕ ವಿಷಯ!

ದೇಶದಲ್ಲಿ ಹೆಚ್ಚಿನ ಜನರು ಸರಾಸರಿ ಬಿಳಿ ಅಕ್ಕಿಯನ್ನು ತಿನ್ನುತ್ತಾರೆ. ಆದರೆ ಬಿಳಿ ಅಕ್ಕಿಗೆ ಹೋಲಿಸಿದರೆ ಕಂದು ಅಕ್ಕಿ ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾಗಿಯೇ ಈಗ ಕಂದು ಅಕ್ಕಿಯ ಸೇವನೆ ಹೆಚ್ಚಾಗಿದೆ.

Health Tips: ಬಿಳಿ ಮತ್ತು ಕಂದು ಅಕ್ಕಿಯಲ್ಲಿ ಯಾವುದು ಹೆಚ್ಚು ಆರೋಗ್ಯಕರ? ಇಲ್ಲಿದೆ ಆಸಕ್ತಿದಾಯಕ ವಿಷಯ!
ಕಂದು, ಬಿಳಿ ಅಕ್ಕಿ (ಸಂಗ್ರಹ ಚಿತ್ರ)
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 10, 2022 | 8:00 AM

ಕರೋನಾ ಎನ್ನೋ ಮಹಾಮಾರಿ ಬಂದು ಹೋದ ನಂತರ ನಮ್ಮ ಇಡೀ ಜೀವನವೇ ಬದಲಾಗಿ ಹೋಗಿದೆ. ಆಹಾರ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದೇವೆ. ಜಂಕ್ ಫುಡ್​ನಿಂದ ದೂರವಿದ್ದು, ಪೌಷ್ಠಿಕತೆಯುಕ್ತ ಆಹಾರಗಳನ್ನು ಸೇವಿಸುವುದರ ಬಗ್ಗೆ ಅರಿವು ಹೆಚ್ಚುತ್ತಿದೆ. ಆಹಾರ ಪದ್ಧತಿ ಉತ್ತಮವಾದಷ್ಟೂ ಆರೋಗ್ಯ ಉತ್ತಮ ಎಂಬುದು ನಮಗೆಲ್ಲರಿಗೂ ಗೊತ್ತು. ನಮ್ಮ ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ನಾವುಗಳು ಬಹುತೇಕ ಅನ್ನವನ್ನು ಸೇವಿಸುತ್ತೇವೆ. ಆದರೆ ಪ್ರತಿದಿನ ಸೇವಿಸುವ ಬಿಳಿ ಅಕ್ಕಿಗಿಂತ ಕಂದು ಅಕ್ಕಿ (Brown Rice) ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

ದೇಶದಲ್ಲಿ ಹೆಚ್ಚಿನ ಜನರು ಸರಾಸರಿ ಬಿಳಿ ಅಕ್ಕಿಯನ್ನು ತಿನ್ನುತ್ತಾರೆ. ಆದರೆ ಬಿಳಿ ಅಕ್ಕಿಗೆ ಹೋಲಿಸಿದರೆ ಕಂದು ಅಕ್ಕಿ ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾಗಿಯೇ ಈಗ ಕಂದು ಅಕ್ಕಿಯ ಸೇವನೆ ಹೆಚ್ಚಾಗಿದೆ. ಹೊಟ್ಟು ತೆಗೆದ ನಂತರ ಉಳಿಯುವ ಅಕ್ಕಿಯೇ ಕಂದು ಅಕ್ಕಿ. ಸ್ವಲ್ಪ ಕಂದು ಬಣ್ಣವಿರುವುದರಿಂದ ಬ್ರೌನ್ ರೈಸ್ ಎಂದು ಕರೆಯಲಾಗುತ್ತದೆ. ಅದನ್ನು ಸಂಪೂರ್ಣವಾಗಿ ಪಾಲಿಶ್ ಮಾಡಿದರೆ ಬಿಳಿ ಅಕ್ಕಿ ಉತ್ಪತ್ತಿಯಾಗುತ್ತದೆ. ಈ ಕಂದು ಅಕ್ಕಿಯನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಆ ಕುರಿತು ತಿಳಿದುಕೊಳ್ಳೋಣ.

ಇದು ಸಂಸ್ಕರಿಸದ ಅಕ್ಕಿಯಾಗಿರುವುದರಿಂದ, ಇದು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ಕಂದು ರೈಸ್ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಕಂದು ಅಕ್ಕಿಯಲ್ಲಿರುವ ಫೈಬರ್ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಲಿಗ್ನಾನ್ ದೇಹದಲ್ಲಿನ ಕೊಲೆಸ್ಟ್ರಾಲ್​ನ್ನು ಕಡಿಮೆ ಮಾಡುತ್ತದೆ. ಇದು ಅಧಿಕ ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ.

ಕಂದು ಅಕ್ಕಿಯನ್ನು ತಿನ್ನುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು. ಏಕೆಂದರೆ ಅದು ರಿಫೈನ್ಡ್ ರೈಸ್ ಅಲ್ಲ. ಅದೇ ಬಿಳಿ ಅಕ್ಕಿ ಅಥವಾ ಸಂಸ್ಕರಿಸಿದ ಅಕ್ಕಿಯಲ್ಲಿ ಪೋಷಕಾಂಶಗಳು ಮತ್ತು ನಾರಿನಂಶ ಬಹಳ ಕಡಿಮೆಯಿರುತ್ತದೆ. ಪರಿಣಾಮವಾಗಿ, ದೇಹವು ಕಡಿಮೆ ಪೋಷಕಾಂಶಗಳನ್ನು ಪಡೆಯುತ್ತದೆ. ಕಂದು ಅಕ್ಕಿಯನ್ನು ಬಳಸುವುದರಿಂದ ತೂಕ ನಷ್ಟದಲ್ಲಿ ಪ್ರಮುಖ ಪಾತ್ರ ವಹಿಸುವ ಫೈಬರ್ ಮತ್ತು ಪೋಷಕಾಂಶಗಳನ್ನು ಸಹ ಒದಗಿಸುತ್ತದೆ.

ಜೀವನಶೈಲಿಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್