Healthy Breakfast Recipes : ಬೆಳಗ್ಗಿನ ತಿಂಡಿಗೆ ಸುಲಭವಾಗಿ ಮಾಡಬಹುದಾದ ಆರೋಗ್ಯಕರ ದೋಸೆಗಳು, ಇಲ್ಲಿದೆ ರೆಸಿಪಿ

ಬೆಳಗ್ಗೆ ಏನು ತಿಂಡಿ ಮಾಡೋದು ಎನ್ನುವುದು ಎಲ್ಲರ ಮನೆಯ ಮಹಿಳೆಯರ ಪ್ರಶ್ನೆಯಾಗಿರುತ್ತದೆ. ದಿನಾಲು ದೋಸೆ, ಉಪ್ಪಿಟ್ಟು, ಇಡ್ಲಿ ಹೀಗೆ ಈ ತಿಂಡಿಗಳನ್ನೇ ತಿಂದು ಬೋರ್ ಆಗಿರುತ್ತದೆ. ಹೀಗಾಗಿ ಆರೋಗ್ಯಕ್ಕೆ ಉತ್ತಮವಾಗಿರುವ ರಾಗಿ, ಬಿಟ್ರೋಟ್, ಓಟ್ಸ್ ನಿಂದ ಬಗೆ ಬಗೆಯ ರುಚಿಕರವಾದ ದೋಸೆ ಮಾಡಿದರೆ ಮನೆಯವರಂತೂ ಇಷ್ಟ ಪಟ್ಟು ಸವಿಯುತ್ತಾರೆ. ಹಾಗಾದ್ರೆ ಆರೋಗ್ಯಕರ ವಿವಿಧ ರುಚಿಕರ ದೋಸೆಗಳ ರೆಸಿಪಿಯು ಇಲ್ಲಿದೆ.

Healthy Breakfast Recipes : ಬೆಳಗ್ಗಿನ ತಿಂಡಿಗೆ ಸುಲಭವಾಗಿ ಮಾಡಬಹುದಾದ ಆರೋಗ್ಯಕರ ದೋಸೆಗಳು, ಇಲ್ಲಿದೆ ರೆಸಿಪಿ
ಸಾಂದರ್ಭಿಕ ಚಿತ್ರ ( ದೋಸೆ)
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 26, 2024 | 11:14 AM

ಬೆಳಿಗ್ಗೆ ಬೇಗನೆ ಏಳುವುದು ಇವತ್ತಿನ ತಿಂಡಿ ಏನು ಮಾಡಬೇಕು ಎಂದು ಯೋಚಿಸುವುದು ದೊಡ್ಡ ಕೆಲಸವಾಗಿರುತ್ತದೆ. ಒಂದೇ ಬಗೆಯ ತಿಂಡಿಗಳನ್ನು ಮಾಡಿದರೆ ಮಕ್ಕಳಂತೂ ಮುಟ್ಟಿ ನೋಡುವುದೇ ಇಲ್ಲ. ಹೀಗಾಗಿ ಹೆಂಗಳೆಯರು ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಟ್ರೈ ಮಾಡುತ್ತಿರುತ್ತಾರೆ. ಆದರೆ ಬೆಳಗ್ಗಿನ ವೇಳೆ ಆರೋಗ್ಯಕರ ಮತ್ತು ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದರಿಂದ ದಿನವಿಡಿ ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ. ಹೀಗಾಗಿ ಮುಂಜಾನೆಯ ತಿಂಡಿಗೆ ಈ ಆರೋಗ್ಯಕರವಾದ ವಿವಿಧ ಬಗೆಯ ದೋಸೆಯನ್ನು ಮಾಡಿ ಮನೆ ಮಂದಿಗೆಲ್ಲಾ ನೀಡಬಹುದು.

ರಾಗಿ ದೋಸೆಗೆ ಬೇಕಾಗುವ ಸಾಮಗ್ರಿಗಳು :

* ಮುಕ್ಕಾಲು ಕಪ್ ರಾಗಿ ಹಿಟ್ಟು,

* ಅರ್ಧ ಕಪ್ ಅಕ್ಕಿ ಹಿಟ್ಟು,

* ಕಾಲು ಕಪ್ ರವೆ

* ಮೊಸರು

* ಒಂದು ಚಮಚ ಜೀರಿಗೆ ಪುಡಿ

* ಮೆಣಸಿನ ಪುಡಿ

* ಕರಿಬೇವಿನ ಎಲೆಗಳು

* ಎಣ್ಣೆ

* ಕ್ಯಾರೆಟ್ ತುರಿ

* ಕೊತ್ತಂಬರಿ ಸೊಪ್ಪು

* ಹಸಿಮೆಣಸಿನಕಾಯಿ

* ಉಪ್ಪು

ರಾಗಿ ದೋಸೆ ತಯಾರಿಸುವ ವಿಧಾನ

* ಮೊದಲಿಗೆ ರಾಗಿ ಹಿಟ್ಟು, ಅಕ್ಕಿ ಹಿಟ್ಟು, ರವೆ, ಉಪ್ಪು, ಮೊಸರು ಮತ್ತು ಸಾಕಷ್ಟು ನೀರು ಬೆರೆಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು.

* ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಂಡು ಹದಿನೈದು ನಿಮಿಷಗಳ ಕಾಲ ಹಾಗೆ ಇಡಬೇಕು. ಆ ಬಳಿಕ ಅದಕ್ಕೆ ಜೀರಿಗೆ, ಮೆಣಸಿನ ಪುಡಿ, ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಬೇಕು.

* ಆ ಬಳಿಕ ಒಲೆಯ ಮೇಲೆ ಪ್ಯಾನ್ ಇಟ್ಟು, ಬಿಸಿಯಾದ ಬಳಿಕ ದೋಸೆ ಹಿಟ್ಟನ್ನು ಹೋಯ್ದು, ಸ್ವಲ್ಪ ಎಣ್ಣೆ ಹಾಕಿ ಕಾಯಲು ಬಿಟ್ಟರೆ ರುಚಿಕರವಾದ ರಾಗಿ ದೋಸೆ ಸವಿಯಲು ಸಿದ್ಧ.

ಓಟ್ಸ್ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು

* ಮುಕ್ಕಾಲು ಕಪ್ ರೋಲ್ಲ್ಡ್ ಓಟ್ಸ್

* ಅರ್ಧ ಕಪ್ ಅಕ್ಕಿ ಹಿಟ್ಟು

* ಕಾಲು ಕಪ್ ರವೆ

* ಒಂದು ಚಮಚ ಜೀರಿಗೆ

* ಒಂದು ಚಮಚ ಮೆಣಸಿನ ಪುಡಿ

* ಶುಂಠಿ

* ಒಂದು ಮೆಣಸಿನಕಾಯಿ

* ಸ್ವಲ್ಪ ಕತ್ತರಿಸಿಟ್ಟ ಈರುಳ್ಳಿ

* ಎರಡು ಚಮಚ ಕೊತ್ತಂಬರಿ ಸೊಪ್ಪು

* ಕರಿಬೇವಿನ ಎಲೆಗಳು

* ಎಣ್ಣೆ

* ರುಚಿಗೆ ತಕ್ಕಷ್ಟು ಉಪ್ಪು

* ನೀರು

ಓಟ್ಸ್ ದೋಸೆ ಮಾಡುವ ವಿಧಾನ

* ಒಂದು ಬಾಣಲೆಗೆ ಓಟ್ಸ್ ಅನ್ನು ಹಾಕಿ ಗರಿಗರಿಯಾಗುವವರೆಗೆ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ತಣ್ಣಗಾದ ಬಳಿಕ ಪುಡಿ ಮಾಡಿಕೊಳ್ಳಿ.

* ನಂತರದಲ್ಲಿ ಆ ಪಾತ್ರೆಗೆ ಅಕ್ಕಿ ಹಿಟ್ಟು, ರವಾ, ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಉಂಡೆಯಾಗದಂತೆ ಕಲಸಿಕೊಳ್ಳಿ.

* ಆ ಬಳಿಕ ಇದಕ್ಕೆ ಕತ್ತರಿಸಿಟ್ಟ ಹಸಿಮೆಣಸಿನ ಕಾಯಿ, ಶುಂಠಿ, ಮೆಣಸಿನ ಪುಡಿ, ಜೀರಿಗೆ, ಈರುಳ್ಳಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.

* ಇಪ್ಪತ್ತು ನಿಮಿಷಗಳ ಕಾಲ ಹಿಟ್ಟನ್ನು ಹಾಗೆ ಮುಚ್ಚಿಟ್ಟು, ಆ ಬಳಿಕ ಕಾವಲಿಗೆ ಎಣ್ಣೆ ಹಾಕಿ ದೋಸೆ ಹೋಯ್ದರೆ ಗರಿಗರಿಯಾದ ಓಟ್ಸ್ ದೋಸೆ ಸವಿಯಲು ಸಿದ್ಧ.

ಬೀಟ್ರೂಟ್ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು:

* ಅರ್ಧ ಕಪ್ ತುರಿದಿಟ್ಟ ಬೀಟ್ರೂಟ್

* ಒಂದು ಕಪ್ ಅಕ್ಕಿ ಹಿಟ್ಟು

* ಕಾಲು ಕಪ್ ರವೆ

* ಒಂದು ಈರುಳ್ಳಿ

* ಎರಡು ಮೆಣಸಿನಕಾಯಿ

* ಕೊತ್ತಂಬರಿ ಸೊಪ್ಪು

* ಕರಿಬೇವಿನ ಎಲೆಗಳು

* ಸ್ವಲ್ಪ ಜೀರಿಗೆ

* ಎಣ್ಣೆ

* ನೀರು

* ರುಚಿಗೆ ತಕ್ಕಷ್ಟು ಉಪ್ಪು

ಇದನ್ನೂ ಓದಿ: ಈ ಐದು ಸಂದರ್ಭದಲ್ಲಿ ಅಪ್ಪಿತಪ್ಪಿಯೂ ತೂಕ ಚೆಕ್ ಮಾಡಿಕೊಳ್ಳಬೇಡಿ

ಬೀಟ್ರೂಟ್ ದೋಸೆ ಮಾಡುವ ವಿಧಾನ

* ಮೊದಲು ಮಿಕ್ಸಿ ಜಾರಿಗೆ ಬೀಟ್ರೂಟ್ ನೀರು ಬೆರೆಸಿ ಚೆನ್ನಾಗಿ ರುಬ್ಬಿಕೊಳ್ಳಿ.

* ಆ ಬಳಿಕ ಈ ಬೀಟ್ರೂಟ್ ಮಿಶ್ರಣವನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿಕೊಳ್ಳಿ. ಇದಕ್ಕೆ ಅಕ್ಕಿ ಹಿಟ್ಟು, ರವಾ, ಉಪ್ಪು ಹಾಗೂ ನೀರು ಸೇರಿಸಿ ಚೆನ್ನಾಗಿ ಚೆನ್ನಾಗಿ ಮಿಶ್ರಣ ಮಾಡಿ.

* ನಂತರದಲ್ಲಿ ಕತ್ತರಿಸಿಟ್ಟ ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಎಲೆಗಳು ಮತ್ತು ಜೀರಿಗೆ ಸೇರಿಸಿ ಹತ್ತು ನಿಮಿಷ ಹಾಗೆಯೇ ಬಿಡಿ.

* ತದನಂತರ ಸ್ಟವ್​ ಮೇಲೆ ತವಾ ಇಟ್ಟು, ಬಿಸಿಯಾಗುತ್ತಿದ್ದಂತೆಯೇ ಅದರ ಮೇಲೆ ಹಿಟ್ಟನ್ನು ಹೋಯ್ದು ಎರಡು ಬದಿ ಕಾಯಲು ಬಿಟ್ಟರೆ ಗರಿ ಗರಿಯಾದ ದೋಸೆ ರೆಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ
ಐಶ್ವರ್ಯಾಗೆ ಲೈನ್ ಹೊಡೀತಿದ್ರಾ ಧನರಾಜ್? ಪತ್ನಿಗೆ ಮೂಡಿದೆ ಅನುಮಾನ
ಐಶ್ವರ್ಯಾಗೆ ಲೈನ್ ಹೊಡೀತಿದ್ರಾ ಧನರಾಜ್? ಪತ್ನಿಗೆ ಮೂಡಿದೆ ಅನುಮಾನ