Stressful Situations: ಒತ್ತಡದ ಸಂದರ್ಭಗಳಲ್ಲಿ ನಿಮ್ಮನ್ನು ನೀವು ಶಾಂತಗೊಳಿಸಲು 6 ಸರಳ ಸಲಹೆಗಳು ಇಲ್ಲಿವೆ

ಮನೆ ಮತ್ತು ಕೆಲಸದ ಸ್ಥಳದಲ್ಲಿನ ವಿಷಯಗಳು ಗಮನಾರ್ಹ ಒತ್ತಡವನ್ನು ಉಂಟುಮಾಡಬಹುದು, ಇದು ಆತಂಕ, ಚಡಪಡಿಕೆ ಮತ್ತು ಖಿನ್ನತೆಗೆ ಕಾರಣವಾಗಬಹುದು. ಆದರೆ ಅಂತಹ ಕ್ಷಣಗಳಲ್ಲಿ ಸಂಯಮವನ್ನು ಕಾಪಾಡಿಕೊಳ್ಳುವುದು ಒತ್ತಡದ ಅಡ್ಡಪರಿಣಾಮಗಳನ್ನು ತಡೆಯುತ್ತದೆ. ಒತ್ತಡದ ಸಂದರ್ಭಗಳಲ್ಲಿ ಶಾಂತವಾಗಿರಲು ಕೆಲವು ಸರಳ ಸಲಹೆಗಳು ಇಲ್ಲಿವೆ.

Stressful Situations: ಒತ್ತಡದ ಸಂದರ್ಭಗಳಲ್ಲಿ ನಿಮ್ಮನ್ನು ನೀವು ಶಾಂತಗೊಳಿಸಲು 6 ಸರಳ ಸಲಹೆಗಳು ಇಲ್ಲಿವೆ
Stressful Situations
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Sep 29, 2023 | 6:37 AM

ದಿನನಿತ್ಯ ನೀವು ಹಲವಾರು ರೀತಿಯಲ್ಲಿ ಒತ್ತಡವನ್ನು ಅನುಭವಿಸುತ್ತೀರಿ. ಅದು ನಿಮ್ಮ ಪೋಷಕರು, ಸಂಗಾತಿ ಅಥವಾ ಬಾಸ್ ಜೊತೆ ಭಿನ್ನಾಭಿಪ್ರಾಯವಾಗಿರಬಹುದು, ಹೀಗೆ ಪ್ರತಿಯೊಬ್ಬರಿಗೂ ನೂರೆಂಟು ತಲೆನೋವು ಸಾಮಾನ್ಯ. ನಿಮ್ಮ ಶಾಂತತೆಯನ್ನು ಹೇಗೆ ಕಳೆದುಕೊಳ್ಳುತ್ತೀರಿ ಎಂಬುದೇ ನಿಮ್ಮ ಅರಿವಿಗೆ ಬರುವುದಿಲ್ಲ. ಈ ಸಂದರ್ಭಗಳು ಗಮನಾರ್ಹ ಒತ್ತಡವನ್ನು ಉಂಟುಮಾಡಬಹುದು, ಇದು ನಿಮ್ಮನ್ನು ಆತಂಕ, ಖಿನ್ನತೆ ಅನುಭವಿಸುವಂತೆ ಮಾಡಬಹುದು. ಆದರೆ ಅಂತಹ ಕ್ಷಣಗಳಲ್ಲಿ ಸಂಯಮವನ್ನು ಕಾಪಾಡಿಕೊಳ್ಳುವುದು ಒತ್ತಡದ ಅಡ್ಡಪರಿಣಾಮಗಳನ್ನು ತಡೆಯುತ್ತದೆ. ಆದ್ದರಿಂದ, ಸವಾಲಿನ ಸಮಯದಲ್ಲಿ ನಿಮ್ಮನ್ನು ಹಿಡಿತದಲ್ಲಿಟ್ಟುಕೊಳ್ಳಲು ನೀವು ಅನುಸರಿಸಬಹುದಾದ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.

ಒತ್ತಡದ ಸಂದರ್ಭದಲ್ಲಿ ಶಾಂತವಾಗಿರುವುದು ಏಕೆ ಮುಖ್ಯ?

ಜರ್ನಲ್ ಆಫ್ ಸೈಕಿಯಾಟ್ರಿ ಅಂಡ್ ಮೆಂಟಲ್ ಹೆಲ್ತ್ ಪ್ರಕಾರ, ನಿಮ್ಮ ಕೋಪವನ್ನು ಒಮ್ಮೆಲೆ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಇದು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು. ಹೆಚ್ಚುವರಿಯಾಗಿ, ಇದು ದೇಹದ ಒತ್ತಡದ ಪ್ರತಿಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕಾರ್ಟಿಸೋಲ್ ಹಾರ್ಮೋನಿನ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಒಟ್ಟಾರೆ ಯೋಗಕ್ಷೇಮಕ್ಕೆ ಆರೋಗ್ಯಕರ ಕಾರ್ಟಿಸೋಲ್ ಸಮತೋಲನವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಮತ್ತೊಂದೆಡೆ, ಶಾಂತವಾಗಿರುವುದು ಸ್ಪಷ್ಟ ಚಿಂತನೆ ಮತ್ತು ಪರಿಣಾಮಕಾರಿ ಸಮಸ್ಯೆಗೆ ಪರಿಹಾರವನ್ನು ಉತ್ತೇಜಿಸುತ್ತದೆ.

ಶಾಂತವಾಗಿರುವುದು ಹೇಗೆ?

ಒತ್ತಡದ ಸಂದರ್ಭಗಳಲ್ಲಿ ಶಾಂತವಾಗಿರಲು ನಿಮಗೆ ಸಹಾಯ ಮಾಡುವ 7 ಸಲಹೆಗಳು ಇಲ್ಲಿವೆ:

1. ನಿಮ್ಮ ಉಸಿರಾಟವನ್ನು ನಿಯಂತ್ರಿಸಿ:

ಆತಂಕ ಮತ್ತು ಒತ್ತಡವನ್ನು ನಿಯಂತ್ರಿಸಲು ಉಸಿರಾಟದ ವ್ಯಾಯಾಮಗಳು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ನೀವು ಒತ್ತಡದ ಪರಿಸ್ಥಿತಿಯಲ್ಲಿದ್ದಾಗ, ನಿಮ್ಮನ್ನು ಶಾಂತಗೊಳಿಸಲು ಮತ್ತು ನಿಮ್ಮ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡುವ ರೀತಿಯಲ್ಲಿ ಉಸಿರಾಡಿ. ಆಳವಾದ ಉಸಿರಾಟವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ನಿಮ್ಮ ಉಸಿರನ್ನು 5 ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳಿ, ಮತ್ತು ನಂತರ ಬಿಡುಗಡೆ ಮಾಡಿ. ಇದನ್ನು ಹಲವಾರು ಬಾರಿ ಪುನರಾವರ್ತಿಸಿ. ಇದು ನಿಮಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ.

2. ಪ್ರಾಯೋಗಿಕವಾಗಿರಿ:

ತಾಳ್ಮೆ ಕಳೆದುಕೊಳ್ಳುವುದು ಎಂದಿಗೂ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಇದು ಸಾಮಾನ್ಯವಾಗಿ ವಿಷಯಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ ಮತ್ತು ಪ್ರಾಯೋಗಿಕವಾಗಿರಿ. ನಿಮ್ಮ ಅಭಿಪ್ರಾಯಗಳನ್ನು ಎಂದಿಗೂ ದೊಡ್ಡ ಧ್ವನಿಯಲ್ಲಿ ವ್ಯಕ್ತಪಡಿಸಬೇಡಿ. ಜೋರಾಗಿ ಮಾತನಾಡುವ ವ್ಯಕ್ತಿ ಸೋಲುತ್ತಾನೆ. ನಿಮ್ಮ ಅಭಿಪ್ರಾಯಗಳನ್ನು ನಿಧಾನವಾಗಿ ಮಾತನಾಡಿ. ಈ ರೀತಿ ಮಾತನಾಡುವುದು ಹೆಚ್ಚು ದೃಢ ಮತ್ತು ಪ್ರಾಯೋಗಿಕವಾಗಿದೆ.

3. ನಿಮ್ಮ ಅಭಿಪ್ರಾಯದ ಬಗ್ಗೆ ಯೋಚಿಸಿ:

ತಾಳ್ಮೆ ಕಳೆದುಕೊಳ್ಳುವ ಬದಲು, ಸಿಟ್ಟು ನಿಜವಾಗಿಯೂ ಎಷ್ಟು ಕೆಟ್ಟದು ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. ಕೋಪಗೊಳ್ಳುವ ಬದಲು, ಪರಿಸ್ಥಿತಿಯನ್ನು ಸುಧಾರಿಸಲು ಏನು ಮಾಡಬಹುದು ಎಂಬುದರ ಮೇಲೆ ನಿಮ್ಮ ಶಕ್ತಿಯನ್ನು ಕೇಂದ್ರೀಕರಿಸಿ. ಮನಸ್ಸಿನಲ್ಲಿ ಗೊಂದಲವಿದ್ದಾಗ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಅವಸರ ಮಾಡುವ ಬದಲು, ನಿಧಾನವಾಗಿ ಯೋಚಿಸಿ. ನಿಮ್ಮ ಮಾತುಗಳ ಬಗ್ಗೆ ಹಿಡಿತವಿರಲಿ.

4. ಪ್ರಕೃತಿಯಲ್ಲಿ ಸ್ವಲ್ಪ ಸಮಯ ಕಳೆಯಿರಿ:

ನೀವು ಕೋಪಗೊಂಡಾಗ ಅಥವಾ ಖಿನ್ನತೆಗೆ ಒಳಗಾದಾಗ ಪ್ರಕೃತಿ ನಿಮಗೆ ಮದ್ದಾಗುತ್ತದೆ. ಬಿಡುವಾದಾಗ ಉದ್ಯಾನವನಕ್ಕೆ ಹೋಗಿ. ಪ್ರಕೃತಿಯ ಶಾಂತತೆ ನಿಮ್ಮ ಮೇಲೆ ಪರಿಣಾಮ ಬೀರಬಹುದು. ನೀವು ಆ ತಾಜಾತನವನ್ನು ಅನುಭವಿಸಿದ ತಕ್ಷಣ, ನಿಮ್ಮ ಒತ್ತಡ ಕಡಿಮೆ ಯಾಗುವುದನ್ನು ಅನುಭವಿಸಬಹುದು. ಅಲ್ಲದೆ ಇದು ಏಕಾಗ್ರತೆಗೆ ಸಹಾಯ ಮಾಡುತ್ತದೆ.

5. ನಿಮ್ಮ ದೇಹದ ಮೇಲೆ ಗಮನ ಕೇಂದ್ರೀಕರಿಸಿ:

ನಿಮ್ಮ ಅಂಗೈಗಳನ್ನು ಒಟ್ಟಿಗೆ ತನ್ನಿ. ನಿಮ್ಮ ಹೆಬ್ಬೆರಳುಗಳನ್ನು ನಿಮ್ಮ ಎದೆಯ ಮೇಲೆ ಇರಿಸಿ. ಪ್ರತಿ ಉಸಿರಾಟದೊಂದಿಗೆ ನಿಮ್ಮ ದೇಹದ ಒಂದು ಭಾಗವನ್ನು ವಿಶ್ರಾಂತಿಗೊಳಿಸುವತ್ತ ಗಮನ ಹರಿಸಿ. ನಿಮ್ಮ ಹಣೆಯಿಂದ ಪ್ರಾರಂಭಿಸಿ. ಅಲ್ಲದೆ, ನಿಮ್ಮ ಕೆನ್ನೆಗಳು, ದವಡೆ, ಕುತ್ತಿಗೆ, ಭುಜಗಳು ಇತ್ಯಾದಿಗಳ ಬಗ್ಗೆ ಗಮನ ಹರಿಸಿ.

ಇದನ್ನೂ ಓದಿ: ಈ ಆಹಾರಗಳು ಪುರುಷರ ವೀರ್ಯಾಣುವಿನ ಸಂಖ್ಯೆ ಕಡಿಮೆಗೊಳಿಸುತ್ತವೆ!

6. ಪ್ರಾಮಾಣಿಕರಾಗಿರಿ:

ನೀವು ನಿಮ್ಮ ತಾಳ್ಮೆಯನ್ನು ಕಳೆದುಕೊಳ್ಳಲಿದ್ದೀರಿ ಎಂದು ನಿಮಗೆ ಅನಿಸಿದರೆ, ಸಮಸ್ಯೆಯನ್ನು ಚರ್ಚಿಸುವ ಮೊದಲು ಪರಿಸ್ಥಿತಿಯನ್ನು ನಿಭಾಯಿಸಲು ನಿಮಗೆ ಸಮಯ ಬೇಕು ಎಂದು ಇತರ ವ್ಯಕ್ತಿಗೆ ತಿಳಿಸಿ. ನಿಮ್ಮನ್ನು ಸರಿ ಎಂದು ಭಾವಿಸಬೇಡಿ. ಆ ರೀತಿಯ ಭಾವನೆಯನ್ನು ಆಕ್ರಮಿಸಿಕೊಳ್ಳಲು ಬಿಡಬೇಡಿ. ಇನ್ನೊಂದು ಬದಿಯನ್ನು ಸಹ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಒತ್ತಡಕ್ಕೆ ಮುಜುಗರ ಪಡುವ ಬದಲು ನಂತರ ನೀವು ಹೆಮ್ಮೆ ಪಡಬಹುದಾದ ರೀತಿಯಲ್ಲಿ ಪ್ರತಿಕ್ರಿಯಿಸಿ.

7. ವಿರಾಮ ತೆಗೆದುಕೊಳ್ಳಿ:

ನೀವು ಆಗಾಗ ಒತ್ತಡ ಮತ್ತು ಆತಂಕದ ಪ್ರಸಂಗಗಳನ್ನು ಅನುಭವಿಸುತ್ತಿದ್ದರೆ, ನೀವು ವಿರಾಮ ತೆಗೆದುಕೊಳ್ಳುವುದು ಒಳ್ಳೆಯದು. ವಿರಾಮ ತೆಗೆದುಕೊಳ್ಳುವುದು ನಿಮ್ಮ ಮನಸ್ಸನ್ನು ವಿಶ್ರಾಂತಿಗೊಳಿಸಲು ಮತ್ತು ತಾಜಾತನವನ್ನು ಅನುಭವಿಸಲು ಸಹಾಯ ಮಾಡುತ್ತದೆ. ಇದು ಕೆಲಸದಿಂದ 15 ನಿಮಿಷಗಳ ವಿರಾಮ ಅಥವಾ ದೀರ್ಘ ರಜೆಯಾಗಿರಬಹುದು. ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮಗೆ ಸಂತೋಷವನ್ನು ನೀಡುತ್ತದೆ.

ಈ ಸಲಹೆಗಳಿಗೆ ಬದ್ಧರಾಗಿರಿ, ಮತ್ತು ನಿಮ್ಮ ಕೋಪ ಮತ್ತು ಒತ್ತಡವನ್ನು ನಿಯಂತ್ರಿಸಲು ನೀವು ಒಂದು ಮಾರ್ಗವನ್ನು ಕಂಡುಕೊಳ್ಳುವಿರಿ!

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?