ನಿಮ್ಮ ಮನೆಯಲ್ಲಿ ಜಿರಳೆ, ಇರುವೆಗಳ ಕಾಟವೇ? ಈ ಮನೆಮದ್ದುಗಳನ್ನು ಬಳಸಿ ಸುಲಭವಾಗಿ ಅವುಗಳನ್ನು ಓಡಿಸಿ

| Updated By: ಅಕ್ಷತಾ ವರ್ಕಾಡಿ

Updated on: Dec 01, 2022 | 1:08 PM

ವಿಶೇಷವಾಗಿ ಅಡುಗೆ ಕೋಣೆಯಲ್ಲಿ ಜಿರಳೆಗಳು ಒಡಾಡುವುದ್ದರಿಂದ ಅದು ಆಹಾರ, ಪಾತ್ರೆಗಳನ್ನು ಸ್ಪರ್ಶಿಸುತ್ತವೆ. ಇದರಿಂದಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ನಿಮ್ಮ ಮನೆಯಲ್ಲಿ ಜಿರಳೆ, ಇರುವೆಗಳ ಕಾಟವೇ? ಈ ಮನೆಮದ್ದುಗಳನ್ನು ಬಳಸಿ ಸುಲಭವಾಗಿ ಅವುಗಳನ್ನು  ಓಡಿಸಿ
cockroach killer
Image Credit source: DIY Pest Control Guide
Follow us on

ಮನೆ ಎಷ್ಟೇ ಸ್ವಚ್ಚತೆಯಿಂದಿದ್ದರೂ ಜಿರಳೆ, ಇರುವೆಗಳ ಕಾಟ ಕಡಿಮೆಯಾಗುತ್ತಿಲ್ಲವೇ? ಇದಕ್ಕಾಗಿ ಸಾಕಷ್ಟು ಔಷಧಿಗಳನ್ನು ಹುಡುಕಿದರೂ ಜಿರಳೆಗಳನ್ನು ಮನೆಯಿಂದ ಓಡಿಸಲು ಸಾಧ್ಯವಾಗುತ್ತಿಲ್ಲವೇ? ಆದ್ದರಿಂದ ಯಾವುದೇ ರಾಸಾಯನಿಕಗಳನ್ನು ಬಳಸದೇ ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಉಪಯೋಗಿಸಿ ಸುಲಭವಾಗಿ ಜಿರಳೆಗಳನ್ನು ಓಡಿಸಿ.

ಜಿರಳೆ, ಇರುವೆಗಳು ನಿಮ್ಮ ಮನೆಯ ಮೂಲೆ ಮೂಲೆಗಳಲ್ಲಿ ಕಂಡುಬರುವುದರಿಂದ ನಿಮ್ಮ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ವಿಶೇಷವಾಗಿ ಅಡುಗೆ ಕೋಣೆಯಲ್ಲಿ ಜಿರಳೆಗಳು ಒಡಾಡುವುದ್ದರಿಂದ ಅದು ಆಹಾರ, ಪಾತ್ರೆಗಳನ್ನು ಸ್ಪರ್ಶಿಸುತ್ತವೆ. ಇದರಿಂದಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಮನೆಯಲ್ಲಿಯೇ ಅತ್ಯಂತ ಸುಲಭ ವಿಧಾನದ ಮೂಲಕ ಜಿರಳೆಗಳನ್ನು ಓಡಿಸಲು ಸಾಮಾಜಿಕ ಜಾಲತಾಣದ ಮನೆ ಮದ್ದು ಎಂಬ ಪೇಜ್ ನಲ್ಲಿ ಹಂಚಿಕೊಂಡ ಸುಲಭ ವಿಧಾನವನ್ನೊಮ್ಮೆ ನೋಡಿ.

ಇದನ್ನು ಓದಿ: ನಿಮ್ಮ ಕಣ್ಣಿನ ಡಾರ್ಕ್ ಸರ್ಕಲ್‌ ಕಡಿಮೆಮಾಡಲು ಈ ಸರಳ ಮನೆ ಮದ್ದು ಪ್ರಯತ್ನಿಸಿ

ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ ಮೊದಲಿಗೆ ಒಂದು ಚಿಕ್ಕ ಪಾತ್ರೆ ಅಥವಾ ತಟ್ಟೆ ತೆಗೆದುಕೊಳ್ಳಿ. ನಂತರ ಅದಕ್ಕೆ ಎರಡು ಚಮಚ ಅರಶಿನ ಪುಡಿಯನ್ನು ಹಾಕಿ. ಅದೇ ಪ್ರಮಾಣದಲ್ಲಿ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಎರಡು ಕರ್ಪೂರವನ್ನು ಪುಡಿ ಮಾಡಿ ಹಾಕಿ ಮತ್ತು ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಹೊತ್ತಿನ ನಂತರ ಈ ಮಿಶ್ರಣವನ್ನು ಸ್ಪ್ರೇ ಬಾಟಲ್ ನಲ್ಲಿ ಹಾಕಿ. ಮನೆಯ ಮೂಲೆ ಮೂಲೆಗೆ ಇದನ್ನು ಸ್ಪ್ರೇ ಮಾಡಿ. ಎರಡು ಮೂರು ದಿನಗಳಲ್ಲಿ ನೀವು ಉತ್ತಮ ಫಲಿತಾಂಶವನ್ನು ತಿಳಿಯಬಹುದಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: