Jaundice : ಕಾಮಾಲೆ ಬಂದರೆ ಆತಂಕ ಬೇಡ, ಶೀಘ್ರವಾಗಿ ಗುಣ ಪಡಿಸಿಕೊಳ್ಳುವುದು ಹೇಗೆ?
ಬೇಸಿಗೆ ಆರಂಭವಾಗುತ್ತಿದ್ದಂತೆ ಕಾಡುವ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಎಷ್ಟೇ ಜಾಗರೂಕರಾಗಿದ್ದರೂ ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಯೇ ಹೆಚ್ಚು. ಈ ಸಮಯದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರನ್ನು ಕಾಡುವ ಸಮಸ್ಯೆಗಳಲ್ಲಿ ಕಾಮಾಲೆ ಕೂಡ ಒಂದು. ಕಾಮಾಲೆ ರೋಗವು ನಿಧಾನವಾಗಿ ಉಲ್ಭಣಗೊಳ್ಳುವುದರಿಂದ ಆರಂಭದಲ್ಲಿ ಯಾವುದೇ ಸೂಚನೆಗಳು ಕಾಣಿಸಿಕೊಳ್ಳುವುದಿಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ಜೀವಕ್ಕೆ ಅಪಾಯವಾಗುವ ಸಾಧ್ಯತೆಯೇ ಅಧಿಕ. ಹೀಗಾಗಿ ಆರಂಭಿಕ ಹಳ್ಳಿ ಮದ್ದಿನ ಮೂಲಕ ಈ ರೋಗವನ್ನು ಗುಣಪಡಿಸಿಕೊಳ್ಳಬಹುದಾಗಿದೆ.
ಕಾಮಾಲೆ ಕಣ್ಣಿಗೆ ಕಾಣುವುದಿಲ್ಲ ಹಳದಿಯಂತೆ ಎಂಬ ಮಾತಿದೆ. ಈ ಕಾಮಾಲೆ ರೋಗವು ಕಾಣಿಸಿಕೊಂಡ ವ್ಯಕ್ತಿಯ ದೇಹವು ಸಂಪೂರ್ಣವಾಗಿ ಬಣ್ಣವು ಬದಲಾಗುತ್ತದೆ. ಯಕೃತಿನ ಸೋಂಕಿನಿಂದ ಈ ಆರೋಗ್ಯ ಸಮಸ್ಯೆಯು ಕಾಣಿಸಿಕೊಳ್ಳುತ್ತವೆ. ಜ್ವರ, ಚಳಿ, ತಲೆನೋವು, ಆಯಾಸ, ದೇಹನಿಶ್ಯಕ್ತಿ, ಕೀಲು ನೋವು, ವಾಕರಿಕೆ, ವಾಂತಿ, ಹಸಿವು ಇಲ್ಲದಿರುವುದು, ಹಳದಿ ಬಣ್ಣದಿಂದ ಕೂಡಿದ ಮೂತ್ರ, ಕಣ್ಣು, ಚರ್ಮ, ಉಗುರುಗಳ ಬಣ್ಣದಲ್ಲಿ ಬದಲಾವಣೆಗಳು ಈ ರೋಗದ ಲಕ್ಷಣವಾಗಿರುತ್ತದೆ. ವ್ಯಕ್ತಿಯ ಕಣ್ಣು ಹಳದಿ ಬಣ್ಣಕ್ಕೆ ತಿರುಗಿ ಇರುವುದರಿಂದ ಅವರ ಮುಖ ಹಳದಿಯಾಗಿ ಕಾಣುತ್ತದೆ. ಇದಿಷ್ಟು ಲಕ್ಷಣಗಳು ಕಾಣಿಸಿಕೊಂಡರೆ ಅದು ಕಾಮಾಲೆ ರೋಗ ಎನ್ನುವುದು ಪಕ್ಕಾ ಆಗುತ್ತದೆ. ಈ ಕಾಯಿಲೆಗೆ ಪಥ್ಯದ ಜೊತೆಗೆ ಔಷಧಿಯನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಜೀವಕ್ಕೆ ಅಪಾಯವಾಗುವುದು ಖಚಿತ.
ಕಾಮಾಲೆ ರೋಗಕ್ಕೆ ಉತ್ತಮ ಮನೆಮದ್ದುಗಳು
- ಕಾಮಾಲೆ ರೋಗದಿಂದ ಬಳಲುತ್ತಿರುವವರು ಮೂರು ನಾಲ್ಕು ಲೀಟರ್ ನೀರಿಗೆ ಸ್ವಲ್ಪ ಪ್ರಮಾಣದಲ್ಲಿ ಬಾರ್ಲಿ ಹಾಕಿ ಮೂರು ಗಂಟೆಗಳ ಕಾಲ ಚೆನ್ನಾಗಿ ಕುದಿಸಿ ನಿಯಮಿತವಾಗಿ ಸೇವಿಸಬಹುದಾಗಿದೆ.
- ದೇಹದಲ್ಲಿ ನೀರಿನ ಅಂಶ ಸಾಕಷ್ಟು ಉಳಿಯಲು ನಿಂಬೆಹಣ್ಣು ಮತ್ತು ಮೂಸಂಬಿ ರಸವನ್ನು ಸೇವಿಸಬೇಕು.
- ಕಪ್ಪು ಜೀರಿಗೆಯ ಕಷಾಯ ಮಾಡಿ ಸೇವಿಸುವುದರಿಂದಲೂ ಈ ಕಾಮಾಲೆ ರೋಗವು ನಿವಾರಣೆಯಾಗುತ್ತದೆ.
- ಅರಶಿನ ಕಾಯಿಲೆಯಿರುವವರು ಬೇವಿನ ಸೊಪ್ಪನ್ನು ಜ್ಯೂಸ್ ಮಾಡಿ ಸೇವಿಸುವುದು ಪ್ರಯೋಜನಕಾರಿಯಾಗಿದೆ.
- ತೆಂಗಿನ ನೀರಿನಿಂದ ತಯಾರಿಸಿದ ವಿನೆಗರ್ ಸೇವನೆ ಮಾಡುವುದರಿಂದ ಉರಿಯೂತವನ್ನು ಕಡಿಮೆ ಮಾಡಿ ಯಕೃತ್ತಿನ ಹಾನಿಯ ಅಪಾಯದ ಮಟ್ಟವನ್ನು ತಗ್ಗಿಸುತ್ತದೆ.
- ಒಂದು ಲೋಟ ಕಬ್ಬಿನ ರಸಕ್ಕೆ ನಿಂಬೆ ರಸವನ್ನು ಬೆರೆಸಿ ಕುಡಿಯುವುದು ಪರಿಣಾಮಕಾರಿ ಎನ್ನಬಹುದು.
- ದಿನಕ್ಕೆರಡು ಬಾರಿ ಕಬ್ಬಿನ ರಸವನ್ನು ಕುಡಿಯುವುದರಿಂದ ಕಾಮಾಲೆ ರೋಗವನ್ನು ಶಮನವಾಗುತ್ತದೆ.
- ಕಾಮಾಲೆ ರೋಗದಿಂದ ವೇಗವಾಗಿ ಚೇತರಿಕೆ ಪಡೆಯಬೇಕೆಂದು ಕೊಂಡರೆ ಆಹಾರ ಕ್ರಮದಲ್ಲಿ 3-4 ಬೆಳ್ಳುಳ್ಳಿಯನ್ನು ಸೇರಿಸಿ ಗುಣ ಮುಖ ಕಾಣುತ್ತೀರಿ.
- ನೆಲ್ಲಿಕಾಯಿಯ ಕಷಾಯವು ನಿಯಮಿತವಾಗಿ ಸೇವಿಸುವುದರಿಂದ ಕಾಮಾಲೆರೋಗವು ದೂರವಾಗುತ್ತದೆ.
- ಕಾಫಿ ಮತ್ತು ಗ್ರೀನ್ ಟೀ ಮಿತವಾಗಿ ಸೇವಿಸುವುದರಿಂದ ಲಿವರ್ ನ ಆರೋಗ್ಯವನ್ನು ಸುಧಾರಿಸಿ ರೋಗವನ್ನು ಗುಣ ಪಡಿಸುತ್ತದೆ.
- ದಿನನಿತ್ಯವು ಟೊಮಾಟೋ ತಿರುಳಿನ ರಸಕ್ಕೆ ಉಪ್ಪು ಮತ್ತು ಸಕ್ಕರೆ ಬೆರೆಸಿ ನಿಯಮಿತವಾಗಿ ಸೇವಿಸುತ್ತ ಬಂದರೆ ಕಾಮಾಲೆ ಶೀಘ್ರ ಗುಣವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ