Viral Video: ಬಟ್ಟೆ ಮೇಲಿನ ಶಾಯಿ ಕಲೆ ತೆಗೆಯಲು ಈ ಒಂದು ವಸ್ತು ಬಳಸಿ; ನಿಮಿಷಗಳಲ್ಲಿ ಕಲೆ ಮಾಯ
5ನಿಮಿಷದಲ್ಲಿ ಶಾಯಿ ಕಲೆ ಮಾಯ ಮಾಡುವ ಸಿಂಪಲ್ ಟಿಪ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಚಿಕ್ಕ ಮಗುವಿನ ಶರ್ಟ್ ಒಂದರ ಮೇಲಿನ ಪೆನ್ನಿನ ಗೆರೆಯನ್ನು ಸುಲಭವಾಗಿ ತೆಗೆಯುವುದನ್ನು ಕಾಣಬಹುದು.
ಹೆಚ್ಚಾಗಿ ಮಕ್ಕಳ ಬಟ್ಟೆ ಮೇಲೆ ಪೆನ್ ಗೆರೆಗಳು ಹೆಚ್ಚಾಗಿ ಇರುತ್ತವೆ. ಮಕ್ಕಳ ಬಟ್ಟೆಯನ್ನು ಕಲೆಮುಕ್ತಗೊಳಿಸುವುದು ದೊಡ್ಡ ತಲೆ ನೋವಿನ ಕೆಲಸ. ಆದರೆ ಇನ್ನು ಮುಂದೆ ಚಿಂತಿಸಬೇಕಿಲ್ಲ. ಕೇವಲ ಒಂದೇ ಒಂದು ವಸ್ತು ಬಳಸಿ ಬಟ್ಟೆ ಮೇಲಿನ ಶಾಯಿ ಕಲೆಯನ್ನು ತೆಗೆದುಹಾಕಬಹುದು. ಈ 5ನಿಮಿಷದಲ್ಲಿ ಕಲೆ ಮಾಯ ಮಾಡುವ ಸಿಂಪಲ್ ಟಿಪ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
@priyavijaykitchen ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾರ್ಚ್ 19 ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ 13 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ಚಿಕ್ಕ ಮಗುವಿನ ಶರ್ಟ್ ಒಂದರ ಮೇಲಿನ ಪೆನ್ನಿನ ಗೆರೆಯನ್ನು ಸುಲಭವಾಗಿ ತೆಗೆಯುವುದನ್ನು ಕಾಣಬಹುದು. ಕೇವಲ ಡೆಟಾಲ್ ಒಂದನ್ನು ಬಳಸಿ ಬ್ರಶ್ ಸಹಾಯದಿಂದ 5ನಿಮಿಷದಲ್ಲಿ ಪೆನ್ನಿನ ಗೆರೆ ಕಲೆ ತೆಗೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಮೂರನೇ ಮಗು ಕೂಡ ಹೆಣ್ಣು ಎಂದು ಹೊಲದಲ್ಲಿ ಎಸೆದ ತಾಯಿ, ಮಗುವಿನ ಶವವನ್ನು ಎಳೆದೊಯ್ದ ಬೀದಿ ನಾಯಿಗಳು
ಈ ಸಿಂಪಲ್ ಟಿಪ್ಸ್ನ ವಿಡಿಯೋ ಸಾಮಾಜಿಕ ಜಾಲತಾಣ ಭಾರೀ ವೈರಲ್ ಆಗುತ್ತಿದೆ. ಸಾಕಷ್ಟು ನೆಟ್ಟಿಗರು ವಿಡಿಯೋಗೆ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇದಲ್ಲದೇ 242,383 ಜನರು ವಿಡಿಯೋ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಉಪಯುಕ್ತ ಮಾಹಿತಿ’ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ