
ಯುಗಯುಗಾದಿ ಕಳೆದರೂ ಯುಗಾದಿ (Ugadi) ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ತರುತಿದೆ. ಹೌದು, ಯುಗಾದಿ ಹಿಂದೂಗಳ ಪಾಲಿಗೆ ವರ್ಷದ ಮೊದಲ ಹಬ್ಬವಾಗಿದ್ದು, ನಿನ್ನೆ ಯುಗಾದಿ ಹಬ್ಬವನ್ನು ಬೇವು ಬೆಲ್ಲ ಸವಿದು ಸಂಭ್ರಮಿಸಿದ್ದಾರೆ. ಆದರೆ ಇಂದು ಎಲ್ಲೆಡೆ ಹೊಸ ತೊಡಕು (Hosatodaku) ಸಂಭ್ರಮ ಮನೆ ಮಾಡಿದೆ. ಸಿಹಿ ಕಹಿ ಸವಿದ ಜನರು ಹಬ್ಬದ ಮಾರನೇ ದಿನ ಖಾರದ ಮಾಂಸ ಊಟ ಸವಿಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಹೊಸ ತೊಡಕು ಯುಗಾದಿ ಹಬ್ಬದ ಮರುದಿನ ಆಚರಿಸುವ ಕರ್ನಾಟಕದ ಸಾಂಪ್ರದಾಯಿಕ ಹಬ್ಬ ಇದಾಗಿದೆ. ಕರ್ನಾಟಕದ ಹಲವೆಡೆ ಇದನ್ನು “ವರ್ಷದ ತೊಡಕು” ಅಥವಾ “ಹೊಸತೊಡಕು” ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಹಿಂದೆಲ್ಲಾ ಹಳ್ಳಿಗಳಲ್ಲಿ ಯುಗಾದಿ ಹಬ್ಬದ ಮರುದಿನ ಕಾಡುಗಳಿಗೆ ತೆರಳಿ ಪ್ರಾಣಿಗಳನ್ನು ಬೇಟೆಯಾಡಿ ಮಾಂಸಹಾರ ತಯಾರಿಸಿ, ಮನೆಮಂದಿ, ಊರಜನರು ಒಟ್ಟು ಸೇರಿ ಊಟ ಸವಿದು ಈ ಹಬ್ಬವನ್ನು ಸಂಭ್ರಮಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದ್ದು, ಅಂಗಡಿಗಳಲ್ಲಿ ಮಾಂಸಹಾರ ಖರೀದಿಸಲು ಜನರು ಮುಗಿ ಬೀಳುತ್ತಾರೆ.
ಇದನ್ನೂ ಓದಿ: ಯುಗಾದಿ ಹಬ್ಬದ ಸಂಭ್ರಮ; ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಸಂದೇಶ
ರೈತರು ಕೃಷಿ ಚಟುವಟಿಕೆಗಳ ಆರಂಭಕ್ಕೂ ಮೊದಲು ಈ ಹಬ್ಬವನ್ನು ಕುಟುಂಬಸ್ಥರೊಂದಿಗೆ ಮಾಂಸದೂಟದ ಸವಿದು ಆಚರಿಸುತ್ತಾರೆ. ಈ ದಿನ ಮಟನ್, ಚಿಕನ್ ಇದ್ದು ಬಿಟ್ಟರೆ ಮಾಂಸ ಪ್ರಿಯರಿಗೆ ಸುಗಿಯಿದ್ದಂತೆ. ಸಿಹಿ ಹಾಗೂ ಖಾರಗಳೆರಡು ವರ್ಷ ಪೂರ್ತಿ ದೊರಕಲಿ ಎನ್ನುವುದೇ ಈ ಹಬ್ಬದ ಆಶಯವಾಗಿದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:41 am, Fri, 20 March 26