Pregnancy Tips: ಗರ್ಭಾವಸ್ಥೆಯಿಂದ ಮಗುವಿಗೆ ಜನ್ಮ ನೀಡುವವರೆಗೂ ಮಹಿಳೆಯ ಆರೈಕೆ ಹೇಗಿರಬೇಕು?

| Updated By: ನಯನಾ ರಾಜೀವ್

Updated on: Jun 04, 2022 | 1:13 PM

Health Tips for Pregnant Women: ಮಗುವಿನ ಆಗಮನ ತಂದೆ-ತಾಯಿ, ಹಾಗೂ ಇಡೀ ಕುಟುಂಬದಲ್ಲಿ ಸಂಭ್ರಮವನ್ನೇ ಹೊತ್ತು ತರುತ್ತದೆ. ಮಗು ಹುಟ್ಟಿದ ಐದು ವರ್ಷಗಳ ಕಾಲ ಬಹಳ ಜೋಪಾನದಿಂದ ಆರೈಕೆ ಮಾಡುವುದು ಅತೀ ಮುಖ್ಯ.

Pregnancy Tips: ಗರ್ಭಾವಸ್ಥೆಯಿಂದ ಮಗುವಿಗೆ ಜನ್ಮ ನೀಡುವವರೆಗೂ ಮಹಿಳೆಯ ಆರೈಕೆ ಹೇಗಿರಬೇಕು?
Baby
Follow us on

ಮಗುವಿನ ಆಗಮನ ತಂದೆ-ತಾಯಿ, ಹಾಗೂ ಇಡೀ ಕುಟುಂಬದಲ್ಲಿ ಸಂಭ್ರಮವನ್ನೇ ಹೊತ್ತು ತರುತ್ತದೆ. ಮಗು ಹುಟ್ಟಿದ ಐದು ವರ್ಷಗಳ ಕಾಲ ಬಹಳ ಜೋಪಾನದಿಂದ ಆರೈಕೆ ಮಾಡುವುದು ಅತೀ ಮುಖ್ಯ. ಆ ಅವಧಿಯಲ್ಲಿ ಮಗುವಿನ ಆರೈಕೆಯತ್ತ ಹೆಚ್ಚಿನ ಕಾಳಜಿ ವಹಿಸಬೇಕು. ಮಗುವಿನ ಲಾಲನೆ, ಪಾಲನೆಯಲ್ಲಿ ಕೆಲವೊಂದಿಷ್ಟು ಅಂಶಗಳನ್ನು ತಪ್ಪದೇ ಪಾಲಿಸಬೇಕು. ಅಲ್ಲದೆ ವೈದ್ಯರ ಸೂಕ್ತ ಸಲಹೆ ಪಡೆಯುವುದು ಅಗತ್ಯ.

ಪಾಲಕರು ಮಕ್ಕಳ ಆರೈಕೆಗೆ ಅತಿ ಹೆಚ್ಚಿನ ಗಮನ ನೀಡಬೇಕು. ಸಮಸ್ಯೆ ಕಂಡು ಬಂದಲ್ಲಿ ಉದಾಸೀನ ಮಾಡದೆ ವೈದ್ಯರಲ್ಲಿ ಕರೆದೊಯ್ಯಬೇಕು. ಭಾವೀ ಪ್ರಜೆಗಳನ್ನು ಆರೋಗ್ಯವಂತರನ್ನಾಗಿ ಬೆಳೆಸುವುದು ಕುಟುಂಬಕ್ಕೆ ಅಷ್ಟೇ ಅಲ್ಲ ಸಮಾಜ, ದೇಶದ ಹಿತದೃಷ್ಟಿಯಿಂದಲೂ ಒಳಿತು.

ಗರ್ಭ ಸಂಸ್ಕಾರ, ಗರ್ಭಿಣಿ ಹಾಗೂ ಮಗುವಿನ ಆರೈಕೆ ಹೇಗಿರಬೇಕು ಎಂಬುದರ ಕುರಿತು ಯೋಗ ತಜ್ಞೆ ಕಮಲಾ ಭಾರಧ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ.

ಒಟ್ಟು ಮೂರು ಹಂತಗಳು:
ಗರ್ಭ ಧರಿಸಿದ ಬಳಿಕ 3,6,9 ಹೀಗೆ ಮೂರು ಹಂತಗಳಿರುತ್ತವೆ. ಈ ಸಂದರ್ಭದಲ್ಲಿ ಯಾವ ಆಹಾರ ತೆಗೆದುಕೊಳ್ಳಬೇಕು, ಯಾವ ಆಸನಗಳನ್ನು ಮಾಡಬೇಕು, ಯಾವ ಮುದ್ರೆಯನ್ನು ಮಾಡಬೇಕು, ಧ್ಯಾನ, ಪ್ರಾಣಾಯಾಮ, ಇವುಗಳನ್ನು  ಎಷ್ಟು ಹೊತ್ತು ಮಾಡಬೇಕು, ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಅದರ ಜತೆಗೆ ನ್ಯೂಟ್ರಿಷನ್ ಚಾರ್ಟ್​ ಕೂಡ ಗರ್ಭಿಣಿಯರಿಗೆ ನೀಡಲಾಗುತ್ತದೆ.

ಅವರ ದೇಹ ಪ್ರಕೃತಿಯನ್ನು ಅಧ್ಯಯನ ಮಾಡಲಾಗುತ್ತದೆ, ಯಾಕೆಂದರೆ ಪ್ರತಿಯೊಬ್ಬರು ಬೇರೆ ರೀತಿಯ ದೇಹ ರಚನೆಯನ್ನು ಹೊಂದಿರುತ್ತಾರೆ. ಆಯುರ್ವೇದಲ್ಲಿ ಹೇಳುವುದಾದರೆ ವಾತ, ಪಿತ್ತ, ಕಫ. ಹೀಗೆ ಅವರ ದೇಹ ರಚನೆಯ ಬಗ್ಗೆ ಅಧ್ಯಯನ ಮಾಡಿ ಕಸ್ಟಮೈಸ್ಡ್​ ಡಯಟ್​ ಚಾರ್ಟ್​ ಅನ್ನು ನೀಡಲಾಗುತ್ತದೆ.

ಆಕೆ ಏನು ತಿನ್ನುತ್ತಾಳೆ ಎಂಬುದು ಬಹಳ ಮುಖ್ಯವಾಗುತ್ತದೆ. ಯಾಕೆಂದರೆ ಪೌಷ್ಟಿಕಾಂಶ ಎಂಬುದು ತಾಯಿಯಿಂದ ಮಗುವಿಗೆ ನೇರವಾಗಿ ವರ್ಗಾವಣೆಯಾಗುತ್ತದೆ.

ಗರ್ಭಾವಸ್ಥೆಯಿಂದ ಮಗುವಿಗೆ ಜನ್ಮ ನೀಡುವವರೆಗೂ ಆಕೆ ಉತ್ತಮ ಆಹಾರವನ್ನೇ ಸೇವಿಸಬೇಕಾಗುತ್ತದೆ.

  • ಉತ್ತಮ ಆರೋಗ್ಯ ಸೇವನೆ ಬಹಳ ಮುಖ್ಯ:
  • ಮಗುವಿಗೆ ಜನ್ಮನೀಡಿದ ಬಳಿಕ ತಾಯಿ ಎದೆ ಹಾಲು ಉತ್ತಮವಾಗಿರುತ್ತದೆ.
  • ಕಳೆದುಕೊಂಡ ಶಕ್ತಿಯನ್ನು ಮತ್ತೆ ಪಡೆಯಲು ಸಹಕಾರಿ
  • ಹಾರ್ಮೋನಲ್ ವೇರಿಯೇಷನ್​ಗಳನ್ನು ಸರಿಪಡಿಸಬಹುದು
  • ಮಗು ಹುಟ್ಟಿದ ನಾಲ್ಕು ತಿಂಗಳವರೆಗೆ ಹೆಚ್ಚು ಕಾಳಜಿವಹಿಸುವುದು ಮುಖ್ಯ, ಉತ್ತಮ ಆರೈಕೆ ಮಾಡಿಕೊಂಡರೆ ದೇಹವು ಮೊದಲ ಶೇಫ್​ಗೆ ಬರುವುದಷ್ಟೇ ಅಲ್ಲದೆ, ಮೂಡ್ ಸ್ವಿಂಗ್ ರೀತಿಯ ಮಾನಸಿಕ ಅಸಮತೋಲನಕ್ಕೂ ಆಸ್ಪದವಿರುವುದಿಲ್ಲ.

ಮಕ್ಕಳ ಆರೈಕೆಯ ಮಹತ್ವ
ಮಕ್ಕಳು ತೋಟದಲ್ಲಿರುವ ಹೂವಿನಂತೆ, ಮಕ್ಕಳ ಆರೈಕೆ ಉತ್ತಮವಾಗಿದ್ದರೆ, ಹೂವಿನಂತೆಯೇ ಅವರ ಭವಿಷ್ಯ ಅರಳುತ್ತದೆ. ಹೀಗಾಗಿ ಮಕ್ಕಳ ಎಲ್ಲಾ ವಿಷಯಗಳಲ್ಲಿ ಮೂಗುತೂರಿಸುವುದು ಬಿಟ್ಟು, ದೂರದಿಂದಲೇ ಮಕ್ಕಳ ಮೇಲೆ ನಿಗಾ ಇರಿಸಬೇಕು.
ಮಕ್ಕಳ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಕೂಡ ಕಾಪಾಡುವುದು ಪೋಷಕರ ಕರ್ತವ್ಯವಾಗಿರುತ್ತದೆ. ಮಗು ಹುಟ್ಟಿದ ಬಳಿಕ ಆರೈಕೆ ಮಾಡಿದಂತೆಯೇ ಮಗು ಹೊಟ್ಟೆಯಲ್ಲಿರುವಾಗಿನಿಂದಲೇ ಆರೈಕೆ ಚೆನ್ನಾಗಿರಬೇಕು. ಆಗ ಮಾತ್ರ ಮಗು ಯಾವುದೇ ತೊಂದರೆಯೂ ಇಲ್ಲದೆ ಹುಟ್ಟಲು ಸಾಧ್ಯ.

ಆರೈಕೆಯಲ್ಲಿ ಮೂರು ವಿಧ
ಬಿಫೋರ್ ಕನ್ಸಪ್ಷೆನ್( ಗರ್ಭಧರಿಸುವ ಮೊದಲು)
ಡ್ಯೂರಿಂಗ್ ಕನ್ಸೆಪ್ಷನ್( ಗರ್ಭ ಧರಿಸುವ ಸಮಯ)
ಆಫ್ಟರ್ ಕನ್ಸೆಪ್ಷನ್ (ಗರ್ಭ ಧರಿಸಿದ ಬಳಿಕ)

ಬಿಫೋರ್ ಕನ್ಸೆಪ್ಷನ್: ಅಚಾನಕ್ಕಾಗಿ ಗರ್ಭ ಧರಿಸಬಾರದು, ಎಲ್ಲದಕ್ಕೂ ಪ್ಲ್ಯಾನ್​ ಎಂಬುದು ಮುಖ್ಯವಾಗಿರುತ್ತದೆ.
-ಗರ್ಭ ಧರಿಸುವ ಮೂರು ತಿಂಗಳು ಮುಂಚಿತವಾಗಿ ಆಕ್ಯುಪ್ರೆಷರ್ ಥೆರಪಿಯನ್ನು ತೆಗೆದುಕೊಳ್ಳಬೇಕು
-ಇದರಿಂದ ಹಾರ್ಮೋನ್​ಗಳ ಅಸಮತೋಲನ ಸರಿಯಾಗಿ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿದ್ದರೆ ನಿವಾರಣೆಯಾಗುತ್ತದೆ.

ದಂಪತಿ ಚಿನ್ನ, ಬೆಳ್ಳಿ, ಐರನ್​ಯುಕ್ತ ನೀರನ್ನು ಕುಡಿಯುವುದು:
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲು ಗೋಲ್ಡ್​, ಸಿಲ್ವರ್ ಅಥವಾ ಐರನ್​ಯುಕ್ತ ನೀರನ್ನು ಕುಡಿಯಬೇಕು.

  • ಚಿನ್ನ, ಬೆಳ್ಳಿ ಅಥವಾ ಕಾಪರ್ ನಾಣ್ಯಗಳನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ನಾಲ್ಕು ಲೋಟದಷ್ಟು ನೀರು ಹಾಕಿ ಅದನ್ನು ಎರಡು ಲೋಟಕ್ಕೆ ಬರುವವರೆಗೆ ಕುದಿಸಬೇಕು ಬಳಿಕ ಆ ನೀರು ಕುಡಿಯಬೇಕು.
  • ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ
  • 5-6 ತಿಂಗಳ ಕಾಲ ಸರಿಯಾದ ಸಮಯಕ್ಕೆ ಮುಟ್ಟಾದರೆ ಬಳಿಕ ಗರ್ಭಧರಿಸಬೇಕು
  • ಪಿಸಿಒಡಿ ಅಥವಾ ಪಿಸಿಒಸಿ ತೊಂದರೆ ಇದ್ದವರಿಗೆ ಮೂರರಿಂದ ನಾಲ್ಕು ತಿಂಗಳ ಬಳಿಕ ಗರ್ಭಧರಿಸಿರುವುದು ತಿಳಿಯುತ್ತದೆ.
  • ಹೆರಿಡೆಟರಿ ಸಮಸ್ಯೆಗಳು ಮಗುವಿಗೂ ಬರುವ ಸಾಧ್ಯತೆ ಇರುತ್ತದೆ
  • ದಿನಕ್ಕೆ 4-5 ನಿಮಿಷಗಳ ಕಾಲ ನಾಡಿಯನ್ನು ಒತ್ತಿ ಹಿಡಿಯುವುದರಿಂದ ಫರ್ಟಿಲಿಟಿ ಸುಧಾರಿಸಲಿದೆ.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ  ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ನ್ಯಾಚ್ಯುರಲ್ ಬರ್ಥಿಂಗ್ ಕುರಿತು  ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. astroyoga.co.in ಭೇಟಿ ನೀಡಿ, ಉಚಿತವಾಗಿ ನಿಮ್ಮ ಚಕ್ರಗಳ ಬಗ್ಗೆ ತಿಳಿದುಕೊಳ್ಳಿ

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Fri, 3 June 22