Thecha Curd Rice: ಥೇಚಾ ಮೊಸರನ್ನ ಮಾಡುವುದು ಸುಲಭ, ಇಲ್ಲಿದೆ ನೋಡಿ

ದಕ್ಷಿಣ ಭಾರತದ ಖಾದ್ಯದ ಬಗ್ಗೆ ಯೋಚಿಸಿದ ಕೂಡಲೇ ಮೊದಲು ಮನಸ್ಸಿಗೆ ಬರುವುದು ಮೊಸರನ್ನ. ಇದು ದೇಹಕ್ಕೆ ತಂಪು ಜೊತೆಗೆ ಇದನ್ನು ಸೇವನೆ ಮಾಡಿದ ಮೇಲೆ ಹೊಟ್ಟೆ ಭಾರ ಎನಿಸುವುದಿಲ್ಲ ಹಾಗಾಗಿ ರುಚಿಯ ಜೊತೆಗೆ ಆರೋಗ್ಯಕರ ಎಂದರೆ ತಪ್ಪಾಗುವುದಿಲ್ಲ. ಈಗ ಇದರಲ್ಲಿಯೇ ಹಲವಾರು ವಿಧಗಳಿದ್ದು, ಮೊಸರನ್ನವನ್ನು ಹಲವಾರು ಬಗೆಯಲ್ಲಿ ತಯಾರಿಸಲಾಗುತ್ತದೆ. ಆ ಸಾಲಿಗೆ ಈಗ ಥೇಚಾ ಮೊಸರನ್ನವೂ ಸೇರಿಕೊಂಡಿದೆ. ಏನಿದು? ಹೇಗೆ ಮಾಡುವುದು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

Thecha Curd Rice: ಥೇಚಾ ಮೊಸರನ್ನ ಮಾಡುವುದು ಸುಲಭ, ಇಲ್ಲಿದೆ ನೋಡಿ
ಥೇಚಾ ಮೊಸರನ್ನ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 31, 2024 | 2:29 PM

ಮೊಸರನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕಾಗಲಿ ಯಾವಾಗಲಾದರೂ ಇದನ್ನು ಸೇವನೆ ಮಾಡಬಹುದಾಗಿದ್ದು, ಮೊಸರನ್ನು ಇಷ್ಟ ಪಡುವವರಿಗೆ ಇದಕ್ಕಿಂತ ಮಿಗಿಲಾದ ಮೃಷ್ಟಾನ್ನ ಭೋಜನ ಇರಲು ಸಾಧ್ಯವೇ ಇಲ್ಲ. ದಕ್ಷಿಣ ಭಾರತದ ಖಾದ್ಯದ ಬಗ್ಗೆ ಯೋಚಿಸಿದ ಕೂಡಲೇ ಮೊದಲು ಮನಸ್ಸಿಗೆ ಬರುವುದು ಮೊಸರನ್ನ. ಇದು ದೇಹಕ್ಕೆ ತಂಪು, ಜೊತೆಗೆ ಇದನ್ನು ಸೇವನೆ ಮಾಡಿದ ಮೇಲೆ ಹೊಟ್ಟೆ ಭಾರ ಎನಿಸುವುದಿಲ್ಲ ಹಾಗಾಗಿ ರುಚಿಯ ಜೊತೆಗೆ ಆರೋಗ್ಯಕರ ಎಂದರೆ ತಪ್ಪಾಗುವುದಿಲ್ಲ. ಈಗ ಇದರಲ್ಲಿಯೇ ಹಲವಾರು ವಿಧಗಳಿದ್ದು, ಮೊಸರನ್ನವನ್ನು ಹಲವಾರು ಬಗೆಯಲ್ಲಿ ತಯಾರಿಸಲಾಗುತ್ತದೆ. ಆ ಸಾಲಿಗೆ ಈಗ ಥೇಚಾ ಮೊಸರನ್ನವೂ ಸೇರಿಕೊಂಡಿದೆ. ಏನಿದು? ಹೇಗೆ ಮಾಡುವುದು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಥೇಚಾ ಮೊಸರನ್ನ ಎಂದರೇನು?

ಇತ್ತೀಚಿನ ದಿನಗಳಲ್ಲಿ ಹಲವಾರು ವಿಧವಿಧವಾದ ಪಾಕವಿಧಾನಗಳು ಹೆಚ್ಚಾಗುತ್ತಿದ್ದು ಮೊಸರನ್ನದಲ್ಲಿಯೂ ಈ ಪ್ರಯೋಗ ನಡೆದಿದೆ. ಅದೂ ಅಲ್ಲದೆ ಮೊಸರನ್ನಕ್ಕೆ ಹೊಸ ರುಚಿ ನೀಡುವ ಪ್ರಯತ್ನ ಹಲವು ವರ್ಷಗಳಿಂದಲೂ ನಡೆಯುತ್ತಿದೆ. ಅದರಲ್ಲಿ ಈ ಥೇಚಾ ಮೊಸರನ್ನವೂ ಸೇರಿದೆ. ಈ ಹೆಸರು ನಿಮಗೆ ಬಹಳ ಕುತೂಹಲ ಹುಟ್ಟಿಸಿರಬಹುದು. ಅದೇ ನೀವು, ಮಹಾರಾಷ್ಟ್ರದ ತಿಂಡಿ ತಿನಿಸುಗಳ ಬಗ್ಗೆ ಸ್ವಲ್ಪ ತಿಳಿದವರಾದರೆ ಇದನ್ನು ಹೇಗೆ ಮಾಡುವುದು ಎಂಬುದು ನಿಮಗೆ ಅರಿವಾಗಿರಬಹುದು. ಹಾಗಾದರೆ ಥೇಚಾ ಮೊಸರನ್ನ ಎಂದರೇನು? ಇದೊಂದು ರುಚಿಕರ ಪಾಕವಿಧಾನವಾಗಿದ್ದು, ದಕ್ಷಿಣ ಭಾರತದ ಕೆನೆಯುಕ್ತ ಮೊಸರನ್ನವನ್ನು ಮಹಾರಾಷ್ಟ್ರದ ಸಾಂಪ್ರದಾಯಿಕ ಮೆಣಸಿನಕಾಯಿ- ಬೆಳ್ಳುಳ್ಳಿ ಚಟ್ನಿಯಾದ ಥೇಚಾ ಮಸಾಲೆಯೊಂದಿಗೆ ಸೇರಿಸಿ ಮಾಡುವ ರುಚಿಕರ ತಿಂಡಿಯಾಗಿದೆ.

ಆರೋಗ್ಯ ಪ್ರಯೋಜನಗಳೇನು?

ಈ ಖಾದ್ಯವು ನಿಮ್ಮ ದೇಹಕ್ಕೆ ತಂಪು ನೀಡುವುದಲ್ಲದೆ ಥೇಚಾದ ಮಸಾಲೆಯೊಂದಿಗೆ ಮಹಾರಾಷ್ಟ್ರದ ರುಚಿಯನ್ನು ನೀಡುತ್ತದೆ. ಯಾವುದೇ ಅಡುಗೆ ಇಲ್ಲದಿದ್ದಾಗ ಇದನ್ನು ತ್ವರಿತವಾಗಿ ಮಾಡಿಕೊಳ್ಳಬಹುದಾಗಿದ್ದು. ರುಚಿ ನೀಡುವುದಲ್ಲದೆ ಆರೋಗ್ಯಕರ ಆಯ್ಕೆಯಾಗಿದೆ. ಹಾಗಾದರೆ ಇದರಿಂದ ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ? ಥೇಚಾ ಮೊಸರನ್ನವನ್ನು ವಿಶೇಷವಾಗಿ ತಾಜಾ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಈ ಖಾದ್ಯದಲ್ಲಿ ಬಳಸಲಾಗುವ ಮೊಸರಿನಲ್ಲಿ ಪ್ರೋಬಯಾಟಿಕ್ ಅಂಶವಿದ್ದು, ಇದು ನಿಮ್ಮ ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಅದಲ್ಲದೆ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಗಳು ಸಮೃದ್ಧವಾಗಿದ್ದರೆ, ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಕಡಲೆಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ಹೇರಳವಾಗಿದೆ. ನೀವು ಈ ಎಲ್ಲಾ ಪದಾರ್ಥಗಳನ್ನು ಮಿತವಾಗಿ ಬಳಸುವುದರಿಂದ ಹಸಿವನ್ನು ನೀಗಿಸಿ, ಆರೋಗ್ಯವನ್ನು ಕಾಪಾಡುತ್ತದೆ.

ಇದನ್ನೂ ಓದಿ: ಬೆಳಗ್ಗೆ ಬಿಸಿ ನೀರಿಗೆ ಇದನ್ನು ಬೆರೆಸಿ ಕುಡಿಯಿರಿ; ಪ್ರಯೋಜನ ಸಾಕಷ್ಟಿವೆ

ಇಲ್ಲಿದೆ ಥೇಚಾ ಮೊಸರನ್ನ ರೆಸಿಪಿ;

ಮನೆಯಲ್ಲಿ ಥೇಚಾ ಮೊಸರನ್ನ ತಯಾರಿಸಬಹುದಾಗಿದ್ದು ಈ ಪಾಕ ವಿಧಾನವನ್ನು ಮಹಿಮಾ ಧೂತ್ (@diningwithdhoot) ಎನ್ನುವವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

*ಮೊದಲು ಬಾಣಲೆಯನ್ನು ಬಿಸಿ ಮಾಡಿ, ನಂತರ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಬಿಸಿಯಾದ ನಂತರ, 4 -5 ಬೆಳ್ಳುಳ್ಳಿ ಎಸಳು, 2- 3 ಹಸಿ ಮೆಣಸಿನಕಾಯಿ ಮತ್ತು 1 ಟೀ ಸ್ಪೂನ್ ಜೀರಿಗೆ ಸೇರಿಸಿ. ಪದಾರ್ಥಗಳನ್ನು ಸರಿಯಾಗಿ ಹುರಿದುಕೊಳ್ಳಿ.

*ಬೆಳ್ಳುಳ್ಳಿ ಎಸಳುಗಳು ಚಿನ್ನದ ಬಣ್ಣಕ್ಕೆ ತಿರುಗಿದ ನಂತರ ಬಾಣಲೆಯನ್ನು ಇಳಿಸಿ. 5- 10 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ಬಳಿಕ ಆ ಮಿಶ್ರಣವನ್ನು ತೆಗೆದುಕೊಂಡು ಅದಕ್ಕೆ ಬೆರಳೆಣಿಕೆಯಷ್ಟು ಕೊತ್ತಂಬರಿ ಸೊಪ್ಪು, 1 ಟೀ ಸ್ಪೂನ್ ಉಪ್ಪು ಮತ್ತು ಬೆರಳೆಣಿಕೆಯಷ್ಟು ಹುರಿದ ಕಡಲೆಕಾಯಿ ತೆಗೆದುಕೊಂಡು ಅದನ್ನು ಜಜ್ಜಿ ಒರಟು ಪೇಸ್ಟ್ ಮಾಡಿಕೊಂಡು ಅದನ್ನು ಪಕ್ಕಕ್ಕೆ ಇಡಿ.

*ಒಂದು ಬಟ್ಟಲಿನಲ್ಲಿ, ಒಂದು ಕಪ್ ಅನ್ನ, 1 ಕಪ್ ಮೊಸರು, ಒಂದು ದೊಡ್ಡ ಚಮಚದಲ್ಲಿ ಹಾಲನ್ನು ತೆಗೆದುಕೊಳ್ಳಿ. ತಯಾರಿಸಿಟ್ಟ ಥೇಚಾ ಪೇಸ್ಟ್ ಗೆ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ ಆನಂದಿಸಿ!. ಯಾವುದೇ ಸಮಯದಲ್ಲಿಯಾದರೂ ಶ್ರಮವಿಲ್ಲದ ರುಚಿಕರವಾದ ಊಟ ಮಾಡಲು ಬಯಸಿದರೆ ಈ ಸುಲಭ ಪಾಕವಿಧಾನವನ್ನು ಪ್ರಯತ್ನಿಸಿ!

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ