Ganesha Chaturti 2024 : ಕರಾವಳಿಯಲ್ಲಿ ಪ್ರಕೃತಿಯ ಜೊತೆಗೆ ಬೆಸೆದ ಗಣೇಶನ ಹಬ್ಬ, ಇಲ್ಲಿನ ಆಚರಣೆಯೇ ವಿಭಿನ್ನ

ಗಣೇಶ ಚತುರ್ಥಿ ಹಬ್ಬವು ಭಾದ್ರಪದ ತಿಂಗಳ ಶುಕ್ಲ ಪಕ್ಷದಂದುದಂದು ಆಚರಿಸಲಾಗುತ್ತದೆ. ಈ ಬಾರಿ ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈಗಾಗಲೇ ಹಬ್ಬ ತಯಾರಿ ಜೋರಾಗಿ ನಡೆಯುತ್ತಿದೆ. ಆದರೆ ಕರಾವಳಿ ಜಿಲ್ಲೆಗಳಲ್ಲಿ ಚೌತಿ ಹಬ್ಬವನ್ನು ಪ್ರಕೃತಿ ಜೊತೆಗೆ ಆಚರಿಸುವುದು ವಿಶೇಷವಾಗಿದೆ. ಕರಾವಳಿ ಭಾಗದಲ್ಲಿ ಗಣೇಶನ ಚತುರ್ಥಿ ಹಬ್ಬದ ಆಚರಣೆ ಹೇಗೆ? ಈ ಹಬ್ಬವು ಪ್ರಕೃತಿಯ ಜೊತೆಗೆ ಹೇಗೆ ಬೆಸೆದುಕೊಂಡಿದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Ganesha Chaturti 2024 : ಕರಾವಳಿಯಲ್ಲಿ ಪ್ರಕೃತಿಯ ಜೊತೆಗೆ ಬೆಸೆದ ಗಣೇಶನ ಹಬ್ಬ, ಇಲ್ಲಿನ ಆಚರಣೆಯೇ ವಿಭಿನ್ನ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 31, 2024 | 10:12 AM

ಗಣೇಶ ಚತುರ್ಥಿಯು ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದೆ. ಗಣೇಶ ಚತುರ್ದಶಿ, ವಿನಾಯಕ ಚತುರ್ದಶಿ, ಚೌತಿ ಹೀಗೆ ನಾನಾ ಹೆಸರಿನಿಂದ ಕರೆಯುವ ಈ ಹಬ್ಬವನ್ನು ದೇಶದಾದಂತ್ಯ ಬಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗಣೇಶನ ಹಬ್ಬದ ಆಚರಣೆಯ ರೀತಿಯೇ ಭಿನ್ನ ಎನ್ನಬಹುದು.

ತುಳುನಾಡಿನ ಜನರು ಪ್ರಕೃತಿಯಲ್ಲೇ ದೇವರನ್ನು ಕಾಣುತ್ತಾರೆ. ಹೀಗಾಗಿ ಹೆಚ್ಚಿನವರ ಮನೆಯಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಪದ್ಧತಿಯಿಲ್ಲ. ಕೆಲವರ ಮನೆಯಲ್ಲಿ ಮಾತ್ರ ಗಣೇಶನ ಮೂರ್ತಿ ಇಟ್ಟು ಪೂಜಿಸಲಾಗುತ್ತದೆ. ತುಳುನಾಡಿನಲ್ಲಿ ಗಣೇಶನು ‘ಬಾಮಕುಮಾರ’ನಾಗಿ ಪ್ರಕೃತಿಯ ರೂಪದಲ್ಲಿ ಆವತರಿಸುತ್ತಾನೆ. ಹೀಗಾಗಿ ಕರಾವಳಿಯಲ್ಲಿ ಗಣೇಶ ಚತುರ್ಥಿಯಂದು ಕಬ್ಬುಗಳನ್ನು ಇಟ್ಟು, ಗಣೇಶನನ್ನು ಪೂಜಿಸುವ ಕ್ರಮವು ಇಂದಿಗೂ ಇದೆ.

ಗಣೇಶನ ಹಬ್ಬಕ್ಕೆ ಒಂದು ವಾರವಿರುವಾಗಲೇ ಅರಶಿನ, ಉದ್ದಿನ ಬೇಳೆ, ಹೆಸರು ಕಾಳನ್ನು ತುಳಸಿ ಕಟ್ಟೆಯ ಬಳಿ ಮಣ್ಣು ಅಗೆದು ಹಾಕಿ ಬಿಡುತ್ತಾರೆ. ಮೊಳಕೆ‌ ಒಡೆದ ಈ ಕಾಳುಗಳನ್ನು ಹಬ್ಬದ ದಿನ ಹಬ್ಬದ ದಿನ ಬಾಳೆ ಗಿಡದ ಹಗ್ಗದಲ್ಲಿ ಕಟ್ಟಿ ಮಾಲೆ ರೀತಿ ಮಾಡಿ, ಈ ಹೂವನ್ನು ಇಟ್ಟು ಪೂಜಿಸುವ ಪದ್ಧತಿಯೂ ಇದೆ. ಗಣಪತಿಗೆ ಉಪ್ಪು ಹಾಕದ ಉದ್ದಿನ ದೋಸೆ ಹಾಗೂ ಪಂಚಕಜ್ಜಾಯವನ್ನು ನೈವೇದ್ಯವಾಗಿ ಇಡಲಾಗುತ್ತದೆ. ಈ ಮೂಲಕ ತುಳುನಾಡಿನಲ್ಲಿ ಗಣಪತಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಗಣೇಶನಿಗೆ ಬಲುಪ್ರಿಯ ಈ ಮೋದಕ, ಮಾಡೋದು ಹೇಗೆ?

ಗಣೇಶನ ಹಬ್ಬದಂದು ತೆನೆ ಹಬ್ಬದ ಸಂಭ್ರಮ

ದಕ್ಷಿಣ ಕನ್ನಡ ಹಾಗೂ ಜಿಲ್ಲೆಯಲ್ಲಿ ಕೆಲವೆಡೆ ಗಣೇಶ ಚತುರ್ಥಿಗೆ ತೆನೆ ಹಬ್ಬವನ್ನು ಆಚರಿಸುತ್ತಾರೆ. ಹೊಸ ತೆನೆಯಲ್ಲಿ ಊಟ ಮಾಡುವ ಈ ಹಬ್ಬವನ್ನು ಆಚರಿಸಲು ಪುದ್ದರ್ ಎಂಬ ಹಬ್ಬವಿದ್ದರೂ ಕೂಡ ಚೌತಿಯಂದೇ ಆಚರಿಸುವ ಪದ್ಧತಿಯೂ ಇದೆ. ಕೃಷಿಕ ಕುಟುಂಬದವರಾಗಿದ್ದರೆ ಅವರ ಗದ್ದೆಯಲ್ಲಿ ಬೆಳೆದ ತೆನೆಯನ್ನು ಮನೆಗೆ ತಂದು ಪೂಜೆ ಮಾಡಲಾಗುತ್ತದೆ.

ಸಾರ್ವಜನಿಕ ಗಣೇಶೋತ್ಸವದ ಸ್ಥಳದಲ್ಲಿ ಅಥವಾ ದೇವಸ್ಥಾನಗಳಲ್ಲಿ ಭಕ್ತರಿಗೆ ತೆನೆಯನ್ನು ವಿತರಿಸಲಾಗುತ್ತದೆ. ಕೃಷಿ ಭೂಮಿಯಿಲ್ಲದವರು ದೇವಸ್ಥಾನಗಳಲ್ಲಿ ವಿತರಿಸಲಾಗುವ ತೆನೆಯನ್ನು ತಂದು ಮನೆಯಲ್ಲಿರುವ ದೇವರ ಕೋಣೆ, ತುಳಸಿ ಕಟ್ಟೆ, ತೆಂಗಿನ ಮರ, ನೊಗನೇಗಿಲು ಹಾಗೂ ಪೀಠೋಪಕರಣಗಳಿಗೆ ಕಟ್ಟುತ್ತಾರೆ. ಈ ದಿನದಂದು ಹೊಸ ಅಕ್ಕಿ ಊಟ ಮಾಡುವ ಪದ್ಧತಿಯೂ ಇದೆ. ಅದಲ್ಲದೇ ಹಲವಾರು ಬಗೆಯ ಪಲ್ಯಗಳೊಂದಿಗೆ ಹಬ್ಬದ ಅಡುಗೆಯನ್ನು ಮಾಡಿಡಿ ಮನೆ ಮಂದಿಯೆಲ್ಲಾ ಸವಿಯುತ್ತಾರೆ.

ಗಣೇಶ ಚತುರ್ಥಿ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ